ಬೆಂಗಳೂರು: ನಿಮಗೆ ಸನ್ ರೂಫ್ ಕಾರಿನಲ್ಲಿ ಹೋಗುವುದಂದರೆ ಇಷ್ಟನಾ , ಆದ್ರೆ ಈಗ ಮಾತ್ರ ನೀವು ಎಚ್ಚರವಹಿಸಲೇ ಬೇಕು ಇಲ್ಲದಿದ್ರೆ ಪೊಲೀಸರು ದಂಡ ವಿಧಿಸೋದು ಮಾತ್ರ ಪಕ್ಕಾ.
ಪ್ರಯಾಣದ ವೇಳೆ ಕಾರಿನ ‘ಸನ್ರೂಫ್’ನಲ್ಲಿ ನಿಂತು ಫೋಸ್ ಕೊಡುವ ಮುನ್ನ ಯೋಚಿಸಿ..! ಏಕೆಂದರೆ, ಕಾರಿನ ಸನ್ರೂಫ್ನಲ್ಲಿ ನಿಲ್ಲುವವರು, ಕೇಕೆ ಹಾಕುವವರಿಗೆ ನಗರ ಸಂಚಾರ ಪೊಲೀಸರು ದಂಡ ವಿಧಿಸಲು ಮುಂದಾಗಿದ್ದಾರೆ.
Darshan Arrest: ರೇಣುಕಾಸ್ವಾಮಿ ಕೊಲೆ ಕೇಸ್.. ಜೈಲಿನಲ್ಲಿ ಯಾರೊಂದಿಗೂ ಬೆರೆಯದ ದರ್ಶನ್.. !
ಸಿಲಿಕಾನ್ ಸಿಟಿಯಲ್ಲಿ ವಾರಾಂತ್ಯದ ದಿನಗಳಲ್ಲಿ ಕೆಲವರು ಕಾರು ಸಂಚರಿಸುವ ಸಂದರ್ಭದಲ್ಲೇ ಸನ್ರೂಫ್ನಲ್ಲಿ ನಿಲ್ಲುತ್ತಿರುವುದು ಇತ್ತೀಚೆಗೆ ಕಂಡು ಬರುತ್ತಿದೆ. ಈ ಸಂಬಂಧ ಕಾರಿನ ಮಾಲೀಕರ ವಿರುದ್ಧ ಅಜಾಗರೂಕ ಚಾಲನೆ ಹಾಗೂ ಅಸುರಕ್ಷಿತ ಪ್ರಯಾಣದ ನಿಯಮ ಉಲ್ಲಂಘನೆಯಡಿ ಪ್ರಕರಣ ದಾಖಲಿಸಲು ತೀರ್ಮಾನಿಸಲಾಗಿದೆ. ಇದಕ್ಕೆ ಪೂರಕವಾಗಿ ಎಚ್ಎಎಲ್ ಸಂಚಾರ ಪೊಲೀಸರು ಇತ್ತೀಚೆಗೆ ಮೊದಲ ಪ್ರಕರಣ ದಾಖಲಿಸಿದ್ದಾರೆ.
National Press Day: ರಾಷ್ಟ್ರೀಯ ಪತ್ರಿಕಾ ದಿನ 2024: ಇತಿಹಾಸ, ಪ್ರಾಮುಖ್ಯತೆ ತಿಳಿಯಿರಿ!
ಕೆಲ ದಿನಗಳ ಹಿಂದೆ ಸನ್ರೂಫ್ನಲ್ಲಿ ಇಬ್ಬರು ಮಕ್ಕಳು ನಿಂತಿದ್ದ ವಿಡಿಯೋವನ್ನು ‘ಎಕ್ಸ್’ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ವ್ಯಕ್ತಿಯೊಬ್ಬರು ಮಕ್ಕಳ ಸುರಕ್ಷತೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದರು. ಈ ವಿಡಿಯೋ ಸಾಕಷ್ಟು ವೈರಲ್ ಆಗಿತ್ತು. ಈ ನಿಟ್ಟಿನಲ್ಲಿ ಕಾರಿನ ಮಾಲೀಕರನ್ನು ಪತ್ತೆ ಮಾಡಿದ ಎಚ್ಎಎಲ್ ಪೊಲೀಸರು, ಅಜಾಗರೂಕ ಚಾಲನೆ ಹಾಗೂ ಅಸುರಕ್ಷಿತ ಪ್ರಯಾಣ ಸಲುವಾಗಿ 1 ಸಾವಿರ ರೂ. ದಂಡ ವಿಧಿಸಿದ್ದಾರೆ.