ಹುಬ್ಬಳ್ಳಿ : ತಾಲೂಕಿನ ವೀರಶೈವ ಲಿಂಗಾಯತ ಎಲ್ಲ ಒಳಪಂಗಡಗಳ ಸಮಾಜದ ಎಸ್ಎಸ್ಎಲ್ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಶೇ. 95 ಕ್ಕಿಂತ ಹೆಚ್ಚು ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಜುಲೈ 20ರಂದು ನಗರದ ಸವಾಯಿ ಗಂಧರ್ವ ಹಾಲ್ನಲ್ಲಿ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮ ಏರ್ಪಡಿಸುವ ಕುರಿತು ಪೂವಭಾವಿ ಸಭೆ ನಡೆಯಿತು.
Hubballi: ನೃಪತುಂಗ ಬೆಟ್ಟ ಅಭಿವೃದ್ಧಿಗೆ 10 ಕೋಟಿ ರೂಪಾಯಿ ನೀಡಲು ಮನವಿ
ಪುರಸ್ಕಾರ ಸಮಿತಿ ಸಂಚಾಲಕ ಮಲ್ಲಿಕಾರ್ಜುನ ಸಾವುಕಾರ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಲು ಅನೇಕ ನಾಯಕರು ಸಲಹೆ ಸೂಚನೆಗಳನ್ನು ನೀಡಿದರು.
ಸಮಾಜದ ಮುಖಂಡರಾದ ಪ್ರಕಾಶ ಬೆಂಡಿಗೇರಿ, ಚೆನ್ನಬಸಪ್ಪ ಧಾರವಾಡ ಶೆಟ್ಟರ, ಸದಾಶಿವ ಚೌಶೆಟ್ಟಿ,ಶರಣಪ್ಪ ಕೊಟಗಿ, ಮಹಾಂತೇಶ ಗಿರಿಮಠ, ಮಹೇಶ ಚಂದರಗಿ, ಮಲ್ಲಿಕಾರ್ಜುನ ಶಿರಗುಪ್ಪಿ, ಮುರುಗೇಶ ಶೆಟ್ಟರ, ಶಂಭು ಲಕ್ಷೇ ಶ್ವರಮಠ, ಎಸ್.ಎಸ್. ಪಾಟೀಲ, ಸಿ.ವಿ. ಪಾಟೀಲ ಹಾಗೂ ಮುಂತಾದವರು ಇದ್ದರು.