ಪಡ್ಡೆ ಹುಡುಗರ ನಿದ್ದೆ ಕೆಡಿಸಿದರ ಸುಂದರಿ ಸನ್ನಿ ಲಿಯೋನ್ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಹದಿಹರೆಯದ ಹುಡುಗರಿಂದ ಹಿಡಿದು ಹಣ್ಣು ಹಣ್ಣು ಮುದುಕರು ಕೂಡ ಸನ್ನಿ ಲಿಯೋನ್ ಬಗ್ಗೆ ತಿಳಿದಿರುತ್ತಾರೆ. ಟಿವಿ ಅಥವಾ ಮೊಬೈಲ್ ಗಳಲ್ಲಿ ನೋಡಿರುತ್ತಾರೆ. ಅಂದ ಹಾಗೆ ಈಕೆ ನೀಲಿ ತಾರೆ ಅನ್ನೋದು ಕೂಡ ಪ್ರತಿಯೊಬ್ಬರಿಗೂ ಗೊತ್ತಿದೆ. ಆದರೆ ಈಕೆ ಅದರಿಂದ ಹೊರ ಬಂದಿದ್ದು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ.
ನಟಿ ಸನ್ನಿ ಲಿಯೋನ್ ಬಾಲ್ಯದಲ್ಲಿ ಬಹಳಷ್ಟು ಬಡತನ ಕಂಡವರು. ಕೆನಡಾದಲ್ಲಿ ಜನಿಸಿ ಅಲ್ಲಿಯೇ ಬಾಲ್ಯವನ್ನು ಕಳೆದಿರುವ ಸನ್ನಿ ಲಿಯೋನ್ ಭಾರತದ ಅಮ್ಮ ಹಾಗು ಕೆನಡಾದ ಅಪ್ಪ ಜೋಡಿಗೆ ಹುಟ್ಟಿದ ಮಗು. ಹೀಗಾಗಿ ಸನ್ನಿಗೆ ಭಾರತದ ಬೇರು ಸಹ ಇದೆ ಎನ್ನಬಹುದು. ಇಡೀ ಪ್ರಪಂಚದ ಗಮನ ಸೆಳೆದಿರುವ ನೀಲಿ ಚಿತ್ರತಾರೆ ಸನ್ನಿ ಲಿಯೋನ್, ಇತ್ತೀಚೆಗೆ ಸಾಕಷ್ಟು ಬದಲಾಗಿದ್ದಾರೆ ಎಂಬುದು ಬಹತೇಕರಿಗೆ ಗೊತ್ತು.
ಆದರೆ ಇಂದು ಸನ್ನಿ ಲಿಯೋನ್ ಮೊದಲಿಗೆ ಹೋಲಿಸಿಕೊಂಡರೆ ಬಹಳಷ್ಟು ಗೌರವ ಗಳಿಸಿಕೊಂಡಿದ್ದಾರೆ. ಅದಕ್ಕೆ ಕಾರಣವಾಗಿದ್ದು ಸನ್ನಿಯ ಬಹುಮುಖ ವ್ಯಕ್ತಿತ್ವ ಹಾಗೂ ಸಮಾಜ ಸೇವೆ. ಕೆನಡಾದಲ್ಲಿ ಬಡ ಕುಟುಂಬದಲ್ಲಿ ಹುಟ್ಟಿದ ಸನ್ನಿ ಲಿಯೋನ್ ಶಿಕ್ಷಣ ಪಡೆಯುತ್ತಿದ್ದ ಸಮಯದಲ್ಲೇ ಕುಟುಂಬದ ಜೀವನ ನಿರ್ವಹಣೆಗೆ ಬೇಕರಿಗೆ ಕೆಲಸಕ್ಕೆ ಸೇರಿದ್ದರು. ಶ್ರೀಮಂತಿಕೆಯ ಕನಸು ಕಂಡಿದ್ದ ಸನ್ನಿಗೆ ಆ ಕೆಲಸದಲ್ಲಿ ಸಂಬಳ ಕಮ್ಮಿ ಎನಿಸಿದಾಗ ಪೆಟ್ರೋಲ್ ಬಂಕ್ನಲ್ಲಿ ಕೆಲಸ ಮಾಡಿದ್ದರು.
ಹೀಗೆ, ಎಲ್ಲಿ ಸಂಬಳ ಹೆಚ್ಚು ಸಿಗುತ್ತೋ ಅಲ್ಲಿ ಕೆಲಸ ಮಾಡುತ್ತ ಹಣ ಸಂಪಾದನೆಗೆ ಹೆಚ್ಚು ಆಸಕ್ತಿ ತೋರಿಸಿದ್ದರು ಸನ್ನಿ ಲಿಯೋನ್. ಬಳಿಕ ಮ್ಯಾಗಝಿನ್ ಒಂದಕ್ಕೆ ಕವರ್ ಪೇಜ್ ಫೋಟೋಗೆ ಫೋಸ್ ಕೊಟ್ಟು ಫೇಮಸ್ ಆಗಿಬಿಟ್ಟರು ಸನ್ನಿ ಲಿಯೋನ್. ಅಲ್ಲಿಂದ ಮುಂದೆ ಖ್ಯಾತ ಮಾಡೆಲ್ ಆಗಿ ಬದಲಾದರು ಸನ್ನಿ ಲಿಯೋನ್. ಯಾರದೋ ಸಲಹೆಯ ಮೇರೆಗೆ ನೀಲಿ ಚಿತ್ರಜಗತ್ತಿಗೆ ಅರಿಯದೇ ಕಾಲಿಟ್ಟುಬಿಟ್ಟರು. ಆದರೆ, ಒಮ್ಮೆ ಕಾಲಿಟ್ಟ ಬಳಿಕ ಅದರಲ್ಲಿ ಸಾಕಷ್ಟು ಸಂಪಾದನೆ ಆಗುತ್ತಿದೆ ಎಂಬ ಕಾರಣಕ್ಕೆ ಹಲವು ವರ್ಷಗಳ ಕಾಲ ಅಲ್ಲಿ ಕೆಲಸ ಮಾಡಿ ಬಹಳಷ್ಟು ಹಣ ಸಂಪಾದಿಸಿದರು.
ಆದರೆ ಅಲ್ಲಿಂದ ಹೊರ ಬಂದ ಸನ್ನಿ ಇದೀಗ ಗೌರವಯುತ ಜೀವನ ನಡೆಸುತ್ತಿದ್ದಾರೆ. ‘ನಾನು ಬಾಲ್ಯದಲ್ಲಿದ್ದಾಗ ತುಂಬಾ ಬಡತನ ನೋಡಿದ್ದೆ. ಹೀಗಾಗಿ ಹಣ ಮಾಡಲು ಕತ್ತಲ ಜಗತ್ತಿನಲ್ಲಿ ಕೆಲಸ ಮಾಡಿದೆ. ಆದರೆ, ಬದುಕಿನ ಒಂದು ಹಂತದಲ್ಲಿ ನನಗೆ ಹಣವೇ ಎಲ್ಲವೂ ಅಲ್ಲ, ಅದನ್ನು ಮೀರಿದ ಜೀವನವಿದೆ ಎಂದು ಅರ್ಥವಾಯಿತು. ಹಣದಿಂದ ವಸ್ತಗಳನ್ನು ಕೊಳ್ಳಬಹುದೇ ಹೊರತೂ ಮಾನಸಿಕ ನೆಮ್ಮದಿ ಹಾಗೂ ಮನಶ್ಯಾಂತಿಯನ್ನಲ್ಲ. ಈಗಾಗಲೇ ನನ್ನಲ್ಲಿ ಹೇರಳವಾಗಿ ಹಣವಿದೆ. ಅದನ್ನೇ ದುಡಿಸಿಕೊಂಡರೂ ಬದುಕಿಗೆ ಸಾಕು ಎನ್ನಿಸಿತು, ಹೀಗಾಗಿ ನೀಲಿ ಚಿತ್ರಜಗತ್ತನ್ನು ತೊರೆದೆ’ ಎಂದಿದ್ದಾರೆ.
ಕತ್ತಲೇ ಲೋಕದಿಂದ ಹೊರ ಬಂದ ಸನ್ನಿ ಲಿಯೋನ್ ನೀಲಿ ಚಿತ್ರದ ನಿರ್ಮಾಪಕರಾದ ಡೇನಿಯಲ್ ವೆಬರ್ ಜೊಎ ವಿವಾಹವಾಗಿ ನೆಮ್ಮದಿಯ ಜೀವನ ನಡೆಸುತ್ತಿದ್ದಾರೆ. ಈಗ ಸನ್ನಿ ಲಿಯೋನ್ ಹಾಗೂ ಡೇನಿಯಲ್ ವೆಬರ್ ದಂಪತಿ ಒಂದು ಗಂಡು ಹಾಗು ಎರಡು ಹೆಣ್ಣು ಮಕ್ಕಳನ್ನು ದತ್ತು ತೆಗೆದುಕೊಂಡು ಸಾಕುತ್ತಿದ್ದಾರೆ. ತಮ್ಮದೇ ಆದ ರೀತಿಯಲ್ಲಿ ಸಂಸಾರದ ಸುಖಸವಿಯುತ್ತಿದ್ದಾರೆ. ಜತೆಗೆ, ಸಮಾಜದಲ್ಲಿ ನೊಂದವರಿಗೆ, ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತ ಹಲವರ ಕಂಬನಿ ಒರೆಸುವ ಕೆಲಸವನ್ನೂ ಮಾಡುತ್ತಿದ್ದಾರೆ. ಈ ಮೂಲಕ ಸನ್ನಿ ಸಾಕಷ್ಟುಮಂದಿಯ ಮೆಚ್ಚುಗೆ ಗಳಿಸಿದ್ದಾರೆ.