ಬೆಂಗಳೂರು: ಮಕ್ಕಳೆಂದರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ ಆದರೆ ತನ್ನ ಎದೆಗೆತ್ತರಕ್ಕೆ ಬೆಳೆದ ಮಗಳು ಇಲ್ಲವಾದಾಗ ಕಣ್ಣಿರಿಡುವ ತಂದೆ ತಾಯಿಯ ರೋದನೆ ಮಾತ್ರ ನೋಡಲು ಅಸಾಧ್ಯ ಹಾಗಾಗಿ ಇಲ್ಲೊಬ್ಬ ತಂದೆ ಮಗಳ ದುರಂತ ಅಂತ್ಯದ ಬಳಿಕ ನೂರಾರು ಮಕ್ಕಳ ಶಿಕ್ಷಣಕ್ಕೆ ದಾರಿದೀಪವಾದ ಘಟನೆ ನೋಡಬಹುದು
Sun Roof Car: ‘ಸನ್ರೂಫ್’ ಕಾರಿನಲ್ಲಿ ಪೋಸ್ ಕೊಡುವವರು ಈ ಸುದ್ದಿ ಓದಲೇಬೇಕು!
ಹೌದು.. ನಗರದ ಎಸ್ ಐ ಲೊಕೇಶಪ್ಪ ಮಗಳ ದುರಂತ ಅಂತ್ಯದ ಬಳಿಕ ನೂರಾರು ಮಕ್ಕಳ ಶಿಕ್ಷಣಕ್ಕೆ ದಾರಿದೀಪವಾಗಿದ್ದು ಸುಮಾರು 600 ವಿದ್ಯಾರ್ಥಿಗಳಿಗೆ ಶಾಲಾ ಸಾಮಾಗ್ರಿಗಳನ್ನ ಒದಗಿಸಲು ಧನ ಸಹಾಯ ಮಾಡಿದ್ದಾರೆ ಹಾಗೆ ತನ್ನ ಎರಡು ತಿಂಗಳ ಸಂಬಳವನನ್ನ ಮಕ್ಕಳ ವಿಧ್ಯಾಭ್ಯಾಸದ ಅಗತ್ಯಕ್ಕೆ ಮುಡಿಪಾಗಿಟ್ಟಿದ್ದಾರೆ. ಇದೆಲ್ಲಾ ಆಗಿದ್ದು ಶಿವಾಜಿನಗರ ಅಸಿಸ್ಟೆಂಟ್ ಸಬ್ ಇನ್ಸ್ಪೆಕ್ಟರ್ ಲೊಕೇಶಪ್ಪ ಅವರಿಂದ ಬಡ ವಿದ್ಯಾರ್ಥಿಗಳಿಗೆ ದಾರಿ ದೀಪವಾಗಿದೆ.
2019 ರಲ್ಲಿ ತನ್ನ ಮಗಳನ್ನ ಕಳೆದುಕೊಂಡಿದ್ದ ಲೊಕೇಶಪ್ಪ ಬೆಂಕಿ ಅವಘಡದಲ್ಲಿ ತನ್ನ ಮಗಳು ಹರ್ಷಾಲಿಯನ್ನ ಕಳೆದುಕೊಂಡಿದ್ದರು. ನಂತರ ಮಗಳ ಸಾವಿನ ಗೌರವಾರ್ಥವಾಗಿ ಬಡ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ದಾನ ಮಾಡಿದರು.
Darshan Jail : ಜೈಲು ಸೇರಿದ ಬಳಿಕ ಚೇಂಜ್ ಆದ್ರಾ ದರ್ಶನ್: ಎಲ್ಲರ ಜೊತೆ ಬೆರೆಯುತ್ತಿರುವ ಡಿ ಬಾಸ್!
ತನ್ನ ಮಗಳ ಶಿಕ್ಷಣಕ್ಕೆ ಖರ್ಚಾಗುತ್ತಿದ್ದ ಶಿಕ್ಷಣಕ್ಕೆ ಬಡ ಮಕ್ಕಳ ಶಾಲಾ ಸಾಮಾಗ್ರಿಗಳಿಗೆ ನೀಡಲು ಧನಸಹಾಯ ಮಾಡಿದ್ದಲ್ಲದೇ ಕಳೆದ ಒಂದು ವರ್ಷದಿಂದ ಆರು ಶಾಲೆಗಳ ಬಡ ಮಕ್ಕಳಿಗೆ ಶಾಲಾ ಸಾಮಗ್ರಿಗಳಿಗೆ ಧನಸಹಾಯ ನೀಡುತ್ತಿರುವ ಸಿಬ್ಬಂದಿ
ಮೈಸೂರು , 1 ಹಾಸನ 4 , ಬೆಂಗಳೂರು 1 ಶಾಲೆಗಳ ಸುಮಾರು 600 ಮಕ್ಕಳ ವಿದ್ಯಾಭ್ಯಾಸಕ್ಕೆ ಧನಸಹಾಯ ಹಾಘೆ ಬೆಂಗಳೂರಿನ 200 ಮಕ್ಕಳು ಸೇರಿದಂತೆ 600 ಮಕ್ಕಳಿಗೆ ಧನ ಸಹಾಯ ಮಾಡಿದ್ದಾರೆ.
ಲೊಕೇಶಪ್ಪ ಪತ್ನಿ ಶಿಕ್ಷಣ ಇಲಾಖೆಯಲ್ಲಿ ಸಿಬ್ಬಂದಿಯಾಗಿದ್ದರು ನಂತರ ತನ್ನ ಮಗಳ ಹೆಸರಿನಲ್ಲಿ ಎನ್ ಜಿಒ ಸ್ಥಾಪಿಸಿದ್ದರು ಸದ್ಯ ಎಸೈಐ ಅವರ ಕೆಲಸಕ್ಕೆ ಹಲವೆಡೆ ಪ್ರಶಂಸೆಗಳು ಕೇಳಿ ಬರುತ್ತಿದ್ದು ಬಡ ಮಕ್ಕಳ ನಗುವಲ್ಲೇ ತನ್ನ ಮಗಳನ್ನು ಕಾಣುತ್ತಿರುವ ಎಸ್ ಐ ದಂಪತಿ ಹಾಗಾಗಿ ಇವರಿಗೆ ನಮ್ಮ ಕಡೆಯಿಂದಲೂ ಸೆಲ್ಯೂಟ್ ಹೇಳಿದರು ತಪ್ಪಾಗಲಾರದು.