ನವದೆಹಲಿ: ಬ್ಯಾಂಕ್ ಖಾತೆಗಳಿಗೆ ಅಟ್ಯಾಚ್ ಆಗಿರುವ ಮೊಬೈಲ್ ನಂಬರ್ ಗಳಿಗೆ ಸಂಬಂಧಿಸಿದ ಸಿಮ್ ಗಳನ್ನು ಸ್ವಾಪ್ ಮಾಡಿ ಅಥವಾ ಅವುಗಳ ನಕಲಿ ಸಿಮ್ ಕಾರ್ಡ್ ಪಡೆಯುವ ಮೂಲಕ ನಿಮ್ಮದೇ ಬ್ಯಾಂಕ್ ಖಾತೆಯಿಂದ ಹಣ ಎಗರಿಸುತ್ತಿದ್ದವರ ಆಟಕ್ಕೆ ಇಂದು (ಜು. 1) ಬಂದ್ ಆಗಲಿದೆ. ಇದಕ್ಕಾಗಿ, ಮೊಬೈಲ್ ಪೋರ್ಟಬಿಲಿಟಿ ನಿಯಮಗಳಿಗೆ, ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಹೊಸ ತಿದ್ದುಪಡಿ ತಂದಿದ್ದು, ಆ ಮೂಲಕ ಮೊಬೈಲ್ ನಂಬರ್ ಗ್ರಾಹಕರಿಗೆ ಹೆಚ್ಚಿನ ಸುರಕ್ಷತೆಯನ್ನು ತಂದಿದೆ. ಈ ಹೊಸ ನಿಯಮಗಳು ಜು. 1ರಿಂದ ಜಾರಿಯಾಗಲಿವೆ.
ಯಾವ ನಿಯಮ ಬದಲಾವಣೆ?
ಸಾಮಾನ್ಯವಾಗಿ, ಮೊಬೈಲ್ ನಂಬರ್ ಪೋರ್ಟಬಿಲಿಟಿ ಮಾಡುವಾಗ (ಅದೇ ಮೊಬೈಲ್ ನಂಬರ್ ಉಳಿಸಿಕೊಂಡು ಒಂದು ನೆಟ್ ವರ್ಕ್ ನಿಂದ ಮತ್ತೊಂದು ನೆಟ್ ವರ್ಕ್ ಗೆ ಹೋಗುವಾಗ) ಅಥವಾ ಈಗ ಚಾಲ್ತಿಯಲ್ಲಿರುವ ಸಿಮ್ ಕಾರ್ಡ್ ಗಳ ಬದಲಿಗೆ ಅದೇ ನಂಬರಿಗೆ ಬೇರೊಂದು ಸಿಮ್ ಪಡೆಯುವಾಗ, ಯೂನಿಕ್ ಪೋರ್ಟಿಂಗ್ ಕೋಡ್ (ಯುಪಿಸಿ) ನೀಡಲಾಗುತ್ತಿತ್ತು. ಆದರೆ, ಇನ್ನು ಮುಂದೆ ನೀವು ನಿಮ್ಮ ಸಿಮ್ ಕಾರ್ಡ್ ಬದಲಾಯಿಸುವಾಗ ಅಥವಾ ಪೋರ್ಟಬಿಲಿಟಿ ಮಾಡಲು ಅರ್ಜಿ ಸಲ್ಲಿಸಿದ 7 ದಿನಗಳವರೆಗೆ ಯುಪಿಸಿ ನೀಡಲಾಗುವುದಿಲ್ಲ.
Consuming Milk After Eating Fish: ಮೀನು ತಿಂದ್ಮೇಲೆ ತಪ್ಪಿಯೂ ಹಾಲು ಕುಡಿಯಬೇಡಿ..! ಯಾಕೆ ಗೊತ್ತಾ..?
ನಿಮಗೆ ಹೊಸ ಸಿಮ್ ನೀಡಲಾಗುತ್ತದೆಯಾದರೂ ಯುಪಿಸಿ ಬರುವವರೆಗೂ ಅದು ಆ್ಯಕ್ಟಿವೇಟ್ ಮಾಡಲಾಗುವುದಿಲ್ಲ. ಆ ಯುಪಿಸಿ ನಂಬರ್ ಗಾಗಿ ಏಳು ದಿನಗಳವರೆಗೆ ಕಾಯಲೇಬೇಕು. ಅಲ್ಲಿಯವರೆಗೂ ನಿಮ್ಮ ಸಿಮ್ ಕಾರ್ಡ್ ಇನ್ ಆ್ಯಕ್ಟಿವೇಟ್ ಆಗಿರಲಿದೆ. ಇದರಿಂದ ಆನ್ ಲೈನ್ ವಂಚಕರು ನಿಮ್ಮ ಮೊಬೈಲ್ ನಂಬರನ್ನು ಸ್ವಾಪ್ ಮಾಡಿ ನಕಲಿ ಸಿಮ್ ಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಹಾಗೊಂದು ವೇಳೆ, ಹೊಸ ಸಿಮ್ ಕಾರ್ಡ್ ಗೆ ಬೇಕಾದ ಯುಪಿಸಿ ನಂಬರ್ ತುರ್ತಾಗಿ ಬೇಕು ಎಂದು ಮನವಿ ಮಾಡಿದರೂ ಅದು ಮಾನ್ಯವಾಗುವುದಿಲ್ಲ.
ವಾರದವರೆಗೆ ತಡ ಮಾಡುವುದರಿಂದ ವಂಚನೆ ತಪ್ಪಿಸಲು ಹೇಗೆ ಸಾಧ್ಯ?
ಸಾಮಾನ್ಯವಾಗಿ ಆನ್ ಲೈನ್ ವಂಚಕರು, ನಿಮ್ಮ ಸಿಮ್ ಕಾರ್ಡ್ ಬದಲಾಗಿ ನಕಲಿ ಸಿಮ್ ಕಾರ್ಡ್ ಪಡೆದು ಅದನ್ನು ಬಳಸುವ ಮೂಲಕ ನಿಮ್ಮ ಬ್ಯಾಂಕ್ ಗಳಿಂದ ನಿಮಗೆ ಬರುವ ಸಂದೇಶಗಳನ್ನು ಹಾಗೂ ನಿಮ್ಮ ಖಾಸಾ ದತ್ತಾಂಶಗಳನ್ನು ಕದಿಯುತ್ತಿರುತ್ತಾರೆ. ಆದರೆ, ನಕಲಿ ಸಿಮ್ ಕಾರ್ಡ್ ಪಡೆಯಲು ಅವರು ಯಾವುದಾದರೂ ಮೊಬೈಲ್ ಕಂಪನಿಯ ಔಟ್ ಲೆಟ್ ನಲ್ಲಿ ಅರ್ಜಿ ಸಲ್ಲಿಸಿದಾಗ ಅವರಿಗೆ ಯುಪಿಸಿ ನಂಬರ್ ಅನ್ನು ಸಂಬಂಧಪಟ್ಟ ಮೊಬೈಲ್ ಕಂಪನಿಯು ನೀಡುತ್ತದೆ.
ಅದರಿಂದ ಅವರು ಕೆಲವೇ ನಿಮಿಷಗಳಲ್ಲಿ ನಕಲಿ ಸಿಮ್ ಕಾರ್ಡ್ ಅನ್ನು ಪಡೆಯಲು ಸಾಧ್ಯವಾಗುತ್ತಿತ್ತು. ಆದರೆ ಇನ್ನು ಮುಂದೆ, ಯುಪಿಸಿ ಕೋಡ್ ಬರಲು ಇನ್ನು ಮುಂದೆ ಒಂದು ವಾರ ತಡವಾಗುವುದರಿಂದ ನಿಮ್ಮ ಸಿಮ್ ಕಾರ್ಡ್ ಗೆ ಬದಲಿ ಸಿಮ್ ಕಾರ್ಡ್ ಅನ್ನು ತಕ್ಷಣವೇ ಪಡೆಯಲು ಸಾಧ್ಯವಾಗುವುದಿಲ್ಲ ಎಂಬುದು ಟ್ರಾಯ್ ಹೇಳಿದೆ.