ಜಾರ್ಜಿಯಾ:- ಜಾರ್ಜಿಯಾದ ಗ್ರೋವ್ಟೌನ್ ಪೊಲೀಸರು ಕಾರ್ಯಚರಣೆ ನಡೆಸಿ ಎರಡು ವರ್ಷದ ಮಗಳನ್ನು ಲೈಂಗಿಕ ಚಟುವಟಿಕೆಗಾಗಿ ಮಾರಾಟ ಮಾಡಲು ಯತ್ನಿಸಿದ ದುಷ್ಟ ದಂಪತಿಯನ್ನು ಅರೆಸ್ಟ್ ಮಾಡಿದ್ದಾರೆ.
New Criminal Laws: ದೇಶಾದ್ಯಂತ ಹೊಸ ಕ್ರಿಮಿನಲ್ ಕಾನೂನು ಇಂದಿನಿಂದ ಜಾರಿ.. ಕಂಪ್ಲೀಟ್ ಡೀಟೈಲ್ಸ್ ಇಲ್ಲಿದೆ!
26 ವರ್ಷದ ಆಶ್ಲೀ ಕ್ರಾಲಿ, 29 ವರ್ಷದ ಜೇಮ್ಸ್ ಟ್ರಿಪ್ ಬಂಧಿತರು ಎನ್ನಲಾಗಿದೆ. ಕ್ರಾಲಿ ಮತ್ತು ಟ್ರಿಪ್ ತಮ್ಮ 2 ವರ್ಷದ ಮಗಳೊಂದಿಗೆ ಲೈಂಗಿಕ ಚಟುವಟಿಕೆ ನಡೆಸಲು ಹಣ ಪಾವತಿಸಲು ಸಿದ್ಧರಿರುವ ಪುರುಷರನ್ನು ಹುಡುಕುತ್ತಿದ್ದರು. ಇದಕ್ಕಾಗಿ ಆನ್ಲೈನ್ ಚಾಟ್ರೂಮ್ ಅನ್ನು ಬಳಸಿದ್ದಾರೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ಕ್ರಾಲಿ ಅಶ್ಲೀಲ ವಿಡಿಯೋಗಳನ್ನು ತಯಾರಿಸಿ ಅದನ್ನು ಆನ್ಲೈನ್ನಲ್ಲಿ ಮಾರಾಟ ಮಾಡುತ್ತಿದ್ದರು
ಇದರಲ್ಲಿ ಕೆಲವು ವಿಡಿಯೋಗಳು ಅಂಬೆಗಾಲಿಡುವ ಮಕ್ಕಳು ಸೇರಿದಂತೆ ಅವರ ಮಕ್ಕಳನ್ನು ಒಳಗೊಂಡಿವೆ. ಟ್ರಿಪ್ ತನ್ನ ಅಪ್ರಾಪ್ತ ವಯಸ್ಸಿನ ಸಂಬಂಧಿಗಳೊಂದಿಗೆ ಲೈಂಗಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲು ಕ್ರಾಲಿಯ ಅನುಮತಿಯನ್ನೂ ಪಡೆಯುತ್ತಿದ್ದನು.
ಇವರ ಆರೈಕೆಯಲ್ಲಿದ್ದ ಎಲ್ಲಾ ಮಕ್ಕಳನ್ನು ಅವರ ಮನೆಯಿಂದ ಅಧಿಕಾರಿಗಳು ತ್ವರಿತವಾಗಿ ರಕ್ಷಣೆ ಮಾಡಿದ್ದಾರೆ. ಕ್ರಾಲಿ ವಿರುದ್ಧ ಮಕ್ಕಳ ಮೇಲೆ ಕಿರುಕುಳ ಮತ್ತು ಕಂಪ್ಯೂಟರ್ ಅಥವಾ ಎಲೆಕ್ಟ್ರಾನಿಕ್ ಪೋರ್ನೋಗ್ರಫಿ ಮತ್ತು 2007ರ ಮಕ್ಕಳ ಶೋಷಣೆ ಮತ್ತು ತಡೆಗಟ್ಟುವಿಕೆ ಕಾಯಿದೆಯನ್ನು ಉಲ್ಲಂಘಿಸಿದ ಪ್ರಕರಣಗಳನ್ನು ದಾಖಲಿಸಲಾಗಿದೆ.