ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ ಬಗ್ಗೆ ನಾದಬ್ರಹ್ಮ ಹಂಸಲೇಖ ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ದರ್ಶನ್ ನನ್ನ ಮಗು ಅಂತ ತಿಳಿದುಕೊಳ್ಳಿ. ಮಗು ತಪ್ಪು ಮಾಡಿದಾಗ ತಂದೆಗೆ ಎಷ್ಟು ನೋವಾಗುತ್ತದೋ ನನಗೆ ಅಷ್ಟು ನೋವಾಗಿದೆ. ಆ ಮಗು ಕೂಡ ಅಷ್ಟೇ ನೋವು ಅನುಭವಿಸುತ್ತಿರುತ್ತದೆ. ನಾವು ಆತ ಕೊಟ್ಟಿರುವ ಕೊಡುಗೆ ಕಡೆಗೆ ನೋಡೋಣ’ ಎಂದರು
Gold Price: ಚಿನ್ನದ ಬೆಲೆ ಅಲ್ಪ ಹೆಚ್ಚಳ.. ವಾರದ ಆರಂಭದ ಇಂದಿನ ಗೋಲ್ಡ್ ದರ ಇಲ್ಲಿದೆ ನೋಡಿ..!
ಸಂಸ್ಕೃತದಲ್ಲಿ ಅತ್ಯುನ್ನತೇ ಪತನಹೇತು ಎಂಬ ಮಾತಿದೆ. ಚಂದನವನ ಎಷ್ಟು ಕೀರ್ತಿಯನ್ನು ಗಳಿಸಿತು. ಎಷ್ಟೋ ರಾಷ್ಟ್ರ ಪ್ರಶಸ್ತಿ ಸಿಕ್ಕಿದೆ. ಎಂಥೆಂಥಾ ಪ್ರತಿಭಾವಂತರು ಇಲ್ಲಿ ಹುಟ್ಟಿ ಬೆಳೆದಿದ್ದಾರೆ. ಅಷ್ಟು ಎತ್ತರಕ್ಕೆ ಏರಿದ ಮೇಲೆ ಕೆಳಗೆ ಬೀಳಬೇಕಾಗುತ್ತದೆ. ಹಾಗಾಗುವುದು ಬೇಡ. ಅಲ್ಲಿಂದ ಬಿದ್ದಿದ್ದು ಕೂಡ ಮತ್ತೆ ಏಳುವ ಸಾಧ್ಯತೆ ಇದೆ. ಕೇರಳ ಚಿತ್ರೋದ್ಯಮ ಹೀಗೆಯೇ ಆಗಿತ್ತು. ಅದು ಈಗ ಉತ್ತುಂಗದಲ್ಲಿದೆ. ಅಂದರೆ, ಕೆಳಗೆ ಬಿದ್ದು, ಮೇಲೆದ್ದಿದೆ. ಒಂದು ಮಳೆಗೆ ಮರ ಒಣಗಿದರೆ ಇನ್ನೊಂದು ಮಳೆಗೆ ಕಾಡು ಬೆಳೆಯುತ್ತದೆ. ನಾವು ಸಿನಿಮಾ ಕಲಾವಿದರು. ಸಿಟ್ಟನ್ನು ಸ್ಕ್ರಿಪ್ಟ್ ಮಾಡಬೇಕು. ದ್ವೇಷವನ್ನು ಪಾತ್ರವಾಗಿ ಮಾಡಬೇಕು. ನಿಜಜೀವನದಲ್ಲಿ ಆ ಪಾತ್ರವಾಗಬಾರದು ಎಂದು ಹೇಳಿಕೆ ನೀಡಿದ್ದಾರೆ.