ಸದ್ಯ ಪ್ರತಿಯೊಂದು ಕ್ಷೇತ್ರದಲ್ಲೂ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ಗಳು ಸದ್ದು ಮಾಡ್ತಿದ್ದಾರೆ. ಇದೀಗ ಮಾಡೆಲಿಂಗ್ ಕ್ಷೇತ್ರದಲ್ಲಿ ಮಿಂಚಲು ಎಐಗಳು ಮುಂದಾಗಿವೆ. ಅದರಲ್ಲೂ ಭಾರತದಲ್ಲಿ ನಿರ್ಮಿತವಾದ ಜಾರಾ ಶತಾವರಿ ಹೆಸರಿನ ಮಾಡೆಲ್ ಮಿಸ್ ಎಐ ಸ್ಪರ್ಧೆಯಲ್ಲಿ ಅಗ್ರ 10 ಫೈನಲಿಸ್ಟ್ಗಳಲ್ಲಿ ಸ್ಥಾನ ಪಡೆದುಕೊಂಡಿದೆ.
ಈ ಮೂಲಕ ಭಾರತ ನಿರ್ಮಿತ ಎಐ ಮಾಡೆಲ್ ಜಾಗತಿಕ ಗಮನವನ್ನು ಸೆಳೆದಿದೆ. ಭಾರತವನ್ನು ಪ್ರತಿನಿಧಿಸುತ್ತಿರುವ ಜಾರಾ, 1,500 ಕ್ಕೂ ಹೆಚ್ಚು ಅಂತರಾಷ್ಟ್ರೀಯ ಮಾಡೆಲ್ಗಳನ್ನು ಹಿಂದಿಕ್ಕಿ ಆಯ್ಕೆ ಆಗಿದ್ದಾರೆ. ಜಾರಾ ಶತಾವರಿಯನ್ನು ಭಾರತೀಯ ಮೊಬೈಲ್ ಜಾಹೀರಾತು ಏಜೆನ್ಸಿಯ ಸಹ-ಸಂಸ್ಥಾಪಕ ರಾಹುಲ್ ಚೌಧರಿ ರಚಿಸಿದ್ದಾರೆ.
ಕಳೆದ ಏಪ್ರಿಲ್ನಲ್ಲಿ ಪ್ರಾರಂಭವಾದ ಮಿಸ್ ಎಐ ಸ್ಪರ್ಧೆಯು ಈ ರೀತಿಯ ಮೊದಲನೆಯ ಸ್ಪರ್ಧೆಯನ್ನು ಏರ್ಪಡಿಸಿದೆ. ಇದನ್ನು ವರ್ಲ್ಡ್ ಎಐ ಕ್ರಿಯೇಟರ್ ಅವಾರ್ಡ್ಸ್ ಆಯೋಜಿಸಿದೆ. ಸ್ಪರ್ಧಿಗಳನ್ನು ಅವರ ಸೌಂದರ್ಯ, ತಾಂತ್ರಿಕ ಕೌಶಲ್ಯ ಮತ್ತು ಸಾಮಾಜಿಕ ಪ್ರಭಾವದ ಮೇಲೆ ಮೌಲ್ಯಮಾಪನ ಮಾಡುತ್ತಾರೆ., AI- ರಚಿತವಾದ ತೀರ್ಪುಗಾರರಾದ ಐತಾನಾ ಲೋಪೆಜ್ ಮತ್ತು ಎಮಿಲಿ ಪೆಲ್ಲೆಗ್ರಿನಿ ಸೇರಿದಂತೆ ನಾಲ್ಕು ತೀರ್ಪುಗಾರರಿದ್ದಾರೆ.
ಈ ಮಾಡೆಲ್ ಈಗಾಗಲೇ ಇನ್ಸ್ಟಾಗ್ರಾಮ್ನಲ್ಲಿ 15 ಸಾವಿರಕ್ಕಿಂತಲೂ ಹೆಚ್ಚು ಫಾಲೋವರ್ಸ್ ಹೊಂದಿದೆ. ಜಾರಾ ಅವರ ಫೀಡ್ ಅವಳ ಆಸಕ್ತಿಗಳನ್ನೇ ಬಿಂಬಿಸುವಂತಿದೆ. ಬಗೆ ಬಗೆಯ ಉಡುಪಿನಲ್ಲಿ ಅವಳು ಕಾಣಿಸಿಕೊಂಡಿದ್ದಾಳೆ. ದೀಪಾವಳಿಯನ್ನು ಆಚರಿಸುವ ಫೋಟೋ ಕೂಡ ಇದೆ. ಆಕೆಯ ಪ್ರೊಫೈಲ್ “ಡಿಜಿಟಲ್ ಕ್ರಿಯೇಟರ್” ಆಗಿದೆ.
ಭಾರತದ ಮೊದಲ AI ರಚಿತ ಬ್ರ್ಯಾಂಡ್ ರಾಯಭಾರಿ ಜಾರಾ ಆಗಿದ್ದಾರೆ. ಫ್ಯಾಷನ್ ಪ್ರಿಯ ಜಗತ್ತಿನಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. ಜರಾ ಶತಾವರಿ ಅವರು ಪ್ರತಿಷ್ಠಿತ ಮಿಸ್ AI ಸ್ಪರ್ಧೆಯಲ್ಲಿ ಸುಮಾರು 1,500 ಪರಿಣಿತ ಭಾಗವಹಿಸುವವರಲ್ಲಿ ಟಾಪ್ 10 ಫೈನಲಿಸ್ಟ್ ಆಗಿ ಆಯ್ಕೆಯಾಗಿದ್ದಾರೆ.