ಬೀದರ್: ರಾತ್ರಿ ಮಣ್ಣಲ್ಲಿ ಹೂತಿದ್ದ ಮಗು ಬೆಳಿಗ್ಗೆ ಜೋಗುಳದಲ್ಲಿ ಪ್ರತ್ಯಕ್ಷವಾಗಿರುವ ಘಟನೆ ಬೀದರ್ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಮಂಠಾಳ ಗ್ರಾಮದಲ್ಲಿನಡೆದಿದೆ. ಮಂಠಾಳ ಗ್ರಾಮದ ನಿವಾಸಿ ಅಂಬಯ್ಯಸ್ವಾಮಿ ಎಂಬುವವರ ಒಂದೂವರೆ ವರ್ಷದ ದೀಪ್ತಿ ಅನಾರೋಗ್ಯದಿಂದ ಜೂನ್ 29ರ ಸಂಜೆ ಸಾವನ್ನಪ್ಪಿದ್ದಳು.
Benefits of Ivy Gourd: ತೊಂಡೆಕಾಯಿಯ ಈ ಪ್ರಯೋಜನಗಳನ್ನು ತಿಳಿದರೆ ದಿನಾ ತಿನ್ನುವಿರಿ..!
ಈ ಹಿನ್ನೆಲೆಯಲ್ಲಿ ಕುಟುಂಬಸ್ಥರು ತಡರಾತ್ರಿ ಮಗುವಿನ ಮೃತದೇಹವನ್ನು ಅಂತ್ಯಸಂಸ್ಕಾರ ಮಾಡಿದ್ದರು. ಆದರೆ ಮರುದಿನ ಅಂದರೆ ಜೂನ್ 30ರ ಬೆಳಗ್ಗೆ ಮರಕ್ಕೆ ಕಟ್ಟಿದ್ದ ಉಯ್ಯಾಲೆ ಯಲ್ಲಿ ಮಗುವಿನ ಮೃತದೇಹ ಪ್ರತ್ಯಕ್ಷವಾಗಿದೆ. ಇದರಿಂದ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನೂ ಮಾಟಮಂತ್ರ ಮಾಡುವವರು ಹೀಗೆ ಮಾಡಿರಬಹುದೆಂದು ಗ್ರಾಮಸ್ಥರು ಶಂಕೆ ವ್ಯಕ್ತಪಡಿಸಿದ್ದಾರೆ.