ಬೆಂಗಳೂರು: ಕಳೆದ ವರ್ಷ ಕಾಡಿದ ಬರದಿಂದ ಸಂಕಷ್ಟಕ್ಕೆ ಸಿಲುಕಿದ ರಾಜ್ಯದ ಮಳೆಯಾಶ್ರಿತ/ ಒಣಭೂಮಿ ಹೊಂದಿರುವ ಸಣ್ಣ, ಅತಿ ಸಣ್ಣ ರೈತ ಕುಟುಂಬಕ್ಕೆ ಜೀವನ ನಿರ್ವಹಣೆಗಾಗಿ ರಾಜ್ಯ ಸರಕಾರ ಇದೇ ಮೊದಲ ಬಾರಿಗೆ ಗರಿಷ್ಠ 2874 ರೂ. ಜೀವನೋಪಾಯ ನಷ್ಟ ಪರಿಹಾರ ವಿತರಿಸಲು ಮುಂದಾಗಿದೆ. ರಾಜ್ಯದಲ್ಲಿ ಅರ್ಹರೆಂದು ಗುರುತಿಸಲಾದ 19,82,677 ರೈತರನ್ನು ಒಳಗೊಂಡ 17,84,398 ಸಣ್ಣ, ಅತಿ ಸಣ್ಣ ರೈತ ಕುಟುಂಬಳಿಗೆ ಜೀವನೋಪಾಯ ನಷ್ಟ ಪರಿಹಾರ ವಿತರಣೆ ಪ್ರಕ್ರಿಯೆಗೆ ಚಾಲನೆ ದೊರತಿದೆ. ಸದ್ಯದಲ್ಲೇ ಅರ್ಹ ಫಲಾನುಭವಿ ರೈತರ ಬ್ಯಾಂಕ್ ಖಾತೆಗೆ ಪರಿಹಾರ ಮೊತ್ತ ಬಿಡುಗಡೆಯಾಗಲಿದೆ.
ಕಳೆದ ವರ್ಷ ತೀವ್ರ ಬರದಿಂದಾಗಿ 223 ತಾಲೂಕುಗಳನ್ನು ಬರಪೀಡಿತವೆಂದು ಘೋಷಿಸಲಾಗಿತ್ತು. ಬರದಿಂದ ಆರ್ಥಿಕವಾಗಿ ಹಿಂದುಳಿದ ಸಣ್ಣ, ಅತಿ ಸಣ್ಣ ರೈತ ಕುಟುಂಬಗಳು ಸಂಕಷ್ಟಕ್ಕೆ ಸಿಲುಕಿದ್ದವು. ಆ ಕುಟುಂಬದವರ ಜೀವನೋಪಾಯಕ್ಕೆ ಆರ್ಥಿಕ ನೆರವು ನೀಡಿ ಸಹಾನುಭೂತಿ ಹೇಳುವ ನಿಟ್ಟಿನಲ್ಲಿ ಜೀವನೋಪಾಯ ನಷ್ಟ ಪರಿಹಾರ ವಿತರಿಸುವ ಮಹತ್ವದ ನಿರ್ಧಾರವನ್ನು ರಾಜ್ಯ ಸರಕಾರ ಕೈಗೊಂಡಿದೆ.
Health Tips: ಪಾಲಕ್ ಹಲವು ಆರೋಗ್ಯ ಸಮಸ್ಯೆಗಳಿಗೆ ರಾಮಬಾಣ.! ತೂಕ ಇಳಿಸಲು ಕುಡಿಯಲೇಬೇಕು ಈ ಜ್ಯೂಸ್
ಬರ ಪರಿಹಾರವಾಗಿ ಎನ್ಡಿಆರ್ಎಫ್ನಡಿ ಕೇಂದ್ರ ಸರಕಾರಕ್ಕೆ 18,171 ಕೋಟಿ ರೂ. ಅನುದಾನ ಬಿಡುಗಡೆಗೆ ರಾಜ್ಯ ಸರಕಾರ ಮನವಿ ಸಲ್ಲಿಸಿತ್ತು. ಬರಗಾಲದಿಂದ ತತ್ತರಿಸಿದ ರೈತ ಕುಟುಂಬಗಳ ಜೀವನೋಪಾಯಕ್ಕಾಗಿ (ಗ್ಯಾಟಿಟುಯಸ್ ರಿಲೀಫ್) ಪಾವತಿಗೆ 12,577.90 ಕೋಟಿ ರೂ. ಅನುದಾನ ನೀಡುವಂತೆ ಕೇಂದ್ರಕ್ಕೆ ಕೋರಿತ್ತು. ಆದರೆ ಕೇಂದ್ರ ಸರಕಾರ ಎನ್ಡಿಆರ್ ಎಫ್ನಡಿ ಕೇವಲ 232.40 ಕೋಟಿ ರೂ. ಮಾತ್ರ ಬಿಡುಗಡೆ ಮಾಡಿತ್ತು ಎಂದು ಕಂದಾಯ ಇಲಾಖೆ ಮೂಲಗಳು ಹೇಳಿವೆ.
ರಾಜ್ಯದಿಂದ 280 ಕೋಟಿ ರೂ.
ಒಟ್ಟು 19,82,677 ರೈತರನ್ನು ಒಳಗೊಂಡ 17,84,398 ಮಳೆಯಾಶ್ರಿತ/ ಒಣಭೂಮಿ ಹೊಂದಿರುವ ಸಣ್ಣ, ಅತಿ ಸಣ್ಣ ರೈತ ಕುಟುಂಬಗಳನ್ನು ಜೀವನೋಪಾಯ ಪರಿಹಾರ ಪಡೆಯಲು ಗುರುತಿಸಲಾಗಿದೆ. ಪ್ರತಿ ಕುಟುಂಬಕ್ಕೆ ಗರಿಷ್ಠ 2874 ರೂ. ಪಾವತಿಗೆ 512.92 ಕೋಟಿ ರೂ. ಅಗತ್ಯವಿದೆ. ಎನ್ಡಿಆರಫ್ನಡಿ ಕೇಂದ್ರ 232.40 ಕೋಟಿ ರೂ. ನೀಡಿದೆ. ಪ್ರಸಕ್ತ 2024-25ನೇ ಸಾಲಿನ ರಾಜ್ಯ ವಿಪತ್ತು ಪರಿಹಾರ ನಿಧಿಯಡಿ ಹಂಚಿಕೆಯಾಗಿರುವ 488 ಕೋಟಿ ರೂ. ಪೈಕಿ ಶೇ.50ರಷ್ಟನ್ನು ಅಂದರೆ 244 ಕೋಟಿ ರೂ. ಹಾಗೂ ಉಳಿಕೆ 36.52 ಕೋಟಿ ರೂ.ಗಳನ್ನು ರಾಜ್ಯದಿಂದ ಹೆಚ್ಚುವರಿಯಾಗಿ ಭರಿಸಲಾಗುತ್ತಿದೆ.