ದೇಶದಲ್ಲಿ ಬೇಡಿಕೆಯಷ್ಟು ಕಾಳುಮೆಣಸು ಪೂರೈಕೆ ಇಲ್ಲದೆ ಇರುವುದರಿಂದ ದಿನದಿಂದ ದಿನಕ್ಕೆ ದರ ಏರಿಕೆ ಕಾಣುತ್ತಿದೆ. ಕಳೆದ 10 ದಿನಗಳಲ್ಲಿ ಪ್ರತಿ ಕೆಜಿ ಗಾರ್ಬಲ್ಡ್ ಕಾಳುಮೆಣಸು ಧಾರಣೆ 16 ರೂ. ಹೆಚ್ಚಿದೆ. ಸೋಮವಾರ ಪ್ರತಿ ಕೆಜಿ ಗಾರ್ಬಲ್ಡ್ ಕಾಳುಮೆಣಸು ದರ 588 ರೂ. ಹಾಗೂ ಅನ್ ಗಾರ್ಬಲ್ಡ್ ದರ 568 ರೂ.ಗೆ ತಲುಪಿದೆ.
ಚಿಕ್ಕಮಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಂತೂ ಧಾರಣೆಯು ಕ್ವಿಂಟಾಲ್ಗೆ 88,000 ರೂಪಾಯಿ ಆಗಿದ್ದು ಬೆಳೆಗಾರರ ಮೊಗದಲ್ಲಿ ಮಂದಹಾಸ ಮೂಡಿಸಿದೆ. ಮಲೆನಾಡ ಚಿಕ್ಕಮಗಳೂರು ಭಾಗಕ್ಕೆ ಶಿರಸಿ ಹಾಗೂ ಸುತ್ತಮುತ್ತಲಿಂದ ಆಮದು ಮಾಡಿಕೊಳ್ಳಲಾಗುತ್ತಿದೆ.
8-10 ವಿಧದ ಕಾಳುಮೆಣಸು ಇವರಲ್ಲಿ ಇವೆ ಅದರಲ್ಲಿ ಪಣಿಯೂರು-1, ಪಣಿಯೂರು-2, ನೀಲಮುಂಡಿ, ಶ್ರೀಕರ, ಶುಭಕರ ಸೇರಿದಂತೆ ಹಲವು ವಿಧದ ಕಾಳುಮೆಣಸು ಇವರಲ್ಲಿವೆ, ಕೇವಲ 1000 ಬಳ್ಳಿಗಳನ್ನು ಹೊಂದಿರುವ ಇವರು ಪ್ರತೀ ವರ್ಷ ಬರೊಬ್ಬರಿ 2.5 ಟನ್ ನಷ್ಟು ಇಳುವರಿಯನ್ನು ಪಡೆಯುತ್ತಿದ್ದಾರೆ.
ಜೂನ್ ತಿಂಗಳಲ್ಲಿ ಟ್ರೆಂಚಿಂಗ್ ಮಾಡಿ ಲೈಟೆಕ್ಸ್ ಹಾಕಿ ನಂತರ ಪ್ಲ್ಯಾಸ್ಟಿಕ್ ಹೊದಿಕೆ ಹಾಕಿಡುವ ಕಾರಣ ಭಾರೀ ಮಳೆಯಲ್ಲೂ ಭರ್ಜರಿ ಫಸಲು ದೊರಕುತ್ತಿದೆ. 6 ಲಕ್ಷ ಖರ್ಚಿಗೆ ಸದ್ಯದ ಮಟ್ಟಿಗೆ 15 ರಿಂದ 20 ಲಕ್ಷ ವಹಿವಾಟು ನಡೆಸುವ ನಿರೀಕ್ಷೆಯಲ್ಲಿದ್ದಾರೆ. ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ದೇಶದಲ್ಲಿ ಕಾಳುಮೆಣಸಿನ ಬಳಕೆ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿದೆ
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಪ್ರತಿ ಟನ್ ಭಾರತದ ಕಾಳುಮೆಣಸಿಗೆ 7,250 ಡಾಲರ್ ಇದೆ. ವಿಯೆಟ್ನಾಂ ಕಾಳುಮೆಣಸಿಗೆ 4,600 ಡಾಲರ್, ಬ್ರೆಜಿಲ್ ಕಾಳುಮೆಣಸಿಗೆ 4,300 ಡಾಲರ್ ಮತ್ತು ಶ್ರೀಲಂಕಾದ ಕಾಳುಮೆಣಸಿಗೆ 6,200 ಡಾಲರ್, ಇಂಡೋನೇಷ್ಯಾದ ಕಾಳುಮೆಣಸಿಗೆ 5,000 ಡಾಲರ್ ಬೆಲೆ ಇದೆ.