ಬೆಂಗಳೂರು: ಹೆಚ್ಚುವರಿ ಡಿಸಿಎಂ ಟಾಕ್ ವಾರ್,ಸಿಎಂ ಬದಲಾವಣೆ ಫೈಟ್,ಕೆಪಿಸಿಸಿ ಅಧ್ಯಕ್ಷ ಬದಲಾವಣೆ ದಂಗಲ್ ಹೀಗೆ,ಕಾಂಗ್ರೆಸ್ ಪಾಳಯದಲ್ಲಿ ಅನೇಕ ಚರ್ಚೆಗಳು ಕಳೆದೊಂದು ತಿಂಗಳಿನಿಂದ ಕೈ ನಾಯಕರು ಶುರು ಮಾಡಿದ್ದಾರೆ.ಅದ್ರಲ್ಲೂ ಸಿಎಂ ಆಂಡ್ ಟೀಂ ರಾಹುಲ್ ಗಾಂಧಿ ಭೇಟಿ ಮಾಡಿ ಬಂದ ಬಳಿಕವಂತೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆಗೆ ರೆಕ್ಕೆ ಪುಕ್ಕ ಸೇರಿಕೊಂಡಿದೆ.ಇದ್ಯಾವ್ಯಾದಕ್ಕೂ ತಲೆ ಕೆಡಿಸಿಕೊಳ್ಳದ ಡಿಕೆಶಿ ಇಂದು ಪದಾಧಿಕಾರಿಗಳ ಸಭೆ ನಡೆಸಿ,ತಮ್ಮ ವಿರೋಧಿಗಳಿಗೆ ಟಕ್ಕರ್ ನೀಡಿದ್ದಾರೆ.ಇದ್ರ ಕಂಪ್ಲೀಟ್ ಡೀಟೆಲ್ಸ್ ಇಲ್ಲಿದೆ ನೋಡಿ..
ಯೆಸ್,ಲೋಕ ಸಮರ ಬಳಿಕ ರಾಜ್ಯ ಕಾಂಗ್ರೆಸ್ ನಾಯಕರು ನಾನೊಂದು ತೀರ..ನೀನೊಂದು ತೀರ ಎಂದು ದೂರವಾಗಿದ್ದಾರೆ.ಚುನಾವಣೆಗೆ ಮುನ್ನ ಇದ್ದ ಒಗ್ಗಟ್ಟಿನ ತಂತ್ರ.ಇದೀಗ ಚೂರು ಚೂರು ಆಗಿದೆ.ಡಿಸಿಎಂ ಡಿ ಕೆ ಶಿವಕುಮಾರ್ ಪವರ್ ಸೆಂಟರ್ ಕಡಿಮೆ ಮಾಡಲು ,ಸಿಎಂ ಅತ್ಯಾಪ್ತ ಬಳಗ ಹೆಚ್ಚುವರಿ ಡಿಸಿಎಂ ಪ್ರಸ್ತಾಪ ಮಾಡಿದ್ದರು.ಇದು ಯಾವಾಗ ವರ್ಕಟ್ ಆಗಲ್ಲ ಎಂದು ತಿಳಿಯುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆಯನ್ನ ಸಿದ್ದು ಬಳಗ ಮುನ್ನಲೆಗೆ ತಂದಿದ್ದಾರೆ.ಅದ್ರಲ್ಲೂ ದೆಹಲಿಯಲ್ಲಿ ರಾಹುಲ್ ಗಾಂಧಿ ಭೇಟಿ ಮಾಡಿದ್ದ ಸಿದ್ದು ಆಂಡ್ ಟೀಂ ಇದನ್ನ ಪ್ರಸ್ತಾಪ ಮಾಡಿದ್ದಾರೆ ಎನ್ನಲಾಗಿದೆ.ಹೀಗಾಗಿ,ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಚರ್ಚೆ ಮತ್ತಷ್ಟು ಜೀವ ಪಡೆದುಕೊಂಡಿದೆ.ಆದ್ರೆ,ತಮ್ಮ ವಿರೋಧಿಗಳಿಗೆ ಪದಾಧಿಕಾರಿಗಳ ಸಭೆ ನಡೆಸುವ ಮೂಲಕವೇ ಡಿಸಿಎಂ ಇಂದು ಟಕ್ಕರ್ ನೀಡಿದ್ದಾರೆ.
ಇನ್ನು ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಚರ್ಚೆ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಇಂದು ಪದಾಧಿಕಾರಿಗಳ ಸಭೆ ನಡೆಸಿದ್ರು.ಸಭೆಯಲ್ಲಿ ಅಧ್ಯಕ್ಷ ಬದಲಾವಣೆ ಚರ್ಚೆಗೆ ಸ್ಪಷ್ಟ ಸಂದೇಶ ನೀಡಿದ್ದಾರೆ.ನಾನು ಮಾಡುವ ಕೆಲಸ ಇನ್ನು ತುಂಬಾ ಇದೆ.ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ನನ್ನನ್ನ ತೆಗೆಯಲು ಸಾಧ್ಯವಿಲ್ಲ.ಈ ಬಗ್ಗೆ ನಿನ್ನೆ ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷರನ್ನ ಭೇಟಿ ಮಾಡಿ ಚರ್ಚೆ ಮಾಡಿದ್ದೇನೆ.ಮುಂಬರುವ ಸ್ಥಳೀಯ ಸಂಸ್ಥೆ ಚುನಾವಣೆಗೆ ನಾವು ಬೇರು ಮಟ್ಟದಿಂದ ಪಕ್ಷ ಸಂಘಟನೆ ಮಾಡೋಣ ಎಂದು ಪದಾಧಿಕಾರಿಗಳ ಸಭೆಯಲ್ಲಿ ಡಿಸಿಎಂ ಡಿಕೆಶಿ ಸಂದೇಶ ನೀಡಿದ್ದಾರೆ.
New Criminal Laws: ಹೊಸ ಕಾನೂನಿನಡಿ ಬೆಂಗಳೂರಲ್ಲಿ ದಾಖಲಾದ FIR ಎಷ್ಟು ಗೊತ್ತಾ?
ಇನ್ನು ಪಕ್ಷ ವಿರೋಧಿ ಹೇಳಿಕೆ ನೀಡೋರಿಗೆ ಷೋಕಾಸ್ ನೋಟಿಸ್ ಕೊಡ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಎಚ್ಚರಿಸಿದ್ದಾರೆ.ಹೆಚ್ಚುವರಿ ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಬಗ್ಗೆ ಪದೇ ಪದೇ ಹೇಳಿಕೆ ನೀಡುತ್ತಿರುವ ಸಚಿವ ಕೆ.ಎನ್.ರಾಜಣ್ಣಗೆ ನೋಟಿಸ್ ನೀಡ್ತೀರಾ ಎಂಬ ಮಾಧ್ಯಮದ ಪ್ರಶ್ನೆಗೆ ಡಿಕೆಶಿ ಖಾರವಾಗಿಯೇ ಪ್ರತಿಕ್ರಿಯೆ ನೀಡಿದ್ದಾರೆ.ನಾನು ಯಾರ್ಯಾರಿಗೆ ನೋಟಿಸ್ ಕೊಡ್ತೀನಿ ಎಂದು ನೋಡಿ ಎಂದು ಡಿಕೆಶಿ ಹೇಳಿದ್ದಾರೆ.
ಒಟ್ಟಾರೆ.ಕಾಂಗ್ರೆಸ್ ಮನೆಯಲ್ಲಿ ನಾಯಕತ್ವದ ದಂಗಲ್ ಶುರುವಾಗಿದೆ.ಅದ್ರಲ್ಲೂ ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಸಿದ್ದರಾಮಯ್ಯ ಬಣ ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬಂದಿದೆ.ಕೈ ಪಕ್ಷದಲ್ಲಿ ಸ್ಪೋಟವಾಗಿರುವ ನಾಯಕತ್ವದ ವಾರ್,ಮುಂದೆ ಯಾವ ಸ್ವರೂಪ ಪಡೆಯಲಿದೆ ಅನ್ನೋದನ್ನ ಕಾದು ನೋಡಬೇಕಿದೆ.