ಬೆಂಗಳೂರು: ಸಾಮಾಜಿಕ ಜಾಲತಾಣ ಎಷ್ಟು ವೇಗ ಇದ್ದಾವೋ ಅಷ್ಟೇ ಅಪಾಯವೂ ಹೌದು ಸತ್ಯದ ಜೊತೆ ಸುಳ್ಳನ್ನು ಹೇಳ್ತಿದೆ ಹಾಗೆ ಫೇಕ್ ನ್ಯೂಸ್ ಗಳನ್ನ ಕೊಟ್ಟು ಸಮಾಜಕ್ಕೆ ತೊಂದರೆಯನ್ನು ಕೊಡ್ತಿದೆ ಪತ್ರಿಕಾ, ಮಾಧ್ಯಮ ಸಂಘಟನೆಗಳು ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಕರೆ ನೀಡಿದ್ದಾರೆ.
Darshan Arrest: ಜೈಲಿನಲ್ಲಿರುವ ದರ್ಶನ್ʼನನ್ನು ಭೇಟಿಯಾದ ತಾಯಿ, ತಮ್ಮ: ಭಾವುಕರಾದ ಅಮ್ಮ!
ಬೆಂಗಳೂರಿನಲ್ಲಿ ಪತ್ರಕರ್ತರ ಭವನದಲ್ಲಿ ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ವಾರ್ತಾ ಮತ್ತು ಪ್ರಚಾರ ಇಲಾಖೆ ಸಂಯುಕ್ತಾಶ್ರಯದಲ್ಲಿ ನಡೆದ ಪತ್ರಿಕಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ನಮ್ಮಸರ್ಕಾರ ಫೇಕ್ ನ್ಯೂಸ್ ಪತ್ತೆ ಮಾಡ್ತಿದೆ ಪ್ರತಿ ಜಿಲ್ಲೆಯಲ್ಲೂ ಘಟಕ ಸ್ಥಾಪನೆ ಮಾಡುತ್ತಿದ್ದೇವೆ ಯಾರು ಬೇಕಾದ್ರು ಅವರ ಅಭಿಪ್ರಾಯ ವ್ಯಕ್ತಪಡಿಸಬಹುದು. ನಾನು ಸೋಷಿಯಲ್ ಮೀಡಿಯಾ ನೋಡೋದನ್ನೇ ಬಿಟ್ಟಿದ್ದೀನಿ ಫೇಕ್ ನ್ಯೂಸ್ ಗಳಿಂದ ಎಲ್ಲರೂ ಎಚ್ಚರದಿಂದ ಇರಬೇಕು ಯಾರ ಪರವಾಗಿ ಇರ್ತಾರೋ ಅವರ ಪರಾನೇ ಹೇಳ್ತಾರೆ, ವಿರುದ್ಧ ಇದ್ರೆ ಅವರ ವಿರುದ್ಧ ಹೇಳ್ತಾರೆ ಎಂದು ಹೇಳಿದರು.
ಅಪ್ರಾಪ್ತ ಮಕ್ಕಳಿಗೆ ಬೈಕ್ ಕೊಡೋ ಪೋಷಕರು ನೋಡಲೇಬೇಕು: CCTV Video Viral
ಸಾಮಾಜಿಕ ಮಾಧ್ಯಮಗಳ ಮೂಲಕ ಹರಡುವ ಸುಳ್ಳು ಸುದ್ದಿಗಳು ಸಮಾಜಕ್ಕೆ ಅನಾಹುತಕಾರಿ. ಸುಳ್ಳು ಸುದ್ದಿಗಳ ಮೇಲೆ ತೀವ್ರ ನಿಗಾ ಇಡಬೇಕು. ಈ ಬಗ್ಗೆ ಪ್ರತಿ ಜಿಲ್ಲೆಗಳಿಗೂ ವಿಶೇಷ ಘಟಕ ಸ್ಥಾಪಿಸಲಾಗಿದ್ದು, ಸುಳ್ಳು ಸುದ್ದಿಗಳನ್ನು ಪತ್ತೆ ಹಚ್ಚಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಸಿಎಂ ರಾಜಕೀಯ ಕಾರ್ಯದರ್ಶಿ ನಸೀರ್ ಅಹಮ್ಮದ್, ವಿಧಾನಪರಿಷತ್ ಸದಸ್ಯ ಯು.ಬಿ.ವೆಂಕಟೇಶ್, ಪ್ರೆಸ್ ಕ್ಲಬ್ ಅಧ್ಯಕ್ಷ ಆರ್.ಶ್ರೀಧರ್, ಪ್ರಧಾನ ಕಾರ್ಯದರ್ಶಿ ಮಲ್ಲಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.