ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿದ ವಿಚಾರಣಾಧೀನ ಕೈದಿ ನಟ ದರ್ಶನ್ ನೋಡಲು ನಟ ವಿನೋದ್ ಪ್ರಭಾರ್ ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ್ದಾರೆ. ಹೌದು ಜೈಲಿನಲ್ಲಿ ಎರಡು ದಿನ ಕಳೆದಿರುವ ನಟ ದರ್ಶನ್ ನೋಡಲು ಆತನ ಆಪ್ತ ಸ್ನೇಹಿತ ನಟ ವಿನೋದ್ ಪ್ರಭಾಕರ್ ಕೂಡ ಪರಪ್ಪನ ಅಗ್ರಹಾರ ಜೈಲಿಗೆ ಆಗಮಿಸಿದ್ದಾರೆ.
Rice Water: ಅನ್ನ ಬಸಿದ ಗಂಜಿ ನೀರು ಗುಟ್ಟು ತಿಳಿದ್ರೆ ಇನ್ಯಾವತ್ತು ಬಿಸಾಕುವುದಿಲ್ಲ..!
ಇವರನ್ನು ಪೊಲೀಸರು ಹಂತ ಹಂತವಾಗಿ ತಪಾಸಣೆ ಮಾಡಿ ಜೈಲಿನ ಒಳಗೆ ನೋಡಲು ಅವಕಾಶ ಕೊಡಲು ಮುಂದಾಗಿದ್ದಾರೆ. ಗೇಟಿನ ಹೊರಗೆ ಕಾರನ್ನು ನಿಲ್ಲಿಸಿ ಸಾಮಾನ್ಯ ಜನರಂತೆ ನಡೆದುಕೊಂಡ ಹೋದ ವಿನೋದ್ ಪ್ರಭಾಕರ್ ಅವರಿಗೆ ಮೊಬೈಲ್ ನಿಷೇಧದ ಬಗ್ಗೆ ಮಾಹಿತಿ ನೀಡಿ ನಂತರ ಒಳಗೆ ಬಿಡಲು ಮುಂದಾಗಿದ್ದಾರೆ. ಇನ್ನು ನಟ ದರ್ಶನ್ ಮತ್ತು ವಿನೋದ್ ಪ್ರಭಾಕರ್ ಸ್ನೇಹಿತರಾಗಿದ್ದು ‘ನವಗ್ರಹ’ ಸಿನಿಮಾದಲ್ಲಿ ಒಟ್ಟಿಗೆ ನಟಿಸಿದ್ದಾರೆ.