ಇಂದು ನಡೆಯುವ ಭಾರತ-ಆಸೀನ್ ಪಂದ್ಯಕ್ಕೆ ಮಳೆಯ ಕಾಟ ಎದುರಾಗಿದೆ. ಸೇಂಟ್ ಲೂಸಿಯಾದಲ್ಲಿ ಸ್ಥಳೀಯ ಕಾಲಮಾನ ಬೆಳಿಗ್ಗೆ 10.30 ಕ್ಕೆ ನಡೆಯಲಿದೆ. ಅಂದರೆ ಈ ಪಂದ್ಯ ಭಾರತೀಯ ಕಾಲಮಾನ ರಾತ್ರಿ 8 ಗಂಟೆಯಿಂದ ಆರಂಭವಾಗಲಿದೆ. ಹವಾಮಾನ ವರದಿಗಳ ಪ್ರಕಾರ, ಈ ದಿನ ಸೇಂಟ್ ಲೂಸಿಯಾದಲ್ಲಿ ಬೆಳಿಗ್ಗೆ ಶೇ. 55 ರಷ್ಟು ಮಳೆಯಾಗುವ ಸಾಧ್ಯತೆಯಿದೆ.
ಹೀಗಾಗಿ ಈ ಪಂದ್ಯದ ಮೇಲೆ ಎಲ್ಲರ ದೃಷ್ಟಿ ನೆಟ್ಟಿದೆ. ಆದರೆ ಪಂದ್ಯಕ್ಕೆ ಮಳೆ ಅಡ್ಡಿಪಡಿಸುತ್ತಾ ಆತಂಕ ಎರಡೂ ತಂಡಗಳ ಅಭಿಮಾನಿಗಳಲ್ಲಿ ಮೂಡಿದೆ. ಅವರ ಆತಂಕದಂತೆ ಈ ಪಂದ್ಯಕ್ಕೆ ಮಳೆಯ ಭೀತಿ ಎದುರಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಮಳೆಯಿಂದಾಗಿ ಈ ಪಂದ್ಯ ರದ್ದಾದರೆ ಒಂದು ತಂಡ ಹೆಚ್ಚು ನಷ್ಟ ಅನುಭವಿಸಲಿದೆ.
ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಪಂದ್ಯ ಜೂನ್ 24 ರಂದು ಸೇಂಟ್ ಲೂಸಿಯಾದಲ್ಲಿ ಸ್ಥಳೀಯ ಕಾಲಮಾನ ಬೆಳಿಗ್ಗೆ 10.30 ಕ್ಕೆ ನಡೆಯಲಿದೆ. ಅಂದರೆ ಈ ಪಂದ್ಯ ಭಾರತೀಯ ಕಾಲಮಾನ ರಾತ್ರಿ 8 ಗಂಟೆಯಿಂದ ಆರಂಭವಾಗಲಿದೆ. ಹವಾಮಾನ ವರದಿಗಳ ಪ್ರಕಾರ, ಈ ದಿನ ಸೇಂಟ್ ಲೂಸಿಯಾದಲ್ಲಿ ಬೆಳಿಗ್ಗೆ ಶೇ. 55 ರಷ್ಟು ಮಳೆಯಾಗುವ ಸಾಧ್ಯತೆಯಿದೆ. ಇದಲ್ಲದೆ, ಇಲ್ಲಿ ತಾಪಮಾನವು ಸುಮಾರು 32 ಡಿಗ್ರಿ ಇರುತ್ತದೆ. ಅಂದರೆ ಇದರರ್ಥ ಈ ಪಂದ್ಯದ ವೇಳೆ ಮಳೆಯಾಗುವ ಸಾಧ್ಯತೆ ಇದೆ.
ವಾಸ್ತವವಾಗಿ ಎರಡೂ ತಂಡಗಳಿಗೂ ಸೂಪರ್ 8 ಸುತ್ತಿನಲ್ಲಿ ಕೊನೆಯ ಪಂದ್ಯ ಇದಾಗಿದೆ. ಹೀಗಿರುವಾಗ ಮಳೆಯಿಂದಾಗಿ ಈ ಪಂದ್ಯ ರದ್ದಾದರೆ ಉಭಯ ತಂಡಗಳಿಗೂ ತಲಾ ಒಂದೊಂದು ಅಂಕ ಸಿಗಲಿದೆ. ಇಂತಹ ಪರಿಸ್ಥಿತಿಯಲ್ಲಿ ಭಾರತ 5 ಅಂಕಗಳೊಂದಿಗೆ ಸೆಮಿಫೈನಲ್ನಲ್ಲಿ ಸ್ಥಾನ ಪಡೆಯಲಿದೆ. ಆದರೆ ಸೆಮಿಫೈನಲ್ಗೆ ಪ್ರವೇಶಿಸಲು ಆಸ್ಟ್ರೇಲಿಯಾ ಬಾಂಗ್ಲಾದೇಶ ಮತ್ತು ಅಫ್ಘಾನಿಸ್ತಾನ ನಡುವಿನ ಪಂದ್ಯಗಳ ಫಲಿತಾಂಶಗಳನ್ನು ಅವಲಂಬಿಸಬೇಕಾಗುತ್ತದೆ. ಈ ಪಂದ್ಯದಲ್ಲಿ ಅಫ್ಘಾನಿಸ್ತಾನ ಗೆದ್ದರೆ ಆಸ್ಟ್ರೇಲಿಯಾ ಟೂರ್ನಿಯಿಂದ ಹೊರಬೀಳಲಿದೆ.