ಬೆಂಗಳೂರು: ಭಾರತೀಯ ರಿಸರ್ವ್ ಬ್ಯಾಂಕ್ ಕ್ಯಾಲೆಂಡರ್ ಪ್ರಕಾರ, ಜುಲೈನಲ್ಲಿ ಬ್ಯಾಂಕುಗಳಿಗೆ 12 ದಿನಗಳ ರಜೆ ಇರಲಿದೆ. ಇದು ಸಾರ್ವಜನಿಕ ಮತ್ತು ಖಾಸಗಿ ವಲಯದ ಬ್ಯಾಂಕುಗಳೆರಡಕ್ಕೂ ಅನ್ವಯಿಸುತ್ತದೆ. ಆದರೆ, ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್ಬಿಐ) ಪ್ರಕಟಿಸಿರುವ ಬ್ಯಾಂಕು ರಜಾದಿನಗಳು ಏಕಕಾಲದಲ್ಲಿ ದೇಶದಾದ್ಯಂತ ಎಲ್ಲಾ ಬ್ಯಾಂಕುಗಳಿಗೆ ಅನ್ವಯಿಸುವುದಿಲ್ಲ. ಈ 12 ರಜಾ ದಿನಗಳ ಪೈಕಿ ನಾಲ್ಕು ಭಾನುವಾರ ಮತ್ತು ಎರಡು ಶನಿವಾರದ ರಜೆಗಳೂ ಒಳಗೊಂಡಿವೆ.
Consuming Milk After Eating Fish: ಮೀನು ತಿಂದ್ಮೇಲೆ ತಪ್ಪಿಯೂ ಹಾಲು ಕುಡಿಯಬೇಡಿ..! ಯಾಕೆ ಗೊತ್ತಾ..?
ಈ ಜುಲೈ ತಿಂಗಳಲ್ಲಿ ಮೊಹರಂ ಹಬ್ಬ ಇದ್ದು ದೇಶ ಹೆಚ್ಚಿನ ಪ್ರದೇಶಗಳಲ್ಲಿ ಬ್ಯಾಂಕ್ ರಜೆ ಇರುತ್ತದೆ. ಜುಲೈ 17 ಇರುವ ಮೊಹರಂ ಹಬ್ಬದಂದು ಕರ್ನಾಟಕದಲ್ಲೂ ರಜೆ ಇದೆ. ಶನಿವಾರ ಮತ್ತು ಭಾನುವಾರದ ರಜೆ ಹೊರತುಪಡಿಸಿದರೆ ಜುಲೈ ತಿಂಗಳಲಿ ಕರ್ನಾಟಕದಲ್ಲಿ ರಜೆ ಇರುವುದು ಮೊಹರಂಗೆ ಮಾತ್ರವೇ. ಕರ್ನಾಟಕದಲ್ಲಿ ಜುಲೈನಲ್ಲಿ ಒಟ್ಟು ಇರುವ ರಜೆಗಳ ಸಂಖ್ಯೆ ಏಳು ಮಾತ್ರ. ಈಶಾನ್ಯದ ನಾಲ್ಕು ರಾಜ್ಯಗಳಲ್ಲಿ ತಲಾ ಒಂದೊಂದು ವಿಶೇಷ ರಜಾ ದಿನಗಳಿವೆ.
2024ರ ಜುಲೈ ತಿಂಗಳಲ್ಲಿ ಬ್ಯಾಂಕ್ ರಜಾದಿನಗಳ ಪಟ್ಟಿ
- ಜುಲೈ 3, ಬುಧವಾರ: ಬೇಹ್ ಡೇನ್ಖ್ಲಾಮ್ (ಮೇಘಾಲಯದಲ್ಲಿ ರಜೆ)
- ಜುಲೈ 6, ಶನಿವಾರ: ಎಂಎಚ್ಐಪಿ ದಿನ (ಮಿಜೋರಾಂನಲ್ಲಿ ರಜೆ)
- ಜುಲೈ 7: ಭಾನುವಾರದ ರಜೆ
- ಜುಲೈ 8, ಸೋಮವಾರ: ಕ್ಯಾಂಗ್ ರಥಯಾತ್ರೆ (ಮಣಿಪುರದಲ್ಲಿ ರಜೆ)
- ಜುಲೈ 9, ಮಂಗಳವಾರ: ದ್ರುಕಪ ಟ್ಸೆಜಿ (ಸಿಕ್ಕಿಂನಲ್ಲಿ ರಜೆ)
- ಜುಲೈ 13: ಎರಡನೇ ಶನಿವಾರದ ರಜೆ
- ಜುಲೈ 14: ಭಾನುವಾರದ ರಜೆ
- ಜುಲೈ 16, ಮಂಗಳವಾರ: ಹರೇಲ (ಉತ್ತರಾಖಂಡ್ನಲ್ಲಿ ರಜೆ)
- ಜುಲೈ 17, ಬುಧವಾರ: ಮೊಹರಂ (ಗುಜರಾತ್, ಒಡಿಶಾ, ಚಂಡೀಗಡ, ಉತ್ತರಾಖಂಡ್, ಸಿಕ್ಕಿಂ, ಅಸ್ಸಾಂ, ಮಣಿಪುರ್, ಇಟಾನಗರ್, ಕೇರಳ, ನಾಗಾಲ್ಯಾಂಡ್, ಗೋವಾ ಹೊರತುಪಡಿಸಿ ಉಳಿದೆಲ್ಲೆಡೆ ರಜೆ)
- ಜುಲೈ 21: ಭಾನುವಾರದ ರಜೆ
- ಜುಲೈ 27: ನಾಲ್ಕನೇ ಶನಿವಾರದ ರಜೆ
- ಜುಲೈ 28: ಭಾನುವಾರದ ರಜೆ
2024ರ ಜುಲೈ ತಿಂಗಳಲ್ಲಿ ಕರ್ನಾಟಕದಲ್ಲಿ ರಜಾದಿನಗಳ ಪಟ್ಟಿ
- ಜುಲೈ 7: ಭಾನುವಾರದ ರಜೆ
- ಜುಲೈ 13: ಎರಡನೇ ಶನಿವಾರದ ರಜೆ
- ಜುಲೈ 14: ಭಾನುವಾರದ ರಜೆ
- ಜುಲೈ 17, ಬುಧವಾರ: ಮೊಹರಂ
- ಜುಲೈ 21: ಭಾನುವಾರದ ರಜೆ
- ಜುಲೈ 27: ನಾಲ್ಕನೇ ಶನಿವಾರದ ರಜೆ
- ಜುಲೈ 28: ಭಾನುವಾರದ ರಜೆ