ಬೆಂಗಳೂರು:- ಜುಲೈ 15ರಿಂದ ಜುಲೈ 26ರವರೆಗೆ ಹತ್ತುದಿನಗಳ ಕಾಲ ಅಧಿವೇಶನ ನಡೆಯಲಿದೆ.
Dental Health: ನಿಮ್ಮ ಹಲ್ಲು ಪಳಪಳನೆ ಹೊಳೆಯಬೇಕಾ!?.. ಹಾಗಿದ್ರೆ ಈ ಟಿಫ್ಸ್ ಫಾಲೋ ಮಾಡಿ, ರಿಸಲ್ಟ್ ಗ್ಯಾರಂಟಿ!
ಕರ್ನಾಟಕ ವಿಧಾನಮಂಡಲ ಮುಂಗಾರು ಅಧಿವೇಶಕ್ಕೆ ದಿನಾಂಕ ನಿಗದಿಯಾಗಿದ್ದು, ಅಧಿವೇಶನದ ದಿನಾಂಕ ನಿಗದಿಗೆ ಕಳೆದ ಸಚಿವ ಸಂಪುಟ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯನವರ ವಿವೇಚನೆಗೆ ಬಿಡಲಾಗಿತ್ತು. ಅದರಂತೆ ಸಿದ್ದರಾಮಯ್ಯ ಅಧಿವೇಶನದ ದಿನಾಂಕ ಅಂತಿಮಗೊಳಿಸಿದ್ದು, ಈ ಕುರಿತು ರಾಜ್ಯಪಾಲರಿಗೆ ಶಿಫಾರಸ್ಸು ಮಾಡಲಾಗಿದೆ.
ಜೂನ್ 20 ರಂದು ರಾಜ್ಯ ಸಚಿವ ಸಂಪುಟದಲ್ಲಿ ಕೈಗೊಂಡ ನಿರ್ಧಾರದ ಮೇರೆಗೆ ಜುಲೈ 15 ರಿಂದ ಜುಲೈ 26 ರವರೆಗೆ ಮುಂಗಾರು ಅಧಿವೇಶನ ಕರೆಯಲು ಸರ್ಕಾರವು ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಅವರಿಗೆ ಶಿಫಾರಸು ಮಾಡಿದೆ ಎನ್ನಲಾಗಿದೆ.
ಇನ್ನು ವಿಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್ ಆಡಳಿತದಲ್ಲಿನ ಲೋಪ ಎತ್ತಿ ಸರ್ಕಾರ ಮೇಲೆ ಮುಗಿಬೀಳಲು ಸಜ್ಜಾಗಿವೆ. ಅದರಲ್ಲೂ ಮುಖ್ಯವಾಗಿ ಬೆಲೆ ಏರಿಕೆ ವಿರುದ್ಧ ಹೋರಾಟ ಮಾಡಲಿವೆ
ಲೋಕಸಭೆ ಚುನಾವಣೆಗೂ ಮುನ್ನ ಫೆಬ್ರವರಿಯಲ್ಲಿ 15 ದಿನಗಳ ಅವಧಿಗೆ ಹಿಂದಿನ ಅಧಿವೇಶನ ನಡೆದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಬಜೆಟ್ ಮಂಡಿಸಿದ್ದರು.
ಜೂನ್ 20 ರಂದು ರಾಜ್ಯ ಸಚಿವ ಸಂಪುಟದಲ್ಲಿ ಕೈಗೊಂಡ ನಿರ್ಧಾರದ ಮೇರೆಗೆ ಜುಲೈ 15 ರಿಂದ ಜುಲೈ 26 ರವರೆಗೆ ಮುಂಗಾರು ಅಧಿವೇಶನ ಕರೆಯಲು ಸರ್ಕಾರವು ರಾಜ್ಯಪಾಲ ತಾವರಚಂದ್ ಗೆಹ್ಲೋಟ್ ಅವರಿಗೆ ಶಿಫಾರಸು ಮಾಡಿದೆ ಎಂದು ಅವರು ಹೇಳಿದರು
ಲೋಕಸಭಾ ಚುನಾವಣೆ ಫಲಿತಾಂಶದ ನಂತರ ನಡೆಯುತ್ತಿರುವ ಮೊದಲ ಕಲಾಪ ಇದರಾಗಿರುವುದರಿಂದ ಆಡಳಿತ ಪಕ್ಷಗಳ ಲೋಪಗಳನ್ನು ಎತ್ತಿ ಹಿಡಿದು ಸರ್ಕಾರ ಮೇಲೆ ಮುಗಿಬೀಳಲು ಸಜ್ಜಾಗಿವೆ