ಕಲ್ಯಾಣ ಭಾಗದಲ್ಲಿರುವ 18 ಹೊಸ ತಾಲೂಕುಗಳಲ್ಲಿ ಮಿನಿ ವಿಧಾನಸೌಧ ನಿರ್ಮಿಸಲು ಸಭೆಯಲ್ಲಿ ತೀರ್ಮಾನ ಮಾಡ ಲಾಗಿದೆ ಅಂತ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಹೇಳಿದ್ದಾರೆ.. ಕಲಬುರ ಗಿಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅಜಯ್ ಸಿಂಗ್ 15 ಕೋಟಿ ರೂಪಾಯಿ ವೆಚ್ಚದಲ್ಲಿ ಮಿನಿವಿಧಾನ ಸೌಧ ನಿರ್ಮಿಸಿದ್ದಾರೆ..
ಯಡ್ರಾಮಿ ಶಾಹಾಬಾದ್ ಸೇರಿ ಕಲ್ಯಾಣದಲ್ಲಿ ಒಟ್ಟು 18 ಹೊಸ ತಾಲೂಕುಗಳಿವೆ.. ನೂತನ ತಾಲೂಕು ರಚನೆಯಾಗಿ 7 ವರ್ಷ ಕಳೆದಿವೆ. ಆದ್ರೂ ಜನ ತಮ್ಮ ಕೆಲಸ ಕಾರ್ಯಕ್ಕಾಗಿ ಇಂದಿಗೂ ಪರದಾಡುತ್ತಿದ್ದಾರೆ. ಹೀಗಾಗಿ ಮಿನಿ ವಿಧಾನಸೌಧ ನಿರ್ಮಿಸಲು ಸರ್ವ ಸದಸ್ಯರ ಸಮ್ಮುಖದಲ್ಲಿ ನಿರ್ಧರಿಸಿದ್ದೇವೆ..ಇದೇತರ ಮಂಡಳಿಯ ವತಿಯಿಂದ ಆರೋಗ್ಯ ಹಾಗು ಶಿಕ್ಷಣಕ್ಕೂ ಆದ್ಯತೆ ನೀಡಲು ಸಭೆಯಲ್ಲಿ ಸಮ್ಮತಿ ಪಡೆಯಲಾಗಿದೆ.
![Demo](https://ainlivenews.com/wp-content/uploads/2023/12/spoorthi-1.jpg)
![](https://ainlivenews.com/wp-content/uploads/2024/01/Ad-Banner-copy-scaled.jpg)