ಬಳ್ಳಾರಿ:- ಜಿಲ್ಲೆಯ ಕುರುಗೋಡು ತಾಲೂಕಿನ ಸೋಮಸಮುದ್ರ ಗ್ರಾಮದಲ್ಲಿ ದಲ್ಲಾಳಿಗಳ ಕಾಟದಿಂದ ಬೇಸತ್ತು ನಾಲ್ವರು ರೈತರು ಆತ್ಮಹತ್ಯೆಗೆ ಯತ್ನಿಸಿರುವಂತಹ ಘಟನೆ ಜರುಗಿದೆ.
ಶಿಸ್ತಿಲ್ಲದ ಜೀವನ, ಜಂಕ್ ಫುಡ್: ಯುವಕರೇ, ಹೃದಯಾಘಾತ ಬಗ್ಗೆ ಎಚ್ಚೆತ್ತುಕೊಳ್ಳಿ..
ಅಸ್ವಸ್ಥಗೊಂಡ ನಾಲ್ವರು ರೈತರನ್ನು ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ತುರ್ತು ಚಿಕಿತ್ಸಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ರುದ್ರೇಶ್, ಶೇಖರಪ್ಪ, ಹನುಮಂತ, ಕೋಣೇರಪ್ಪ ಆತ್ಮಹತ್ಯೆಗೆ ಯತ್ನಿಸಿದ ರೈತರು ಎಂದು ತಿಳಿದು ಬಂದಿದೆ.
ಕಳೆದ ವರ್ಷ ಅಗ್ರಿಗ್ರೇಡ್ ಕಂಪನಿಯ ವಿರೂಪಾಕ್ಷಪ್ಪ, ಸುದರ್ಶನ, ರಾಯರೆಡ್ಡಿ ಎಂಬ ದಲ್ಲಾಳಿ ಮೂಲಕ ರೈತರು ಮೆಣಸಿನಕಾಯಿ ಮಾರಾಟ ಮಾಡಿದ್ದರು. ಆಶಾರಾಣಿ, ಅಶೋಕಕುಮಾರ್, ಶಿವಮೂರ್ತಿ ಎಂಬುವವರಿಂದ ಮೆಣಸಿನಕಾಯಿ ಖರೀದಿ ಆರೋಪ ಮಾಡಲಾಗಿದೆ. 1 ಕೋಟಿ 93 ಲಕ್ಷ ರೂ. ಹಣವನ್ನು ದಲ್ಲಾಳಿಗಳು ಬಾಕಿ ಉಳಿಸಿಕೊಂಡಿದ್ದಾರೆ.
ಕಳೆದ 18 ತಿಂಗಳಿಂದ ಹಣ ನೀಡದೆ ಸತಾಯಿಸುತ್ತಿದ್ದಾರೆ. ಹೀಗಾಗಿ ದಲ್ಲಾಳಿಗಳ ಕಳ್ಳಾಟಕ್ಕೆ ಮನನೊಂದು ವಿಷ ಸೇವಿಸಿದ್ದರು ಎನ್ನಲಾಗಿದೆ.