ದಕ್ಷಿಣ ಕನ್ನಡ:- ಮಂಗಳೂರಿನ ಬೆಳ್ತಂಗಡಿ ತಾಲೂಕಿನ ಉಜಿರೆಯಲ್ಲಿ ಸಾಲ ವಾಪಸ್ ಕೇಳಿದ್ದಕ್ಕೆ ಬಟ್ಟೆ ಅಂಗಡಿಗೆ ನುಗ್ಗಿ ಮಹಿಳೆ ಮೇಲೆ ಹಲ್ಲೆ ನಡೆಸಿದ ಘಟನೆ ಜರುಗಿದೆ.
Breaking News: ಕೆರೆಗೆ ಹಾರಿ ಸೂಸೈಡ್ ಗೆ ಯತ್ನಿಸಿದ ತಾಯಿ ಬಚಾವ್..ಇಬ್ಬರು ಮಕ್ಕಳು ಸಾವು..!
ರೂಪಾ ಎಂಬ ಮಹಿಳೆ, ನವೀನ್ ಕನ್ಯಾಡಿ ಎಂಬಾತನಿಗೆ 7 ಲಕ್ಷ ರೂ ಸಾಲ ನೀಡಿದ್ದರು. ಅದೇ ಹಣವನ್ನು ವಾಪಸ್ ಕೇಳಿದ್ದಕ್ಕೆ ಮಹಿಳೆ ರೂಪಾ ಮೇಲೆ ಬಟ್ಟೆ ಅಂಗಡಿಗೆ ನುಗ್ಗಿ ಬಿಜೆಪಿ ಕಾರ್ಯಕರ್ತ ಹಾಗೂ ಹೂವಿನ ವ್ಯಾಪಾರಿಯಾದ ನವೀನ್ ಹಲ್ಲೆ ಮಾಡಿದ್ದಾನೆ
ಉಜಿರೆಯಲ್ಲಿ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದ ಧರ್ಮಸ್ಥಳದ ಮಹಿಳೆ ರೂಪಾ, ಇದೀಗ ಗಾಯಗೊಂಡು ಉಜಿರೆಯ ಎಸ್ಡಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇನ್ನು ನವೀನ್ ಕನ್ಯಾಡಿ ಹಲ್ಲೆ ನಡೆಸುತ್ತಿರುವ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.