ಪ್ರತಿಯೊಬ್ಬರ ಮನೆಯಲ್ಲೂ ಅನ್ನವನ್ನು ಮಾಡುತ್ತಾರೆ. ಹೆಚ್ಚಿನವರು ಅನ್ನವನ್ನು ತಯಾರಿಸಿದ ನಂತರ ಆ ನೀರನ್ನು ಬಸಿದು ಚೆಲ್ಲುತ್ತಾರೆ. ಆದರೆ ಅನ್ನಕ್ಕಿಂತ ಹೆಚ್ಚಿನ ಪೋಷಕಾಂಶಗಳು ಅಕ್ಕಿ ನೀರಿನಲ್ಲಿ ಕಂಡುಬರುತ್ತದೆ ಎಂದು ತಜ್ಞರು ನಂಬುತ್ತಾರೆ.
ಜೀವಕೋಶಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ
ಅಕ್ಕಿ ನೀರು ಅನೇಕ ಖನಿಜಗಳು ಮತ್ತು ವಿಟಮಿನ್ಗಳಿಂದ ಕೂಡಿದ್ದು ಅದು ಚರ್ಮಕ್ಕೆ ಜೀವಕೋಶಗಳ ಬೆಳವಣಿಗೆಯನ್ನು ಉತ್ತೇಜಿಸುವ, ವಯಸ್ಸಾದ ಪ್ರಕ್ರಿಯೆಯನ್ನು ವಿಳಂಬಗೊಳಿಸುವ ಮತ್ತು ರಕ್ತದ ಹರಿವನ್ನು ಉತ್ತೇಜಿಸುವ ‘ಇನೋಸಿಟಾಲ್’ ಎಂಬ ಸಂಯುಕ್ತವನ್ನು ಹೊಂದಿದೆ. ಅಕ್ಕಿ ನೀರು ಉತ್ಕರ್ಷಣ ನಿರೋಧಕ, ಆರ್ಧ್ರಕ ಮತ್ತು ಯುವಿ ಕಿರಣಗಳನ್ನು ಹೀರಿಕೊಳ್ಳುವ ಗುಣಗಳನ್ನು ಹೊಂದಿದೆ, ಇದು ರಂಧ್ರಗಳನ್ನು ಬಿಗಿಗೊಳಿಸುತ್ತದೆ ಮತ್ತು ಪಿಗ್ಮೆಂಟೇಶನ್ ಮತ್ತು ವಯಸ್ಸಿನ ಕಲೆಗಳನ್ನು ತಡೆಯುತ್ತದೆ.
ಅಕ್ಕಿ ನೀರು ಬಿಳಿ ಸೆರಗಿನ ಸಮಸ್ಯೆಗೆ
ಮಹಿಳೆಯರಲ್ಲಿಲ ಹೆಚ್ಚಾಗಿ ಕಂಡುಬರುವ ಬಿಳಿ ವಿಸರ್ಜನೆಯ ಸಮಸ್ಯೆಯಲ್ಲಿ ಅಂದರೆ ಲ್ಯುಕೋರೋಯಾದಲ್ಲಿ ಅಕ್ಕಿ ನೀರು ತುಂಬಾ ಪ್ರಯೋಜನಕಾರಿಯಾಗಿದೆ. ನೀವು ಈ ಸಮಸ್ಯೆಯನ್ನು ಎದುರಿಸುತ್ತಿದ್ದರೆ, ಉತ್ತಮ ಫಲಿತಾಂಶಗಳಿಗಾಗಿ ನೀವು ಅದನ್ನು ಕುಡಿಯಬಹುದು.
ಕೂದಲನ್ನು ಆರೋಗ್ಯವಾಗಿರಿಸುತ್ತದೆ
ಅಕ್ಕಿ ನೀರು ಚರ್ಮ ಮತ್ತು ಕೂದಲಿಗೆ ಉತ್ತಮವಾಗಿರುವುದರ ಜೊತೆಗೆ ದೇಹಕ್ಕೆ ಅನೇಕ ಚಿಕಿತ್ಸಕ ಪ್ರಯೋಜನಗಳನ್ನು ಹೊಂದಿದೆ. ಇದನ್ನು ಚರ್ಮ ಮತ್ತು ಕೂದಲಿಗೆ ಹಲವು ವಿಧಗಳಲ್ಲಿ ಬಳಸಬಹುದು. ಕೂದಲು ಶೈನಿಂಗ್ ಆಗಿರುತ್ತದೆ.
ಉರಿ ಮೂತ್ರ ವಿಸರ್ಜನೆ
ಅಕ್ಕಿ ತೊಳೆದ ನೀರು ತಂಪಾಗಿರುತ್ತದೆ. ಆದ್ದರಿಂದ, ಉರಿ ಮೂತ್ರ ವಿಸರ್ಜನೆ, ಅತಿಸಾರ, ರಕ್ತಸ್ರಾವದ ಅಸ್ವಸ್ಥತೆಗಳು ಮತ್ತು ಅಧಿಕ ಪಿರಿಯೆಡ್ಸ್ ಸಮಯದಲ್ಲಿ ಇದು ಪ್ರಯೋಜನಕಾರಿಯಾಗಿದೆ. ಇದಲ್ಲದೆ, ಇದು ಅಂಗೈ ಮತ್ತು ಪಾದಗಳಲ್ಲಿರುವ ಸಂವೇದನೆಯನ್ನು ಕಡಿಮೆ ಮಾಡುತ್ತದೆ.ಇದು ಬಹಳ ತಂಪಾಗಿರುವುದರಿಂದ ಶೀತ ಹಾಗೂ ಕೆಮ್ಮಿನ ಸಮಸ್ಯೆ ಇರುವವರು ಇದನ್ನು ಕುಡಿಯದೇ ಇರುವುದೇ ಒಳ್ಳೆಯದು.
ಮುಖದ ಮೇಲಿನ ಮೊಡವೆಗಳು ಮತ್ತು ಗುಳ್ಳೆಗಳಿಗೆ ರಾಮಬಾಣ
ಮುಖದ ಮೇಲೆ ಈಗಾಗಲೇ ಸಾಕಷ್ಟು ಕಪ್ಪುಕಲೆಗಳನ್ನು ಹೊಂದಿರುವವರು ಮತ್ತು ವಿಪರೀತ ಗುಳ್ಳೆಗಳನ್ನು ಮತ್ತು ಮೊಡವೆಗಳನ್ನು ಹೊಂದಿರುವವರು ಅನ್ನದ ಗಂಜಿಯನ್ನು ನೈಸರ್ಗಿಕ ಔಷಧಿಯಾಗಿ ಬಳಕೆ ಮಾಡಬಹುದು.ಒಂದು ಹತ್ತಿ ಉಂಡೆಯನ್ನು ತೆಗೆದುಕೊಂಡು ಉಗುರುಬೆಚ್ಚಗಿನ ಅನ್ನದ ಗಂಜಿಯಲ್ಲಿ ಅದನ್ನು ಅದ್ದಿ ಮೊಡವೆಗಳು ಮತ್ತು ಕಲೆಗಳು ಹೆಚ್ಚಾಗಿ ಕಂಡುಬರುವ ಜಾಗಕ್ಕೆ ಗಂಜಿಯನ್ನು ಲೇಪನ ಮಾಡಿಕೊಳ್ಳಿ.ತುಂಬಾ ಕಡಿಮೆ ಸಮಯದಲ್ಲಿ ನಿಮಗೆ ಯಾವುದೇ ಖರ್ಚಿಲ್ಲದೆ ನಿಮ್ಮ ಮೊಡವೆಗಳು ಮತ್ತು ಅದರ ಕಲೆಗಳು ಮಾಯವಾಗುತ್ತವೆ.
ಮುಖದ ಕ್ರೀಮ್ ಆಗಿ ಬಳಕೆ ಮಾಡಬಹುದು
ಅನ್ನದ ಗಂಜಿಯನ್ನು ಒಂದು ಬಾಟಲ್ ನಲ್ಲಿ ತುಂಬಿಟ್ಟು ಅದಕ್ಕೆ ಸ್ವಲ್ಪ ರೋಸ್ ವಾಟರ್ ಮತ್ತು ಗ್ಲಿಸರಿನ್ ಬೆರೆಸಿ ಆರೆಂಜ್ ಎಸೆನ್ಶಿಯಲ್ ಆಯಿಲ್ ನ ಕೆಲವು ಹನಿಗಳನ್ನು ಅದಕ್ಕೆ ಸೇರಿಸಿ ನಿಮ್ಮ ಮುಖವನ್ನು ಸುಂದರವಾಗಿ ಕಾಣಿಸಿಕೊಳ್ಳುವಂತೆ ಮಾಡಿಕೊಳ್ಳಬಹುದು. ಸೌಂದರ್ಯ ಪ್ರಜ್ಞೆ ಇರುವ ಯಾರು ಬೇಕಾದರೂ ಇದನ್ನು ಅನುಸರಿಸಬಹುದು.