ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ದರ್ಶನ್ ಅವರು ಈಗ ಜೈಲಿನಲ್ಲಿದ್ದಾರೆ. ಮೊದಲ ಕೆಲವು ದಿನಗಳು ಜೈಲಿನಲ್ಲಿ ಸಪ್ಪೆ ಮೋರೆ ಹಾಕಿ ಕುಳಿತ್ತಿದ್ದ ದರ್ಶನ್ ಈಗ ಪುಲ್ ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ.
New Criminal Laws: ಹೊಸ ಕಾನೂನುಗಳ ಜಾರಿ ಬಗ್ಗೆ ಎಲ್ಲರಿಗೂ ತರಬೇತಿ ನೀಡಿದ್ದೇವೆ: ಜಿ.ಪರಮೇಶ್ವರ್
ನಟ ದರ್ಶನ್ ಜೈಲಿನ ದಿನಚರಿ ನೋಡುವುದಾದರೆ ರಾತ್ರಿ ಬೇಗ ನಿದ್ದೆಗೆ ಜಾರಿದ್ದ ನಟ ದರ್ಶನ್ ಮರುದಿನ ಬೆಳಗ್ಗೆ 6 ಗಂಟೆ ಸುಮಾರಿಗೆ ಎದ್ದು ಬಿಸಿನೀರು ಸೇವಿಸಿದ್ದಾರಂತೆ.
ಹಾಗೆ ಮೊದಲ ದಿನಕ್ಕೆ ಹೋಲಿಕೆ ಮಾಡಿದ್ರೆ ದರ್ಶನ್ ಸದ್ಯ ತನ್ನ ಜೊತೆಗಿರುವ ನಾಲ್ವರು ಆರೋಪಿಗಳ ಜೊತೆಗೆ ಟೈಂ ಪಾಸ್ ಮಾಡುತ್ತಿದ್ದಾರಂತೆ. ದರ್ಶನ್ ಕೊಠಡಿಯಲ್ಲಿ ಟಿವಿ ಹಾಗೂ ಕೇರಂ ಬೋರ್ಡ್ ಇದ್ದು, ತನ್ನ ನಾಲ್ವರು ಸಹ ಆರೋಪಿಗಳ ಜೊತೆ ಕಾಲ ಕಳೆಯುತ್ತಿದ್ದಾರೆ ಎನ್ನಲಾಗುತ್ತಿದೆ.
ಅಷ್ಟು ತಾಕತ್ತಿದ್ದರೆ ಫ್ಯಾನ್ಸ್ ಹೋಗಿ ದರ್ಶನ್ ರನ್ನು ಬಿಡಿಸಿಕೊಂಡು ಬರಲಿ: ಸವಾಲು ಹಾಕಿದ ಉಮಾಪತಿ ಶ್ರೀನಿವಾಸ್ ಗೌಡ
ದರ್ಶನ್ ಅವರ ಬ್ಯಾರಕ್ ನಲ್ಲಿ ದರ್ಶನ್ ಜೊತೆಗೆ ರೇಣುಕಾಸ್ವಾಮಿ ಪ್ರಕರಣದ ಇತರೇ ಆರೋಪಿಗಳು ಇದ್ದು, ಆದರೆ ಅವರೊಂದಿಗೂ ದರ್ಶನ್ ಮಾತನಾಡುತ್ತಿಲ್ಲವಂತೆ. ನಿಮ್ಮಿಂದಲೇ ನನಗೆ ಹೀಗ್ ಆಯ್ತು ಎಂಬ ಬೇಸರದಲ್ಲಿ ಅವರೊಂದಿಗೂ ಮಾತನಾಡುತ್ತಿಲ್ಲವಂತೆ. ದರ್ಶನ್ ಅವರಿಗೆ ಅಟ್ಯಾಚ್ ಬಾತ್ ರೂಮ್ ಇರೋ ಕೊಠಡಿಯನ್ನು ಮಾತ್ರ ನೀಡಿದ್ದು, ಸಾಮಾನ್ಯ ಕೈದಿಯಂತೆ ಸಮಯ ಕಳೆಯುತ್ತಿದ್ದಾರಂತೆ ಎನ್ನಲಾಗಿದೆ.
ಡಿ ಗ್ಯಾಂಗ್ ನಿಂದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧವಾಗಿ ಇನ್ನೂ ಒಂದು ದಿನ ದರ್ಶನ್ ಹಾಗೂ ತಂಡ ಪೊಲೀಸ್ ಕಸ್ಟಡಿಯಲ್ಲಿರಲಿದೆ. ಮಹಜರು ಪ್ರಕ್ರಿಯೆ ಮುಗಿದ ಬಳಿಕ ದರ್ಶನ್ ಮನಸ್ಥಿತಿಯಲ್ಲಿ ಬದಲಾವಣೆಯಾಗಿದೆ. ಘಟನೆ ಬಗ್ಗೆ ದರ್ಶನ್ ಈಗ ತೀವ್ರ ಪಶ್ಚಾತ್ತಾಪದ ಮಾತುಗಳನ್ನಾಡುತ್ತಿದ್ದಾರಂತೆ.