ಬ್ರಿಡ್ಜ್ಟೌನ್: ಟೀಂ ಇಂಡಿಯಾ (Team India) ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಗೆದ್ದು ವಿಶ್ವಕಪ್ ಟಿ20 ವಿಶ್ವಕಪ್ (T20 World Cup) ಮುಡಿಗೇರಿಸಿಕೊಂಡಿದೆ. ಈ ವೇಳೆ ಟೀಂ ಇಂಡಿಯಾ ಆಟಗಾರರರು ವಿಭಿನ್ನವಾಗಿ ಸಂಭ್ರಮಿಸಿದ್ದರು. ಈ ವೇಳೆ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ (Rohit Sharma) ಫೀಲ್ಡ್ನಲ್ಲಿ ನಿರಾಳವಾಗಿ ಕಣ್ಮುಚ್ಚಿ ದೀರ್ಘವಾಗಿ ಉಸಿರೆಳೆದಿದ್ದರು. ಇದೀಗ ನಾನ್ಯಾಕೆ ಹಾಗೆ ಮಾಡಿದ್ದೆ ಎಂಬುದನ್ನು ಅವರು ಎಕ್ಸ್ನಲ್ಲಿ ಬರೆದುಕೊಂಡಿದ್ದಾರೆ.
ನಾಯಕತ್ವಕ್ಕೆ ವಿದಾಯ ಹೇಳಲು ಮನಸ್ಸಿರಲಿಲ್ಲ: ರೋಹಿತ್ ಶರ್ಮಾ
ನನಗೆ ವಿಶ್ವಕಪ್ ಗೆಲುವಿನ ಸಂಭ್ರಮವನ್ನು ವ್ಯಕ್ತಪಡಿಸಲು ಸೂಕ್ತ ಪದಗಳು ಸಿಗುತ್ತಿಲ್ಲ. ಆದರೂ ನಾನದನ್ನೂ ವ್ಯಕ್ತಪಡಿಸಲು ಬಯಸುತ್ತೇನೆ. ಕೋಟ್ಯಂತರ ಟೀಂ ಇಂಡಿಯಾ ಆಭಿಮಾನಿಗಳ ಕನಸು ನನಸಾದ ಆ ಸಂಭ್ರಮದಲ್ಲಿ ಹಾಗೆ ತೇಲಿದ್ದೇನೆ ಎಂದು ಅವರು ಬರೆದುಕೊಂಡಿದ್ದಾರೆ.
ಕಪ್ ಗೆದ್ದ ವೇಳೆ ಅವರು ಭಾರತಕ್ಕೆ ಟ್ರೋಫಿ ತಂದುಕೊಟ್ಟ ನೆಲದ ಮಣ್ಣನ್ನು ತಿನ್ನುವ ಮೂಲಕ ರೋಹಿತ್ ಶರ್ಮಾ ಕೃತಜ್ಞತೆಯನ್ನೂ ಸಲ್ಲಿಸಿದ್ದರು. ಅಲ್ಲದೇ ವಿರಾಟ್ ಕೊಹ್ಲಿಯನ್ನು ಅಪ್ಪಿಕೊಂಡು ರೋಹಿತ್ ಖುಷಿ ಹಂಚಿಕೊಂಡಿದ್ದರು. ಟ್ರೋಫಿಯನ್ನು ಅಪ್ಪಿಕೊಂಡು ಸಾರ್ಥಕತೆ ಮೆರೆದಿದ್ದರು. ಪತ್ನಿಯನ್ನು ಅಪ್ಪಿ ರೋಹಿತ್ ಆನಂದಭಾಷ್ಪ ಸುರಿಸಿದ್ದರು.