ಮುಂಬೈ: ಆಸ್ಟ್ರೇಲಿಯಾ ಸ್ಟಾರ್ ಕ್ರಿಕೆಟಿಗ ಡೇವಿಡ್ ವಾರ್ನರ್ ಅಂತಾರಾಷ್ಟ್ರೀಯ ಕ್ರಿಕೆಟಿಗೆ ಗುಡ್ಬೈ ಹೇಳಿದ್ದಾರೆ. ಬಾಂಗ್ಲಾದೇಶ ವಿರುದ್ಧ ನಡೆದ ಸೂಪರ್ 8 ಪಂದ್ಯದಲ್ಲಿ ಅಫ್ಘಾನಿಸ್ತಾನ ರೋಚಕ 8 ರನ್ಗಳ ಜಯ ಸಾಧಿಸುವುದರೊಂದಿಗೆ ಡೇವಿಡ್ ವಾರ್ನರ್ ಅಂತಾರಾಷ್ಟ್ರೀಯ ಕ್ರಿಕೆಟ್ ಬದುಕು ಅಂತ್ಯವಾಗಿದೆ.
ಡೇವಿಡ್ ವಾರ್ನರ್ ಅಧಿಕೃತವಾಗಿ ಎಲ್ಲಿಯೂ ನಿವೃತ್ತಿ ನಿರ್ಧಾರವನ್ನು ಪ್ರಕಟಿಸಿಲ್ಲ. ಆದರೆ ಟಿ20 ವಿಶ್ವಕಪ್ ಕ್ರಿಕೆಟ್ ಆರಂಭಕ್ಕೂ ಮುನ್ನ ಈ ವಿಶ್ವಕಪ್ನಲ್ಲಿ ನಾನು ಕೊನೆಯ ಬಾರಿ ಆಸ್ಟ್ರೇಲಿಯಾದ ಜರ್ಸಿ ಧರಿಸಿ ಆಡಲಿದ್ದೇನೆ ಎಂದು ಹೇಳುವ ಮೂಲಕ ನಿವೃತ್ತಿಯ ಸುಳಿವು ನೀಡಿದ್ದರು.
Heart Attack Symptoms: ಎಚ್ಚರ! ಈ ಲಕ್ಷಣಗಳು ಹಾರ್ಟ್ ಅಟ್ಯಾಕ್’ನ ಸೂಚನೆ ಇರಬಹುದು..!
ಡೇವಿಡ್ ವಾರ್ನರ್ ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಹೇಳಿದರೂ ಎಲ್ಲಾ ಮಾದರಿಯ ಕ್ರಿಕೆಟಿಗೆ ನಿವೃತ್ತಿ ಹೇಳುತ್ತಾರಾ ಇಲ್ಲವೋ ಎನ್ನುವುದು ಸ್ಪಷ್ಟವಾಗಿಲ್ಲ. ಸದ್ಯ ಐಪಿಎಲ್ನಲ್ಲಿ (IPL) ಡೇವಿಡ್ ವಾರ್ನರ್ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಆಡುತ್ತಿದ್ದಾರೆ.
ಸೋಮವಾರ ನಡೆದ ಪಂದ್ಯದದಲ್ಲಿ ಆಸ್ಟ್ರೇಲಿಯಾ ವಿರುದ್ಧ ಭಾರತ 24 ರನ್ಗಳಿಂದ ಗೆದ್ದುಕೊಂಡಿತ್ತು. ಒಂದು ವೇಳೆ ಇಂದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ ಒಂದು ವೇಳೆ ಸೋತಿದ್ದರೆ ರನ್ ರೇಟ್ ಆಧಾರದಲ್ಲಿ ಆಸ್ಟ್ರೇಲಿಯಾ ಸೆಮಿ ಫೈನಲ್ ಪ್ರವೇಶಿಸುವ ಸಾಧ್ಯತೆ ಇತ್ತು. ಆದರೆ ಅಫ್ಘಾನಿಸ್ತಾನ ಬಾಂಗ್ಲಾ ವಿರುದ್ಧ ಗೆಲ್ಲುವ ಮೂಲಕ ಆಸ್ಟ್ರೇಲಿಯಾ ಸೆಮಿ ಪ್ರವೇಶದ ಬಾಗಿಲು ಬಂದ್ ಆಗಿದೆ.
ಭಾರತದ ವಿರುದ್ಧ ಪಂದ್ಯದಲ್ಲಿ ಆರಂಭಿಕ ಆಟಗಾರರಾಗಿ ಕಣಕ್ಕೆ ಇಳಿದಿದ್ದ ಡೇವಿಡ್ ವಾರ್ನರ್ 6 ರನ್ ಗಳಿಸಿ ವಿಕೆಟ್ ಒಪ್ಪಿಸಿದ್ದರು. 37 ವರ್ಷದ ಡೇವಿಡ್ ವಾರ್ನರ್ 161 ಏಕದಿನ ಪಂದ್ಯಗಳ 159 ಇನ್ನಿಂಗ್ಸ್ನಲ್ಲಿ 6,932 ರನ್ ಹೊಡೆದಿದ್ದಾರೆ. 112 ಟೆಸ್ಟ್ ಪಂದ್ಯಗಳ 205 ಇನ್ನಿಂಗ್ಸ್ನಲ್ಲಿ 8,786 ರನ್ ಚಚ್ಚಿದ್ದಾರೆ. 110 ಟಿ20 ಪಂದ್ಯಗಳ 110 ಇನ್ನಿಂಗ್ಸ್ನಲ್ಲಿ 3,277 ರನ್ ಬಾರಿಸಿದ್ದಾರೆ.