ಬ್ರಿಡ್ಜ್ಟೌನ್: ಟಿ20 ವಿಶ್ವಕಪ್ (T20 World Cup 2024) ಟೂರ್ನಿಯಲ್ಲಿ ಟೀಂ ಇಂಡಿಯಾ ಗೆಲುವಿನ ವಿಜಯೋತ್ಸವವನ್ನು ಎಲ್ಲೆಡೆ ವಿಶಿಷ್ಟ ರೀತಿಯಲ್ಲಿ ಆಚರಿಸಲಾಯಿತು. ಭಾರತೀಯರಿಗೆ ಅದೊಂದು ಭಾವುಕ ಕ್ಷಣವಾಗಿತ್ತು. ಭಾರತಕ್ಕೆ ಟ್ರೋಫಿ ತಂದುಕೊಟ್ಟ ನೆಲದ ಮಣ್ಣನ್ನು ತಿನ್ನುವ ಮೂಲಕ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಕೃತಜ್ಞತೆ ಸಲ್ಲಿಸಿದರು.
https://www.instagram.com/reel/C80j9I5Sq7Z/?utm_source=ig_web_copy_link
ಐಸಿಸಿ ಹಂಚಿಕೊಂಡಿರುವ ವೀಡಿಯೋದಲ್ಲಿ, ರೋಹಿತ್ ಶರ್ಮಾ (Rohit Sharma) ಅವರು ಮ್ಯಾಚ್ ಗೆದ್ದ ಬೆನ್ನಲ್ಲೇ ಬಾರ್ಬಡೋಸ್ ಪಿಚ್ನಿಂದ ಮಣ್ಣನ್ನು ಎತ್ತಿಕೊಂಡು ಬಾಯಿಗೆ ಹಾಕಿಕೊಳ್ಳುತ್ತಿದ್ದಾರೆ. ಐತಿಹಾಸಿಕ ಟ್ರೋಫಿಗೆ ಮುತ್ತಿಟ್ಟಿದ್ದು ಹಿಟ್ಮ್ಯಾನ್ಗೂ ಕೂಡ ಭಾವುಕ ಕ್ಷಣವಾಗಿತ್ತು.
ವಿಶ್ವಕಪ್ ಗೆದ್ದ ಭಾರತ ತಂಡಕ್ಕೆ ಸಿಕ್ಕ ಹಣವೆಷ್ಟು ಗೊತ್ತಾ!?.. ಅಬ್ಬಬ್ಬಾ ಕೇಳಿದ್ರೆ ಗಾಬರಿ ಆಗ್ತೀರಾ!
ವಿರಾಟ್ ಕೊಹ್ಲಿಯನ್ನು ಅಪ್ಪಿಕೊಂಡು ರೋಹಿತ್ ಖುಷಿ ಹಂಚಿಕೊಂಡಿದ್ದರು. ಟ್ರೋಫಿಯನ್ನು ಅಪ್ಪಿಕೊಂಡು ಸಾರ್ಥಕತೆ ಮೆರೆದಿದ್ದರು. ಪತ್ನಿಯನ್ನು ಅಪ್ಪಿ ರೋಹಿತ್ ಆನಂದಭಾಷ್ಪ ಸುರಿಸಿದರು.