ಮಳೆಗಾಲದಲ್ಲಿ ಸಂಜೆ ಟೀ ಜತೆ ಸವಿಯಲು ಎಣ್ಣೆಯಲ್ಲಿ ಕರಿದ ತಿಂಡಿಗಳು ತುಂಬಾ ಇಷ್ಟವಾಗುವುದು. ಇಲ್ಲಿ ನಾವು ಮೆಂತೆ ಪಕೋಡ ರೆಸಿಪಿ ನೀಡಿದ್ದೇವೆ ನೋಡಿ:
ಬೇಕಾಗುವ ಸಾಮಗ್ರಿ
1/4 ಮೆಂತೆ ಸೊಪ್ಪು
3/4 ಕಪ್ ಕಡಲೆಹಿಟ್ಟು
1/4 ಕಪ್ ನೀರು
1 ಈರುಳ್ಳಿ (ಚಿಕ್ಕದಾಗಿ ಕತ್ತರಿಸಿ)
2 ಹಸಿ ಮೆಣಸು
ಚಿಟಿಕೆಯಷ್ಟು ಅರಿಶಿಣ
ಚಿಟಿಕೆಯಷ್ಟು ಅಡುಗೆ ಸೋಡಾ
ಚಿಟಿಕೆಯಷ್ಟು ಇಂಗು
ಸ್ವಲ್ಪ ಶುಂಠಿ (ಪೇಸ್ಟ್ ಒಳ್ಳೆಯದು)
ರುಚಿಗೆ ತಕ್ಕ ಉಪ್ಪು
ಫ್ರೈ ಮಾಡಲು ಎಣ್ಣೆ
ಮಾಡುವ ವಿಧಾನ:
* ಮೆಂತೆ ಸೊಪ್ಪನ್ನು ಸ್ವಚ್ಛಮಾಡಿ ಒಂದು ಬೌಲ್ಗೆ ಹಾಕಿ ಅದಕ್ಕೆ ಉಳಿದ ಸಾಮಗ್ರಿ ಹಾಕಿ ಮಿಕ್ಸ್ ಮಾಡಿ 5 ನಿಮಿಷ ಇಡಿ.
* ಪ್ಯಾನ್ ಬಿಸಿ ಮಾಡಿ ಎಣ್ಣೆ ಹಾಕಿ, ಎಣ್ಣೆ ಕುದಿಯಲಾರಂಭಿಸಿದಾಗ ಹಿಟ್ಟನ್ನು ಎಣ್ಣೆಯಲ್ಲಿ ಬಿಡಿ, ಅದು ಸ್ವಲ್ಪ ಕಂದು ಬಣ್ಣಕ್ಕೆ ಬರುವಾಗ ತೆಗೆಯಿರಿ.
ರೆಡಿಯಾದ ಪಕೋಡವನ್ನು ಟೀ ಜತೆ ಸವಿಯಿರಿ.