ಬೆಂಗಳೂರು: ನಾನು ರೇಣುಕಾಸ್ವಾಮಿ ಮೇಲೆ ಸಾಯೊ ರೀತಿ ಹಲ್ಲೆ ಮಾಡಿಲ್ಲ ಅಂತಿದ್ದ ನಟ ದರ್ಶನ್ ನ ನಿಜ ಬಣ್ಣ ಬಯಲಾಗುದೆ.ಆತನ ಮೇಲೆ ಮಾನವೀಯತೆಯೇ ಇಲ್ಲದಂತೆ ಮುಗಿ ಬಿದ್ದ ದಾಸ ಬೂಟು ಕಾಲಲ್ಲಿ ಒದ್ದು ವಿಕೃತಿ ಮೆರೆದಿದ್ದ.ಇನ್ನೂ ರೇಣುಕಾಸ್ವಾಮಿ ಏನು ಸಾಮಾನ್ಯದವ್ನಲ್ಲ.ಪವಿತ್ರಾ ಗೌಡ ಗೆ 200 ಮೆಜೆಸ್ ಮಾಡಿ ಕಾಟ ಕೊಟ್ಟಿದ್ದ.ಇದು ಒಂದು ಕಡೆ ಇತ್ತ ರೀಲ್ಸ್ ರಾಣಿ ಸೋನು ಗೌಡ ಮೇಲೆ ದಚ್ಚು ಅಭಿಮಾನಿಗಳು ಮುಗಿಬಿದ್ದಿದ್ದಾರೆ..
ಹೌದು..ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ನಟ ದರ್ಶನ್ ಸೇರಿ 17 ಜನ ಜೈಲು ಸೇರಿದ್ದು..ಕೊಲೆ ಪ್ರಕರಣ ಒಂದೊಂದೆ ಸತ್ಯ ಈಗ ರಿವೀಲ್ ಆಗ್ತಿದೆ..ಮೊದಲು ನಾನು ರೇಣುಕಾಸ್ವಾಮಿ ಮೇಲೆ ಸಾಯೊ ರೀತಿ ಹಲ್ಲೆ ಮಾಡಿಲ್ಲ ಎರಡೇಟು ಹೊಡೆದು ಹೊರಟುಬಿಟ್ಟಿದ್ದೆ ಎಂದಿದ್ದ ನಟ ದರ್ಶನ್ ನ ನಿಜ ಬಣ್ಣ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ..ಜೂನ್ 8 ರ ಸಂಜೆ 4.30 ಕ್ಕೆ ಪಟ್ಟಣಗೆರೆ ಶೆಡ್ ಗೆ ವಿನಯ್ ಜೊತೆಗೆ ಎಂಟ್ರಿಯಾಗಿದ್ದ ದರ್ಶನ್ ವಾಪಸ್ಸು ತೆರಳಿದ್ದು ತೆರಳಿದ್ದು,
5.20 ಕ್ಕೆ. ಅಂದ್ರೆ 50 ನಿಮಿಷ ಶೆಡ್ ನಲ್ಲಿ ಇದ್ದಿದ್ದಕ್ಕೆ ಸಾಕ್ಷಿಯನ್ನ ಪೊಲೀಸರು ಕಲೆ ಹಾಕಿದ್ದು ಪ್ರತ್ಯಕ್ಷದರ್ಶಿಗಳು 164 ಸ್ಟೇಟ್ ಮೆಂಟ್ ನಲ್ಲಿ ಎಲ್ಲಾ ವಿಚಾರ ಹೇಳಿದ್ದಾರೆ..ಅಷ್ಟೇ ರೇಣುಕಾಸ್ವಾಮಿ ಮೇಲೆ ನಿರಂತರ 30 ನಿಮಿಷಗಳ ಕಾಲ ಹಲ್ಲೆ ಮಾಡಿದ್ದ ದಾಸ..ಸಿನಿಮಾ ಮಾದರಿಯಲ್ಲಿತ್ತು ನಟ ದರ್ಶನ್ ಕ್ರೌರ್ಯ ಮೆರೆದಿದ್ದ..ರೇಣುಕಾಸ್ವಾಮಿಯನ್ನ ನಿಂತಿದ್ದ ವಾಹನಗಳ ಮೇಲೆ ಎತ್ತಿ ಬಿಸಾಡಿದ್ದ ‘ಡೆವಿಲ್’ ಬೂಟ್ ಕಾಲಿನಲ್ಲಿ ಒದ್ದು ನರಕ ತೋರಿಸಿದ್ದ..ಇತ್ತ ಆರೋಪೊ ಪವನ್ ರೇಣುಕಾಸ್ವಾಮಿ ಪವಿತ್ರಾಗೌಡ ಗೆ ಕಳುಹಿಸಿದ್ದ ಮೆಸೆಜ್ ಓದ್ತಿದ್ರೆ ಅದೇ ಕೋಪದಲ್ಲಿ ದರ್ಶನ್ ಥಳಿಸಿದ್ದ…ಈ ಎಲ್ಲಾ ಸಂಗತಿಗಳು ಈಗ ರಿವೀಲ್ ಆಗಿದೆ..ಜೊತೆಗೆ ದರ್ಶನ್ ಕೂಡ ಪೊಲೀಸರ ಎದರು ಸತ್ಯ ವಾಯ್ಬಿಟ್ಟಿದ್ದಾನೆ.
ಸೂರಜ್ ರೇವಣ್ಣ ಪತ್ನಿ ಡಿವೋರ್ಸ್ ನೀಡಿದ್ದು ಇದೇ ಕಾರಣಕ್ಕೆ..!? ಇಲ್ಲಿದೆ ಅಸಲಿ ಸಂಗತಿ
ಹೌದು ಮೃತ ರೇಣುಕಾಸ್ವಾಮಿ ಏನು ಸಾಮಾನ್ಯದವ್ನಲ್ಲ..ಫೆಬ್ರವರಿ ತಿಂಗಳಿನಿಂದ ಪವಿತ್ರಾ ಗೌಡಗೆ ಅಶ್ಲೀಲವಾದ ಸಂದೇಶ ಕಳುಹಿಸಲು ಶುರು ಮಾಡಿದ್ದ.ದರ್ಶನ್ ಸ್ನೇಹಿತೆಗೆ 200 ಮೆಸೆಜ್ ಕಳುಹಿಸಿದ್ದ ರೇಣುಕಾಸ್ವಾಮಿ ತನ್ನ ಖಾಸಗಿ ಅಂಗದ ವೀಡಿಯೋ..ಫೋಟೊ ಕೂಡ ಸೆಂಡ್ ಮಾಡಿದ್ದ..ಆತನನ್ನ ಕರೆಸಿ ಬುದ್ಧಿ ಕಲಿಸೊ ಉದ್ದೇಶ ಪವಿತ್ರಾ ಗೌಡ ಗೆ ಇತ್ತು..ಆದ್ರೆ ಹಂತಕ ಪಡೆ ಆತನ ಉಸಿರನ್ನೇ ನಿಲ್ಲಿಸಿಬಿಟ್ಟಿದ್ರು… ಇದೆಲ್ಲದರ ಜೊತೆಗೆ ಸೋನು ಶ್ರೀನಿವಾಸ್ ಗೌಡಗೆ ದರ್ಶನ್ ಅಭಿಮಾನಿಗಳಿಂದ ಕಿರುಕುಳ ಶುರುವಾಗಿದೆಯಂತೆ..
ದರ್ಶನ್ ಪರವಾಗಿ ಮಾತನಾಡಿಲ್ಲ ಅಂತಾ ಇನ್ಸ್ಟಾಗ್ರಾಂನಲ್ಲಿ ಕೆಟ್ಟದಾಗಿ ಮೆಸೇಜ್ ಗಳು ಬರ್ತಿವೆಯಂತೆ..ಅಲ್ಲದೇ ಸೋನು ರೀಲ್ಸ್ ಗೆ ಕೆಟ್ಟದಾಗಿ ಕಮೆಂಟ್ ಮಾಡಿ ಕಿರುಕುಳ ನೀಡಲಾಗ್ತಿದೆ ಎಂಬ ಆರೋಪ ಕೇಳಿಬಂದಿದೆ…ಈ ಕುರಿತು ರೀಲ್ಸ್ ನಲ್ಲೆ ಸೋನು ಶ್ರೀನಿವಾಸ್ ಗೌಡ ಅಳಲು ತೋಡಿಕೊಂಡಿದ್ದಾರೆರೇಣುಕಾಸ್ವಾಮಿ ಹತ್ಯೆಯಾಗಿ ದಿನಗಳು ಉರುಳುತ್ತಿವೆ..ಆರೋಪಿಗಳ ಜೈಲು ಪಾಲಾಗಿದ್ದಾರೆ..ಈ ಮಧ್ಯೆ ಸಾವಿನ ಸುತ್ತ ಇರೋ ಒಂದೊಂದೇ ಸತ್ಯಗಳು ಹೊರಬರ್ತಿವೆ..ಅಲ್ಲಿಗೆ ನಟ ದರ್ಶನ್ ನ ಕರಾಳ ಮುಖ ಬಟಾ ಬಯಲಾಗಿದೆ..