ಬಾಗಲಕೋಟೆ:– ಕನ್ನಡಿಗರಿಗೆ ಉದ್ಯೋಗ ನೀಡುವ ಕಾಯ್ದೆಗೆ ಆಗ್ರಹಿಸಿ ಕರವೇ ವತಿಯಿಂದ ಇಂದು ಬಾಗಲಕೋಟ ನಗರದಲ್ಲಿ ಜಿಲ್ಲಾ ಘಟಕದಿಂದ ಪ್ರತಿಭಟನೆ ನಡೆಸಲಾಗಿದೆ.
ಸರಳವಾಗಿ ಸೋಲು ಒಪ್ಪಿಕೊಳ್ಳುವ ಹೆಣ್ಣುಮಗಳು ನಾನಲ್ಲ -ವೀಣಾ ಕಾಶಪ್ಪನವರ್..!
ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗಗಳನ್ನು ಮೀಸಲಿಡಬೇಕು. ಹೀಗಾಗಿ ಉದ್ಯೋಗ ಕಾಯ್ದೆ ರೂಪಿಸಲು ಆಗ್ರಹಿಸಿದ್ದಾರೆ. ಕಾಯ್ದೆ ಜಾರಿಗೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಕೆ ಮಾಡಿದ್ದಾರೆ. ಕರವೇ ಜಿಲ್ಲಾ ಅಧ್ಯಕ್ಷರ ನೇತೃತ್ವದಲ್ಲಿ ಪ್ರತಿಭಟನೆ ನಡೆದಿದ್ದು, ಪ್ರತಿಭಟನೆಯಲ್ಲಿ ನೂರಾರು ಕರವೇ ಕಾರ್ಯಕರ್ತರು ಭಾಗಿಯಾಗಿದರು.