ಬೆಂಗಳೂರು: ಜೈಲಿನಲ್ಲಿರುವ ಪುತ್ರ ಪ್ರಜ್ವಲ್ ರೇವಣ್ಣ (Prajwal Revanna) ಅವರನ್ನು ನೋಡಲು ಭವಾನಿ ರೇವಣ್ಣ (Bhavani Revanna) ಆಗಮಿಸಿದ್ದಾರೆ.
ಪರಪ್ಪನ ಅಗ್ರಹಾರದತ್ತ ಬಂದ ಭವಾನಿ ಅವರು ಕ್ಯಾಮೆರಾ ಕಾಣುತ್ತಿದ್ದಂತೆಯೇ ಕೈಯಿಂದ ಮುಖ ಮುಚ್ಚಿಕೊಂಡಿದ್ದಾರೆ. ಕಾರ್ ಡ್ರೈವರ್ ಮತ್ತು ಪಿಎ ಜೊತೆಗೆ ಆಗಮಿಸಿದ್ದಾರೆ.
Reels Star Arrest: AK 47 ಗನ್ ಹಿಡಿದು ಶೋಕಿ ಮಾಡಲು ಹೋಗಿ ಜೈಲು ಸೇರಿದ ರೀಲ್ಸ್ ಸ್ಟಾರ್!
ಪೆನ್ಡ್ರೈವ್ (Pendrive Case) ವಿಚಾರ ಬಯಲಾಗುತ್ತಿದ್ದಂತೆಯೇ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹಾರಿದ್ದರು. ಆ ಬಳಿಕ ಎಸ್ಐಟಿ ಹಲವು ಬಾರಿ ನೋಟಿಸ್ ಕೊಟ್ಟರೂ ಪ್ರಜ್ವಲ್ ಕ್ಯಾರೇ ಎಂದಿರಲಿಲ್ಲ. ಈ ನಡುವೆ ಅಜ್ಞಾತವಾಸದಂದಲೇ ವಿಡಿಯೋವೊಂದನ್ನು ಮಾಡಿ ಒಂದು ವಾರ ಸಮಯ ಕೋಡಿ ನಾನೇ ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದರು. ಆದರೆ ಆ ವೇಳೆಯೂ ಪ್ರಜ್ವಲ್ ಹಾಜರಾಗಿರಲಿಲ್ಲ
ಬಳಿಕ ಕೆಲ ದಿನಗಳ ನಂತರ ಪ್ರಜ್ವಲ್ ಹಿಂದಿರುಗಿದ್ದರು. ಬೆಂಗಳೂರು ವಿಮಾನ ನಿಲ್ದಾಣಕ್ಕೆ ಬರುತ್ತಿದ್ದಂತೆಯೇ ಪ್ರಜ್ವಲ್ ರೇವಣ್ಣ ಅವರನ್ನು ಎಸ್ಐಟಿಯವರು ವಶಕ್ಕೆ ಪಡೆದು ವಿಚಾರಣೆ ನಡೆಸಿದರು. ತನಿಖೆಯ ಭಾಗವಾಗಿ ಸ್ಥಳಮಹಜರು ನಡೆಸಿ ಕೋರ್ಟ್ಗೆ ಹಾಜರು ಪಡಿಸಿದ್ದು, ಇದೀಗ ಪರಪ್ಪನ ಅಗ್ರಹರ ಸೇರಿದ್ದಾರೆ.