ನವದೆಹಲಿ: ಯೆಸ್ ಬ್ಯಾಂಕ್ ಬರೋಬ್ಬರಿ 500 ಮಂದಿಯನ್ನು ಕೆಲಸದಿಂದ ತೆಗೆದು ಹಾಕಿದೆ. ಯೆಸ್ ಬ್ಯಾಂಕ್ ಇದೀಗ ಉದ್ಯೋಗಿಗಳು, ಖರ್ಚು ವೆಚ್ಚಗಳನ್ನು ಪುನರ್ ರಚನೆ ಮಾಡುತ್ತಿದೆ. ಇದರ ಭಾಗವಾಗಿ ಯೆಸ್ ಬ್ಯಾಂಕ್ ಉದ್ಯೋಗ ಕಡಿತ ಮಾಡುತ್ತಿದೆ. ಸದ್ಯ 500 ಮಂದಿ ಉದ್ಯೋಗ ಕಡಿತದಿಂದ ಕೆಲಸ ಕಳೆದುಕೊಂಡಿದ್ದಾರೆ. ಇದೀಗ ಮತ್ತಷ್ಟು ಉದ್ಯೋಗ ಕಡಿತ ಪ್ರಕ್ರಿಯೆ ನಡೆಯಲಿದೆ ಎಂದು ಕಂಪನಿ ಸೂಚ್ಯವಾಗಿ ಹೇಳಿದೆ.
ಎಕಾನಾಮಿಕ್ ಟೈಮ್ಸ್ ವರದಿ ಪ್ರಕಾರ, ಯೆಸ್ ಬ್ಯಾಂಕ್ ಈಗಾಗಲೇ 500 ಮಂದಿಯನ್ನು ಕೆಲಸದಿಂದ ತೆಗೆದುಹಾಕಿದೆ. ಬ್ಯಾಂಕಿಂಗ್ ಸೇರಿದಂತೆ ಹಲವು ವಿಭಾಗಗಳಿಂದ ಉದ್ಯೋಗ ಕಡಿತ ಮಾಡಲಾಗಿದೆ. ಉದ್ಯೋಗ ಕಡಿತ ಪಟ್ಟಿಯಲ್ಲಿ ಕಾಣಿಸಿಕೊಂಡ ಉದ್ಯೋಗಿಗಳಿಗೆ ನಿಯಮದ ಪ್ರಕಾರ 3 ತಿಂಗಳ ವೇತನ ನೀಡಲಾಗುತ್ತದೆ ಎಂದು ಯೆಸ್ ಬ್ಯಾಂಕ್ ವಕ್ತಾರರು ಹೇಳಿದ್ದಾರೆ.
ʼʼಚೆಂಡು ಹೂʼʼ ಪೂಜೆಗಷ್ಟೇ ಅಲ್ಲ, ನಿಮ್ಮ ಮುಖದ ಸೌಂದರ್ಯಕ್ಕೂ ಉಪಯೋಗ..! ಹೇಗೆ ಗೊತ್ತಾ..?
ಯೆಸ್ ಬ್ಯಾಂಕ್ ಇದೀಗ ಡಿಜಿಟಲ್ ಬ್ಯಾಂಕಿಂಗ್ಗೆ ಹೆಚ್ಚು ಒತ್ತು ನೀಡುತ್ತಿದೆ. ಹೀಗಾಗಿ ಕಚೇರಿಯಲ್ಲಿ ಕೆಲಸ ಮಾಡುವ ಉದ್ಯೋಗಿಗಳ ಸಂಖ್ಯೆ ಕಡಿತ ಮಾಡಿ ಮತ್ತಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಯೆಸ್ ಬ್ಯಾಂಕ್ ಮುಂದಾಗಿದೆ. ಬ್ಯಾಂಕ್ ಉದ್ಯೋಗಿಗಳ ವೇತನ, ಇತರ ಖರ್ಚು ವೆಚ್ಚಗಳು ಯೆಸ್ ಬ್ಯಾಂಕ್ಗೆ ಹೊರೆಯಾಗುತ್ತಿದೆ. 2023ರಿಂದ 2024ಕ್ಕೆ ಶೇಕಡಾ 12ರಷ್ಟು ಖರ್ಚು ವೆಚ್ಚ ಹೆಚ್ಚಳವಾಗಿದೆ. 2023ರಲ್ಲಿ ಯೆಸ್ ಬ್ಯಾಂಕ್ ಒಟ್ಟು ಖರ್ಚು 3,363 ಕೋಟಿ ರೂಪಾಯಿ. ಇದು 2024ರ ವೇಳೆಗೆ 3,774 ಕೋಟಿ ರೂಪಾಯಿಗೆ ಏರಿಕೆಯಾಗಿದೆ ಎಂದು ಯೆಸ್ ಬ್ಯಾಂಕ್ ಹೇಳಿದೆ.
ಡಿಜಿಟಲ್ ಬ್ಯಾಂಕಿಂಗ್ನಿಂದ ಕಚೇರಿಯಲ್ಲಿನ ಉದ್ಯೋಗಿಗಳ ಸಂಖ್ಯೆ ಕಡಿತ ಮಾಡುತ್ತಿದ್ದೇವೆ. ಯೆಸ್ ಬ್ಯಾಂಕ್ ಗ್ರಾಹಕರಿಗೆ ಸುಲಭ ಹಾಗೂ ಸರಳ ಡಿಜಿಟಲ್ ಬ್ಯಾಂಕಿಂಗ್ ವ್ಯವಸ್ಥೆ ನೀಡಲಾಗಿದೆ. ಬ್ಯಾಂಕಿಂಗ್, ಸಾಲ, ಡೆಪಾಸಿಟ್ ಸೇರಿದಂತೆ ಯಾವುದೇ ವಿಚಾರಕ್ಕೂ ಡಿಜಿಟಲ್ ಬ್ಯಾಂಕಿಂಗ್ ಮೂಲಕ ವ್ಯವಹರಿಸಲು ಉತ್ತೇಜನ ನೀಡಲಾಗುತ್ತಿದೆ. ಇದರ ಜೊತೆ ಜೊತೆಗೆ ಉದ್ಯೋಗ ಕಡಿತ ಮಾಡುತ್ತಾ, ಖರ್ಚು ವೆಚ್ಚ ತಗ್ಗಿಸುವ ಪ್ರಯತ್ನ ಮಾಡುತ್ತಿದೆ.