ಬಾರ್ಬಡೋಸ್ನ ಕೆನ್ಸಿಂಗ್ಟನ್ ಓವಲ್ ಮೈದಾನದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 7 ರನ್ಗಳ ರೋಚಕ ಜಯ ಸಾಧಿಸುವ ಜೊತೆಗೆ ಭಾರತ 2ನೇ ಬಾರಿಗೆ ಟಿ20 ವಿಶ್ವಕಪ್ (T20 World Cup 2024) ಟ್ರೋಫಿ ಗೆದ್ದುಕೊಂಡಿತು. ಐಸಿಸಿ ಪ್ರಶಸ್ತಿ ಗೆಲುವಿನ ನಂತರ ಭಾರತ ಸಂಭ್ರಮದಲ್ಲಿರುವಾಗಲೇ ಜಡೇಜಾ ಅವರು ವಿರಾಟ್ ಕೊಹ್ಲಿ ಮತ್ತು ಅವರ ನಾಯಕ ರೋಹಿತ್ ಶರ್ಮಾ ಅವರ ಹಾದಿಯನ್ನೇ ಅನುಸರಿಸಿದ್ದು, ಗೆಲುವಿನೊಂದಿಗೆ ವಿದಾಯ ಹೇಳಿದ್ದಾರೆ.
ಹೇಗಿದೆ ಟಿ20 ಕ್ರಿಕೆಟ್ ಹಾದಿ?
ಸ್ಪಿನ್-ಬೌಲಿಂಗ್ ಆಲ್ರೌಂಡರ್ ಎಂ.ಎಸ್ ಧೋನಿ (MS Dhoni) ನಾಯಕತ್ವದಲ್ಲಿ ಜಡೇಜಾ ಟೀಂ ಇಂಡಿಯಾಕ್ಕೆ ಪದಾರ್ಪಣೆ ಮಾಡಿದ್ದರು. 2009ರ ಫೆಬ್ರವರಿ 10 ರಂದು ಶ್ರೀಲಂಕಾ ವಿರುದ್ಧ ಪಂದ್ಯದ ಮೂಲಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ಗೆ ಎಂಟ್ರಿ ಕೊಟ್ಟಿದ್ದರು. ಕೊಲಂಬೊದಲ್ಲಿ ಪಂದ್ಯ ನಡೆದಿತ್ತು. ಅಂದಿನಿಂದ ಈವರೆಗೆ ಜಡೇಜಾ ಟೀಂ ಇಂಡಿಯಾಕ್ಕೆ ಶ್ರಮಿಸಿದ್ದಾರೆ. ಇದೀಗ 15 ವರ್ಷಗಳ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ ವೃತ್ತಿ ಬದುಕಿಗೆ ಪೂರ್ಣವಿರಾಮ ಇಟ್ಟಿದ್ದಾರೆ.
ಶ್ರೀಲಂಕಾ ವಿರುದ್ಧ ಟಿ20 ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಜಡೇಜಾ ಒಟ್ಟು 74 ಪಂದ್ಯ, 41 ಇನ್ನಿಂಗ್ಸ್ಗಳನ್ನಾಡಿದ್ದು, 515 ರನ್ ಗಳಿಸಿದ್ದಾರೆ. ಇದರಲ್ಲಿ 39 ಬೌಂಡರಿ, 14 ಸಿಕ್ಸರ್ಗಳೂ ಸೇರಿವೆ. 46 ವೈಯಕ್ತಿಕ ಗರಿಷ್ಠ ರನ್ ಆಗಿದೆ. ಬೌಲಿಂಗ್ನಲ್ಲಿ 54 ವಿಕೆಟ್ಗಳನ್ನೂ ಪಡೆದುಕೊಂಡಿರುವ ಜಡೇಜಾ 28 ಕ್ಯಾಚ್ಗಳನ್ನ ಹಿಡಿದಿದ್ದಾರೆ. ಅಲ್ಲದೇ ಎಂ.ಎಸ್ ಧೋನಿ, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಅವರ ನಾಯಕತ್ವದಲ್ಲಿ ಆಡಿದ ಹೆಗ್ಗಳಿಗೂ ಇವರಿಗಿದೆ.