ಬೆಂಗಳೂರು: ಅಪ್ರಾಪ್ತ ಮಕ್ಕಳಿಗೆ ಬೈಕ್ ಕೊಡೋ ಪೋಷಕರು ನೋಡಲೇಬೇಕಾದ ಸುದ್ದಿ ನಿಮ್ಮ ಮಕ್ಕಳಿಗೆ ಬೈಕ್ ಕೊಟ್ಟು ನೀವೇ ನೋವು ಪಡಬೇಕಾಗುತ್ತೆ ಹಾಗಾಗಿ ಎಚ್ಚರವಹಿಸಿದರೆ ನಿಮಗೆ ನಿಮ್ಮ ಮಕ್ಕಳು ಸಿಕ್ಕುತ್ತಾರೆ ಇಲ್ಲವಾದರೆ ಜೈಲೂಟ ಗ್ಯಾರಂಟಿ
ಹೌದು…. ನಗರದ ಹೆಣ್ಣೂರು ಮುಖ್ಯರಸ್ತೆಯಲ್ಲಿ ಈ ಘಟನೆ ನಡೆದಿದ್ದು ಅಪ್ರಾಪ್ತ ವಯಸ್ಸಿನ ಹುಡುಗರ ಹುಡುಗಾಟದಿಂದ ಅಚಾತುರ್ಯ ನಡೆದಿದ್ದು ಈ ವಿಡಿಯೋ ನೋಡಿದ್ರೆ ಮಾತ್ರ ಎದೆ ಝಲ್ಲೆನಿಸುವಂತಿದೆ
ಕಳೆದ ಮೂರು ದಿನದ ಹಿಂದ ನಡೆದಿರುವ ಘಟನೆಯಾಗಿದ್ದು ಈಗ ಇದೀಗ ಎಲ್ಲೆಡೆ ವೈರಲ್ ಆಗಿದ್ದು ಹೆಣ್ಣೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಅಪಘಾತ
ಇಬ್ಬರು ಬಾಲಕರು ಬೈಕ್ ನಲ್ಲಿ ಬರ್ತಿರ್ತಾರೆ ಈ ವೇಳೆ ನಿಂತಿದ್ದ ಕಾರಿಗೆ ಡಿಕ್ಕಿಯಾದ ಬೈಕ್ ಬೈಕ್ ನಿಂದ ಹಾರಿ ಬಿದ್ದ ಬಾಲಕರು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಇಲ್ಲ
Bangalore: ಈ SI ಮಾಡುತ್ತಿರುವ ಕೆಲಸಕ್ಕೆ ಸಾಕಷ್ಟು ಪ್ರಶಂಸೆಯ ಸುರಿಮಳೆ : ಏನಂತೀರಾ?
ಈ ಬಗ್ಗೆ ಹೆಣ್ಣೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ಹುಡುಗರ ಪೋಷಕರಿಗೆ ವಾರ್ನಿಂಗ್ ಮಾಡಲಾಗಿದೆ.