ವೈದ್ಯಕೀಯ ಲೋಕದಲ್ಲಿ ವೈದ್ಯರು ನಿತ್ಯ ಹೊಸ ಹೊಸ ಪ್ರಯೋಗಗಳನ್ನು ಮಾಡುತ್ತಿರುತ್ತಾರೆ. ಇದೀಗ ಅಂಥದ್ದೆ ಹೊಸ ಪ್ರಯೋಗ ಮಾಡುವ ಮೂಲಕ ಚಿಕಾಗೋದ ನಾರ್ತ್ವೆಸ್ಟರ್ನ್ ಮೆಡಿಸಿನ್ ಆಸ್ಪತ್ರೆ ವೈದ್ಯರು ಅಚ್ಚರಿ ಮೂಡಿಸಿದ್ದಾರೆ.
ರೋಗಿ ಸಂಪೂರ್ಣ ಎಚ್ಚರವಾಗಿರುವಂತೆ ನೋಡಿಕೊಂಡು ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿ ಮಾಡಿದ್ದಾರೆ. ರೋಗಿ ಜೊತೆ ಮಾತುಕತೆ ನಡೆಸುತ್ತಲೇ ವೈದ್ಯರ ತಂಡ ಎರಡು ಗಂಟೆ ಯಶಸ್ವಿಯಾಗಿ ಶಸ್ತ್ರಚಿಕಿತ್ಸೆ ನಡೆಸಿದೆ.
ಚಿಕಾಗೋ ನಿವಾಸಿ 28 ವರ್ಷದ ಜಾನ್ ನಿಕೋಲಸ್ಗೆ ಮೂತ್ರಪಿಂಡ ಕಸಿಗೊಳಗಾದ ರೋಗಿ. ಶಸ್ತ್ರಚಿಕಿತ್ಸೆ ನಡೆದ 24 ಗಂಟೆಯೊಳಗೆ ರೋಗಿಯನ್ನು ಡಿಸ್ಚಾರ್ಜ್ ಮಾಡಲಾಗಿದ್ದು, ಸರ್ಜರಿಯ ಅನುಭವ ಕೂಲ್ ಆಗಿತ್ತು ಎಂದು ಜಾನ್ ನಿಕೋಲಸ್ ಹೇಳಿಕೊಂಡಿದ್ದಾನೆ.
ವೈದ್ಯರ ತಂಡ ಸಾಮಾನ್ಯ ಅರವಳಿಕೆ ಬದಲಾಗಿ, ಬೆನ್ನುಮೂಳೆಗೆ ಮಾತ್ರ ನೀಡಲಾಗಿತ್ತು. ಶಸ್ತ್ರಚಿಕಿತ್ಸೆಗೆ ಒಳಪಡುವ ದೇಹದ ಭಾಗದ ಪ್ರಜ್ಞಾಹೀನ ಸ್ಥಿತಿಗೆ ತಲುಪುತ್ತದೆ. ಆದ್ರೆ ಈ ವಿಧಾನ ಅಪಾಯದ ಮಟ್ಟ ಹೆಚ್ಚಾಗಿರುತ್ತದೆ. ಈ ರೀತಿ ಶಸ್ತ್ರಚಿಕಿತ್ಸೆ ಮೊದಲನೇಯದ್ದು ಆಗಿದೆ. ಸರ್ಜರಿ ನಡೆದ ಮರುದಿನವೇ ರೋಗಿ ಮನೆಗೆ ಹಿಂದಿರುಗಿದ್ದಾರೆ ಏಂದು ಕಸಿ ಶಸ್ತ್ರಚಿಕಿತ್ಸಕ, ನಾರ್ತ್ವೆಸ್ಟರ್ನ್ ಮೆಡಿಸಿನ್ ಆಸ್ಪತ್ರೆಯ ನಿರ್ದೇಶಕ ಡಾ.ಸತೀಶ್ ನಾಡಿಗ್ ಹೇಳಿದ್ದಾರೆ.
ರೋಗಿಗೆ ಕಸಿ ಮಾಡುವ ಮೊದಲು ಅಂದ್ರೆ ಶಸ್ತ್ರಚಿಕಿತ್ಸೆ ವೇಳೆ ಆತನಿಗೆ ಹೊಸ ಮೂತ್ರಪಿಂಡ ತೋರಿಸಲಾಗಿತ್ತು ಅಂದ್ರೆ ನೀವು ನಂಬಲೇಬೇಕು. ಮೇ 24 ರಂದು, ಡಾ. ಸತೀಶ್ ನಾಡಿಗ್, ಡಾ ವಿನಾಯಕ್ ರೋಹನ್ ಮತ್ತು ಡಾ ವಿಸೆಂಟೆ ಗಾರ್ಸಿಯಾ ತೋಮಸ್ ವೈದ್ಯರ ತಂಡ ಸಿಸೇರಿಯನ್ ಸಮಯದಲ್ಲಿ ಬಳಸುವ ಅರಿವಳಿಕೆ ಬಳಸಿಕೊಂಡು ಎರಡು ಗಂಟೆ ಮೂತ್ರಪಿಂಡ ಕಸಿ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ ಎಂದು ವರದಿಯಾಗಿದೆ.
ಈ ಅರವಳಿಕೆ ಸಿ ಸೆಕ್ಷನ್ ಸರ್ಜರಿಗಳಿಗಿಂತ ಸುಲಭವಾಗಿದೆ. ನಾವು ರೋಗಿಯ ಬೆನ್ನುಮೂಳೆಗೆ ಹಂತ ಹಂತವಾಗಿ ಅರವಳಿಕೆಯ ಶಾಟ್ ನೀಡಿದ್ದೇವೆ. ಇದರಿಂದ ರೋಗಿ ಜಾನ್ ನಿಕೋಲಸ್ ಎಚ್ಚರವಾಗಿರಲು ಸಾಧ್ಯವಾಯ್ತು. ಜಾನ್ ನಿಕೋಲಸ್ ಸಹ ತುಂಬಾ ಧೈರ್ಯವಂತರಾಗಿದ್ದು, ಅವರಲ್ಲಿ ಯಾವುದೇ ಭಯ ಇರಲಿಲ್ಲ. ಯುವಕರಾಗಿದ್ದರಿಂದ ಅಪಾಯದ ಮಟ್ಟ ಸಹ ವಿರಳವಾಗಿತ್ತು ಎಂದು ಡಾ,ಗಾರ್ಸಿಯಾ ತೋಮನ್ ಹೇಳಿದ್ದಾರೆ.
ಶಸ್ತ್ರಚಿಕಿತ್ಸೆಗೆ ಒಳಗಾದ ಜಾನ್ ನಿಕೋಲಸ್ ಪ್ರತಿಕ್ರಿಯಿಸಿದ್ದು, ಸರ್ಜರಿ ವೇಳೆ ವೈದ್ಯರು ಏನು ಮಾಡುತ್ತಾರೆ? ನನ್ನದೇ ಶಸ್ತ್ರಚಿಕಿತ್ಸೆ ನೋಡಿದ್ದೇನೆ. ಇದೊಂದು ಒಳ್ಳೆಯ ಅನುಭವವಾಗಿತ್ತು. ಒಂದು ರೀತಿ ಹೇಳಬೇಕೆಂದ್ರೆ ಕೂಲ್ ಆಗಿತ್ತು. ಶಸ್ತ್ರಚಿಕಿತ್ಸೆ ಸಮಯದಲ್ಲಿ ವೈದ್ಯರು ಮಾಡುತ್ತಿರೋದು ಎಲ್ಲವೂ ಕಾಣಿಸುತ್ತಿತ್ತು. ಆದ್ರೆ ನನಗೆ ಯಾವುದೇ ರೀತಿಯ ನೋವು ಆಗುತ್ತಿರುತ್ತಿತ್ತು. ನಾನು ಸರ್ಜರಿ ಆರಂಭಿಸೋದು ಯಾವಾಗ ಅಂತ ಕೇಳುವ ಸಮಯದಲ್ಲಿ ವೈದ್ಯರು ತಮ್ಮ ಅರ್ಧ ಕೆಲಸ ಮುಗಿಸಿದ್ದರು ಎಂದು ಜಾನ್ ನಿಕೋಲಸ್ ಹೇಳಿದ್ದಾರೆ.