ಕಾರವಾರ:- ಜೋರು ಮಳೆ ಹಿನ್ನೆಲೆ ಜಿಲ್ಲೆಯ ಯಲ್ಲಾಪುರ ತಾಲೂಕಿನ ಇಡಗುಂದಿ ಗ್ರಾಮಪಂಚಾಯತಿ ವ್ಯಾಪ್ತಿಯಲ್ಲಿ. ಕಳೆದ ಮೂರು ವರ್ಷಗಳ ಹಿಂದೆ ಗ್ರಾಮಸ್ಥರ ಒತ್ತಾಯದ ಮೇರೆಗೆ ನಿರ್ಮಿಸಿರುವ ಸೇತುವೆ ಸದ್ಯ ಮುಳುಗುಡೆಯಾಗಿದ್ದು ಐದಕ್ಕೂ ಹೆಚ್ಚು ಗ್ರಾಮಗಳ ಜನರು ಪ್ರಾಣ ಭಯದಲ್ಲೇ ಸಂಚರಿಸುವಂತಾಗಿದೆ.
ಗಂಗಾವಳಿ ನದಿಗೆ ಹೊಂದಿಕೊಂಡಿರುವ ಕಾಡಂಚಿನ ಗ್ರಾಮಗಳಾದ ಗುಳ್ಳಾಪುರ, ಕಲ್ಲೆಶ್ವರ, ಹಳವಳ್ಳಿ ಪಣಸಗುಳಿ, ಶೇವ್ ಕಾರ್ ಹಾಗೂ ಕೈಗಡಿ, ಸೇರಿದಂತೆ ಒಟ್ಟು ಆರು ಗ್ರಾಮಗಳಲ್ಲಿ ಸೂಕ್ತ ಮೂಲ ಸೌಕರ್ಯ ಇಲ್ಲದ ಕಾರಣ, ಶಿಕ್ಷಣ ಆರೋಗ್ಯ, ಬ್ಯಾಂಕ್ ವ್ಯವಹಾರ, ಗ್ರಾಮ ಪಂಚಾಯತಿ ಕೆಲಸ ಸೇರಿದಂತೆ ಅಗತ್ಯ ಕೆಲಸಕ್ಕಾಗಿ ಇಡಗುಂದಿ ಗ್ರಾಮಕ್ಕೆ ಬರ ಬೇಕಾಗುತ್ತದೆ. ಪರ್ಯಾಯವಾಗಿ ಇನ್ನೊಂದು ಮಾರ್ಗವಿದ್ದು ಆ ಮಾರ್ಗದಿಂದ ಹೋಗಬೇಕಾದರೆ ಸುಮಾರು 30 ಕಿಮೀ ಸಂಚರಿಸಬೇಕಾಗುತ್ತದೆ.