ಗದಗ:- ಪಠ್ಯದಲ್ಲಿ ವೀರಶೈವ ಪದ ತೆಗೆಯುವ ವಿಚಾರವಾಗಿ ಸಂಸದ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದಾರೆ.
CM ಸ್ಥಾನದಿಂದ ಸಿದ್ದು ಬದಲಾವಣೆ ಮಾಡಿದ್ರೆ ರಾಜ್ಯಾದ್ಯಂತ ಹೋರಾಟ: ಅಹಿಂದ ಎಚ್ಚರಿಕೆ
ಈ ಸಂಬಂಧ ಮಾತನಾಡಿದ ಅವರು,ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪಠ್ಯಪುಸ್ತಕ ಪರಿಷ್ಕರಣೆಯನ್ನು ನಿರಂತರವಾಗಿ ಮಾಡುತ್ತಿದೆ. ಅದರಲ್ಲಿ 9ನೇ ತರಗತಿ ಪಠ್ಯಪುಸ್ತಕದಲ್ಲಿ ಅಳವಡಿಕೆ ಮಾಡಿದ್ದ ವೀರಶೈವ ಪದವನ್ನು ತೆಗೆದುಹಾಕಿರುವ ಬಗ್ಗೆ ಮಾಹಿತಿಯಿಲ್ಲ. ಹಾಗೇನಾದರೂ ಮಾಡಿದ್ದರೆ ಸರ್ಕಾರದ ಕಿವಿ ಹಿಂಡಲಾಗುವುದು ಎಂದರು.
ಪಠ್ಯಪುಸ್ತಕದಲ್ಲಿ ವೀರಶೈವ ಪದ ತೆಗೆದು ಹಾಕಿರುವ ಬಗ್ಗೆ ನೋಡಿಲ್ಲ. 9ನೇ ತರಗತಿ ಪಠ್ಯದಲ್ಲಿ ಅಳವಡಿಕೆ ಮಾಡಲಾಗಿದ್ದ ವೀರಶೈವ ಎಂಬ ಪದವನ್ನು ತೆಗೆದಿದ್ದಾರೆ ಅಂತ ಹೇಳುತ್ತಿದ್ದಾರೆ, ಆದರೆ ಈ ಬಗ್ಗೆ ನಾನು ಸೂಕ್ಷ್ಮವಾಗಿ ಗಮನಿಸಿಲ್ಲ. ಹಾಗೇನಾದರೂ ಆಗಿದ್ದರೆ, ಸರಿಪಡಿಸಿ ಅಂತಾ ರಾಜ್ಯ ಸರ್ಕಾರವನ್ನು ಆಗ್ರಹಿಸುತ್ತೇನೆ. ಇನ್ನು ಕಾಂಗ್ರೆಸ್ ನ ಯಾರೂ ನಮ್ಮನ್ನು ಸಂಪರ್ಕ ಮಾಡಿಲ್ಲ. ಆದರೆ, ಆಂತರಿಕವಾಗಿ ಕಾಂಗ್ರೆಸ್ ನಲ್ಲಿ ವೈರುದ್ಧ ಇರುವುದು ಸ್ಪಷ್ಟವಾಗಿದೆ ಎಂದು ತಿಳಿಸಿದರು
ರಾಜ್ಯದಲ್ಲಿ ಸಿಎಂ, ಡಿಸಿಎಂ ವಿಷಯವಾಗಿ ಅವರ ಅಭಿಪ್ರಾಯ ಹೇಳುತ್ತಾರೆ. ಆದರೆ, ರಾಜಕಾರಣಕ್ಕೆ ವಿಧಿವಿಧಾನಗಳಿವೆ. ಸ್ವಾಮೀಜಿಗಳ ಹೇಳಿಕೆ ಬಗ್ಗೆ ನಾನು ವ್ಯಾಖ್ಯಾನ ಮಾಡುವುದಿಲ್ಲ. ಆದರೆ, ಯಾರನ್ನು ಮುಖ್ಯಮಂತ್ರಿಯಾಗಿ ಮುಂದುವರೆಸಬೇಕು. ಮೂರು ನಾಲ್ಕು ಡಿಸಿಎಂಗಳನ್ನು ಮಾಡಬೇಕಾ ಅನ್ನುವುದು ಕಾಂಗ್ರೆಸ್ ಗೆ ಬಿಟ್ಟಿದ್ದು. ಎಷ್ಟು ಜನರಿಗೆ ಡಿಸಿಎಂ ಮಾಡ್ತಾರೆ ಕಾದು ನೋಡೋಣ. ಅವರ ಆಂತರಿಕ ವಿಚಾರವಾಗಿ ನಾನು ಮಾತನಾಡುವುದಿಲ್ಲ ಎಂದರು.