ಬೆಂಗಳೂರು: ನಮ್ಮ ಮೆಟ್ರೋ ಪ್ರಯಾಣಿಕರಿಗೆ ಇದೀಗ ಮತ್ತೊಂದು ಗುಡ್ ನ್ಯೂಸ್ ಸಿಕ್ಕಿದೆ ಏನಾಪ್ಪಾ ಅಂದ್ರೆ ಹಳದಿ ಮಾರ್ಗದಲ್ಲಿ ಟ್ರಯಲ್ ರನ್ ಮುಕ್ತಾಯಗೊಂಡಿದೆ.
ಹಳದಿ ಮಾರ್ಗದಲ್ಲಿ ಟ್ರಯಲ್ ರನ್ ಮುಕ್ತಾಯಗೊಂಡಿದ್ದು ಟ್ರ್ಯಾಕ್ ಸಿಗ್ನಲಿಂಗ್ ಟೆಸ್ಟ್ ಆರಂಭವಾಗಬೇಕಿದೆ ಹಾಗೆ ಚೀನಾದ ಡ್ರೈವರ್ಲೆಸ್ ಮೆಟ್ರೋ ಮೂಲಕ ಸಿಗ್ನಲಿಂಗ್ ಟೆಸ್ಟ್ ನಡೆಸಿದ BMRCL
ಕಳೆದ ಹದಿನೈದು ದಿನಗಳ ಹಿಂದೆ ಲೋಕೋಪೈಲಟ್ಲೆಸ್ ರೈಲಿನ ಟ್ರಯಲ್ ರನ್ ಮಾಡಿದ್ದ ಬಿಎಂಆರ್ ಸಿಎಲ್ ಟ್ರಯಲ್ ಯಶಸ್ವಿ ಬೆನ್ನಲ್ಲೇ ಸಿಗ್ನಲಿಂಗ್ ಟೆಸ್ಟ್ ಆರಂಭಿಸಿತ್ತು. ಹಂತ ಹಂತವಾಗಿ ಸಿಗ್ನಲಿಂಗ್ ಟೆಸ್ಟ್ ಮಾಡಲಿರುವ ಮೆಟ್ರೋ ಅಧಿಕಾರಿಗಳು ಇಂದಿಗೆ ಟ್ರಯಲ್ ರನ್ ಮುಕ್ತಾಯಗೊಂಡಿದೆ.
Crazy Fan: ನಟ ದರ್ಶನ್ʼಗಾಗಿ ಹೆತ್ತ ಮಗುವನ್ನೇ ಖೈದಿ ಮಾಡಿದ ಹುಚ್ಚು ಅಭಿಮಾನಿ! ಎಂತಹ ಕಾಲ ಬಂತು ಶಿವಾ…!
ಇದು ಮುಗಿಯುತ್ತಿದ್ದಂತೆ ದೂರಸಂಪರ್ಕ ಹಾಗೂ ವಿದ್ಯುತ್ ಪರೀಕ್ಷೆಗಳು ನಡೆಯತ್ತೆ ನಂತರ ಆರ್ ವಿ ರೋಡ್ ಟೂ ಬೊಮ್ಮಸಂದ್ರ ನಡುವೆ ಸಂಚರಿಸಿದ ರೈಲು 18.82 ಕಿಮೀ ಉದ್ದವಿರುವ ಆರ್.ವಿ. ರಸ್ತೆಯಿಂದ ಬೊಮ್ಮಸಂದ್ರದ ವರೆಗಿನ ಹಳದಿ ಮಾರ್ಗ
ಎಲ್ಲಾ ರೀತಿಯ ಪರೀಕ್ಷೆಗಳು ಮುಗಿದ ನಂತರ ಸುರಕ್ಷತಾ ಪರೀಕ್ಷೆ ನಡೆಸಿ ವರದಿ ಸಲ್ಲಿಕೆ ಮಾಡಲಾಗುತ್ತೆ ಕೇಂದ್ರ ರೇಲ್ವೆ ಸುರಕ್ಷಾತ ಅಧಿಕಾರಿಗಳ ಪರಿಶಿಲನೆ ನಂತರ ಮೆಟ್ರೋ ರೈಲು ಸಂಚಾರಕ್ಕೆ ಅವಕಾಶ ನೀಡಲಾಗುವುದು ಒಟ್ಟು ಹಳದಿ ಮಾರ್ಗದಲ್ಲಿ 16 ಮೆಟ್ರೋ ಸ್ಟೇಷನ್ ಗಳು ಇರಲಿದ್ದು ಪ್ರಯಾಣಿಕರಿಗೆ ಮತ್ತಷ್ಟು ಸುಲಭ ಸಂಚಾರ ನೀಡಲು ಸಿದ್ಧವಾಗಿದೆ.