ಬೆಂಗಳೂರು: ಬಂಡವಾಳ ಹೂಡಿಕೆ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಕೆಲ ಕಂಪನಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೊಸ ಬಾಂಬ್ ಸಿಡಿಸಿದ್ದಾರೆ. ವಿಕಾಸಸೌಧದಲ್ಲಿ ಕಿಯೋನಿಕ್ಸ್ ಅಧ್ಯಕ್ಷ ಶರತ್ ಬಚ್ಚೇಗೌಡ ಅವರೊಂದಿಗೆ ನಡೆದ ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು,
ಬಂಡವಾಳ ಹೂಡಿಕೆಯ ವಿಚಾರದಲ್ಲಿ ಪ್ರಧಾನಿ ಮೋದಿ ಕೆಲ ಕಂಪನಿಗಳಿಗೆ ಬೆದರಿಕೆ ಹಾಕುತ್ತಿದ್ದಾರೆ. ಮೋದಿ ಅವರೇ ಕರೆ ಮಾಡಿ ಗುಜರಾತ್ನಲ್ಲಿ ಹೂಡಿಕೆ ಮಾಡುವಂತೆ ಹೇಳುತ್ತಿದ್ದಾರೆ. ಆ ಕಂಪನಿಗಳು ಯಾವುವು ಅಂತಾ ಗೊತ್ತಿದೆ, ಆದ್ರೆ ಹೆಸರು ಉಲ್ಲೇಖಿಸಲ್ಲ ಎಂದು ಹೇಳಿದ್ದಾರೆ.
Pavithra Gowda: ನಟಿಯಾಬೇಕೆನ್ನುವ ಕನಸು ಕಂಡಿದ್ದ ಪವಿತ್ರಾ ಗೌಡ ಲೈಫ್ ಹೇಗಿತ್ತು ಗೊತ್ತಾ..?
ಮುಂದುವರಿದು, ನಮ್ಮ ರಾಜ್ಯದ ಮಾನವ ಸಂಪನ್ಮೂಲಕ್ಕೆ ಬಹಳ ಬೇಡಿಕೆ ಇದೆ. ಬೇರೆ ರಾಜ್ಯಗಳಿಗಿಂತ ನಮ್ಮ ರಾಜ್ಯಕ್ಕೆ ಬೇಡಿಕೆ ಹೆಚ್ಚಿದೆ. ಚೀನಾ, ಯುರೋಪಿಯನ್ ದೇಶಗಳು, ಅಮೆರಿಕ ಕಂಪನಿಗಳ ಜೊತೆಗೆ ನಮ್ಮ ಸ್ಪರ್ಧೆ ಇದೆ. ನವೋದ್ಯಮದಲ್ಲಿ, ನಾವು 9ನೇ ಸ್ಥಾನದಲ್ಲಿದ್ದೇವೆ. ಮುಂದಿನ 4 ವರ್ಷಗಳ ಒಳಗೆ ಟಾಪ್-4ನೇ ಸ್ಥಾನಕ್ಕೆ ತಲುಪುವ ಗುರಿ ಹೊಂದಲಾಗಿದೆ ಎಂದು ತಿಳಿಸಿದ್ದಾರೆ.