ಆರೋಗ್ಯಕರ ಜೀವನಶೈಲಿ ಮತ್ತು ಉತ್ತಮ ಆಹಾರ ಸೇವನೆಯು ನಮ್ಮ ಆರೋಗ್ಯ ಹೇಗಿರುತ್ತದೆ ಎಂಬುದನ್ನು ನಿರ್ಧರಿಸುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಅದರಲ್ಲೂ ತುಪ್ಪ ಸೇವಿಸುವುದರಿಂದ ನಮಗೆ ಪ್ರತಿದಿನ ಅವಶ್ಯಕವಾಗಿ ಬೇಕಾದ ಪೌಷ್ಟಿಕಾಂಶಗಳು, ಆಂಟಿ ಆಕ್ಸಿಡೆಂಟ್ ಅಂಶಗಳು, ಕೊಬ್ಬಿನ ಅಂಶಗಳು, ವಿಟಮಿನ್ ಅಂಶಗಳು ಮತ್ತು ಖನಿ ಜಾಂಶಗಳು ಹೇರಳವಾಗಿ ಸಿಗುತ್ತವೆ. ನಮ್ಮ ದೇಹದ ರೋಗ ನಿರೋಧಕ ಶಕ್ತಿಯನ್ನು ಉತ್ತೇಜಿಸುವಲ್ಲಿ ಇವುಗಳು ಕೆಲಸ ಮಾಡುತ್ತವೆ.
ಹಾಲಿನ ಜತೆಗೆ ತುಪ್ಪ
ಹಾಲಿನ ಜತೆಗೆ ತುಪ್ಪ ಸೇರಿಸಿಕೊಂಡು ಕುಡಿಯುವಂತಹ ಸಂಪ್ರದಾಯವು ಹಿಂದಿನಿಂದಲೂ ಬಂದಿದೆ. ಇದು ಹಲವಾರು ಅನಾರೋಗ್ಯಗಳನ್ನು ತಡೆಯುವುದು. ಚರ್ಮದ ಆರೋಗ್ಯದಿಂದ ಹಿಡಿದು ಹೊಟ್ಟೆಯ ಸಮಸ್ಯೆಗಳನ್ನು ಇದು ನಿವಾರಣೆ ಮಾಡುವುದು. ಇದು ಅದ್ಭುತವಾಗಿ ಕೆಲಸ ಮಾಡುವುದು. ಆಯುರ್ವೇದದಲ್ಲಿ ತುಪ್ಪದ ಜತೆಗೆ ಹಾಲು ಸೇರಿಸಿ ಕುಡಿದರೆ ಅದರಿಂದ ದೇಹದ ಫಿಟ್ನೆಸ್ ಕಾಪಾಡಿ ಕೊಳ್ಳಬಹುದು ಎಂದು ಹೇಳಲಾಗಿದೆ.
ರಾತ್ರಿ ಮಲಗುವ ಮೊದಲು ಕುಡಿಯಿರಿ
ರಾತ್ರಿ ಮಲಗುವ ಮೊದಲು ತುಪ್ಪ ಹಾಕಿಕೊಂಡ ಒಂದು ಲೋಟ ಹಾಲು ಕುಡಿದರೆ ಅದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎನ್ನಲಾಗಿದೆ. ಆದರೆ ಹಾಲು ಮತ್ತು ತುಪ್ಪವು ನೈಸರ್ಗಿಕವಾಗಿರಬೇಕು. ನೈಸರ್ಗಿಕದತ್ತವಾದ ಹಾಲು ಮತ್ತು ತುಪ್ಪದಿಂದ ಮಾತ್ರ ಇಂತಹ ಲಾಭಗಳು ಸಿಗುವುದು.
ಜೀರ್ಣಕ್ರಿಯೆ ಸುಧಾರಣೆ
ಹಾಲಿಗೆ ತುಪ್ಪ ಹಾಕಿ ಸೇವಿಸಿದರೆ ಅದರಿಂದ ಜೀರ್ಣಕ್ರಿಯೆಗೆ ಶಕ್ತಿ ಸಿಗುವುದು. ಇದು ದೇಹದಲ್ಲಿ ಜೀರ್ಣಕ್ರಿಯೆಯ ಕಿಣ್ವದ ಸ್ರವಿಸುವಿಕೆಯನ್ನು ಉತ್ತೇಜಿಸುವುದು. ಈ ಕಿಣ್ವಗಳು ಸಂಕೀರ್ಣ ಆಹಾರವನ್ನು ವಿಘಟಿಸಿ, ಅದರ ಸರಳೀಕರಿಸುವ ಕಾರಣದಿಂದಾಗಿ ಜೀರ್ಣಕ್ರಿಯೆಯು ಸುಲಭವಾಗುವುದು. ಹಾಲು ಮತ್ತು ತುಪ್ಪದ ಮಿಶ್ರಣವು ಮಲಬದ್ಧತೆಗೆ ತುಂಬಾ ಸಹಕಾರಿ.
ಚಯಾಪಚಯ ವೃದ್ಧಿಸುವುದು
ಹಾಲಿನೊಂದಿಗೆ ತುಪ್ಪ ಹಾಕಿಕೊಂಡು ಕುಡಿದರೆ ಅದರಿಂದ ದೇಹವನ್ನುನಿರ್ವಿಷಗೊಳಿಸಲು ಸಾಧ್ಯವಾಗುವುದು ಮತ್ತು ಹಾನಿಕಾರಕ ವಿಷಕಾರಿ ಅಂಶಗಳಿಂದ ದೇಹವು ಹೊರಬರಲು ನೆರವಾಗುವುದು. ಹಾಲು ಮತ್ತು ತುಪ್ಪ ಸೇವಿಸಿದರೆ ಅದರಿಂದ ಚಯಾಪಚಯ ಹೆಚ್ಚಾಗುವುದು ಇದರಿಂದ ಶಕ್ತಿ ಮತ್ತು ಉಲ್ಲಾಸ ಸಿಗುವುದು.
ತ್ರಾಣ ಹೆಚ್ಚಾಗುವುದು
ಹಾಲಿನ ಜತೆಗೆ ತುಪ್ಪ ಹಾಕಿಕೊಂಡು ಕುಡಿದರೆ ಅದರಿಂದ ದೇಹದಲ್ಲಿ ತ್ರಾಣ ಹೆಚ್ಚಾಗುವುದು. ಇದು ದೇಹಕ್ಕೆ ಶಕ್ತಿ ನೀಡುವುದು ಮತ್ತು ದೈಹಿಕವಾಗಿ ಮಾಡುವಂತಹ ಕೆಲಸಗಳಿಗೆ ಇದರಿಂದ ಬಲ ಸಿಗುವುದು. ಕ್ರೀಡೆ ಮತ್ತು ದೈಹಿಕವಾಗಿ ತುಂಬಾ ಶ್ರಮವಿರುವ ಕೆಲಸ ಮಾಡುವಂತಹ ಜನರು ಹಾಲಿಗೆ ತುಪ್ಪ ಹಾಕಿ ಕುಡಿಯಬೇಕು.
ನಿದ್ರಾಹೀನತೆ ತಡೆಯುವುದು
ಜೀವನಶೈಲಿ ಬದಲಾವಣೆ ಮತ್ತು ಕೆಲಸದ ಒತ್ತಡದಿಂದಾಗಿ ಇಂದಿನ ದಿನಗಳಲ್ಲಿ ನಿದ್ರಾಹೀನತೆಯು ಸಾಮಾನ್ಯವಾಗಿ ಕಾಡುವ ಸಮಸ್ಯೆ. ಯುವ ಜನರೇ ಇಂದಿನ ದಿನಗಳಲ್ಲಿ ನಿದ್ರೆಯ ಮಾತ್ರೆ ತೆಗೆದುಕೊಳ್ಳಲು ಆರಂಭಿಸಿದ್ದಾರೆ. ಮಾತ್ರೆ ಬದಲಿಗೆ ಈ ಮನೆಮದ್ದು ಬಳಸಿಕೊಳ್ಳಿ. ನೀವು ಮಲಗುವ ಮೊದಲು ಹಾಲಿಗೆ ತುಪ್ಪ ಹಾಕಿ ಕುಡಿದರೆ ಅದರಿಂದ ದೇಹಕ್ಕೆ ಆರಾಮ ಮತ್ತು ಶಮನ ಸಿಗುವುದು.
ಮಗುವಿನ ಬೆಳವಣಿಗೆಗೆ
ದೇಶಿ ತಳಿಯ ದನದ ತುಪ್ಪ ಮತ್ತು ಹಾಲನ್ನು ಬೆರೆಸಿಕೊಂಡು ಬಾಣಂತಿಗೆ ನೀಡಿದರೆ ಅದರಿಂದ ಮಗುವಿನ ಬೆಳವಣಿಗೆಗೆ ಸಹಕಾರಿ. ಇದು ಬಾಣಂತಿಯ ಎದೆಹಾಲು ಹೆಚ್ಚಿಸುವುದು ಮಾತ್ರವಲ್ಲದೆ, ಗರ್ಭಿಣಿಯರು ಸೇವಿಸಿದರೆ ಅದರಿಂದ ಮಗುವಿನ ಮೆದುಳಿನ ಬೆಳವಣಿಗೆಗೆ ಸಹಕಾರಿ.
ದೇಹದಲ್ಲಿನ ಒತ್ತಡ ಕಡಿಮೆ ಮಾಡುವುದು
ಹಾಲಿಗೆ ತುಪ್ಪ ಬೆರೆಸಿ ಕುಡಿದರೆ ಅದರಿಂದ ದೇಹದಲ್ಲಿನ ಒತ್ತಡ ತಗ್ಗುವುದು ಮತ್ತು ಒಳ್ಳೆಯ ನಿದ್ರೆ ಬರುವುದು. ನಿದ್ರಾಹೀನತೆಯಿಂದ ಬಳಲುತ್ತಿರುವ ಜನರು ಈ ಸರಳ ಮನೆಮದ್ದನ್ನು ಬಳಸಿಕೊಳ್ಳಬಹುದು ಮತ್ತು ರಾತ್ರಿ ಆರಾಮವಾಗಿ ನಿದ್ರೆಗೆ ಜಾರಬಹುದು. ತುಂಬಾ ಒತ್ತಡದ ಜೀವನ ಸಾಗಿಸುತ್ತಿರುವ ಜನರಿಗೆ ಹಾಲಿಗೆ ತುಪ್ಪ ಹಾಕಿ ಕುಡಿದರೆ ಅದರಿಂದ ಆತಂಕ ಕಡಿಮೆ ಆಗುವುದು ಮತ್ತು ಖಿನ್ನತೆಯು ದೂರವಾಗುವುದು.
ತುಪ್ಪ ಮತ್ತು ಹಾಲಿನ ಪ್ರೋಟೀನ್
ಹಾಲಿನ ಕೊಬ್ಬಿನಿಂದ ಮಾಡಿದ ಬೆಣ್ಣೆಯ ಶುದ್ಧೀಕರಿಸಿದ ಭಾಗವೇ ತುಪ್ಪ. ಇದು ಕೂಡ ಮೊಸರು, ಮಜ್ಜಿಗೆ, ಚೀಸ್ ನಂತೆ ಒಂದು ಹಾಲಿನ ಉತ್ಪನ್ನವಾಗಿದೆ. ಇದನ್ನು ಹಾಲಿನ ತುಂಬಾ ಜಿಡ್ಡಿನ ಪದಾರ್ಥ ದಿಂದ ತಯಾರಿಸಿಕೊಳ್ಳಲಾಗುತ್ತದೆ ಮತ್ತು ಹಾಲಿನ ಪ್ರೋಟೀನ್ ಕೂಡ ಇರುವುದು. ದೇಶೀಯ ತುಪ್ಪವು ಫಿಟ್ನೆಸ್ ಗೆ ಬೇಕಾಗಿರುವ ಎಲ್ಲಾ ಅಂಶಗಳನ್ನು ದೇಹಕ್ಕೆ ನೀಡುವುದು.
ಲೈಂಗಿಕ ಜೀವನ ಉತ್ತಮಪಡಿಸುವುದು
ಹಾಲಿಗೆ ತುಪ್ಪ ಹಾಕಿ ಕುಡಿದರೆ ಅದರಿಂದ ಲೈಂಗಿಕ ಜೀವನ ಕೂಡ ಉತ್ತಮವಾಗುವುದು. ಇದು ಕಾಮಾಸಕ್ತಿ ಹೆಚ್ಚಿಸುವುದು ಮತ್ತು ಅದೇ ರೀತಿಯಾಗಿ ಲೈಂಗಿಕ ಸಾಮರ್ಥ್ಯ ಕೂಡ. ವೈದ್ಯರು ಕೂಡ ಇದನ್ನು ಸೂಚಿಸುವರು.
ಐದು ಇಂದ್ರಿಯಗಳನ್ನು ವೃದ್ಧಿಸುವುದು
ಮಕ್ಕಳಿಗೆ ಹಾಲಿಗೆ ತುಪ್ಪ ಹಾಕಿ ಕುಡಿಯಲು ಕೊಟ್ಟರೆ ಇದು ಅವರ ಬೆಳವಣಿಗೆಗೆ ಪೂರಕವಾಗಿ ಇರುವುದು. ಹಾಲಿಗೆ ತುಪ್ಪ ಹಾಕಿ ಸೇವಿಸುವುದರಿಂದ ದೇಹದ ಅಂಗಾಂಶಗಳು ಬೆಳವಣಿಗೆ ಆಗುವುದು. ಇದರಿಂದ ಕಣ್ಣು, ಸ್ವರ, ಸ್ಪರ್ಶ, ರುಚಿ ಮತ್ತು ವಾಸನೆ ಉತ್ತಮವಾಗುವುದು. ಇದು ನೆನಪಿನ ಶಕ್ತಿ ಮತ್ತು ಜಾಗೃತಿ ಹೆಚ್ಚಿಸುವುದು.
ಒಳ್ಳೆಯ ಲ್ಯೂಬ್ರಿಕೆಂಟ್ಸ್ ಹಾಗೂ ಮೊಶ್ಚಿರೈಸರ್
ದೇಶಿ ತುಪ್ಪವು ಒಳ್ಳೆಯ ಲ್ಯುಬ್ರಿಕೆಂಟ್ ಆಗಿದೆ ಮತ್ತು ಇದು ಚರ್ಮಕ್ಕೆ ಮೊಶ್ಚಿರೈಸರ್ ನೀಡುವುದು. ನೀವು ದಿನವಿಡಿ ಏರ್ ಕಂಡೀಷನರ್ ನಲ್ಲಿ ಇದ್ದರೂ ಒಂದು ಚಮಚ ತುಪ್ಪ ಸೇವಿಸಿದರೆ ಅದು ಚರ್ಮಕ್ಕೆ ಮೊಶ್ಚಿರೈಸ್ ನೀಡಿ ನಯವಾಗಿಸುವುದು. ವಾರದಲ್ಲಿ ಎರಡು ಸಲ ನೀಡು ದೇಶಿ ತುಪ್ಪ ಬಳಸಿಕೊಂಡು ಮಸಾಜ್ ಮಾಡಿಕೊಳ್ಳಿ.