ಇಲ್ಲೊಬ್ಬ ತಂದೆ ಗಡ್ಡ ಮೀಸೆ ಬೋಳಿಸಿದ್ದಕ್ಕೆ ಬೆಳೆದು ನಿಂತ ಮಗನ ಕೆನ್ನೆಗೆ ಬಾರಿಸಿದ್ದಾರೆ. ಈ ವಿಡಿಯೋ ಇದೀಗ ವೈರಲ್ ಆಗಿದ್ದು, ತಂದೆಯ ಈ ಅತಿರೇಕದ ವರ್ತನೆಗೆ ನೆಟ್ಟಿಗರು ಫುಲ್ ಗರಂ ಆಗಿದ್ದಾರೆ.
ರೇಣುಕಾಸ್ವಾಮಿ ಕೊಲೆ ಪ್ರಕರಣ… ಪ್ರತ್ಯಕ್ಷ ಸಾಕ್ಷಿಗಳು ಇದ್ದಾರೆಂದ ಪೊಲೀಸರು!
ಈ ವಿಡಿಯೋವನ್ನು @gharkekalesh ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಕ್ಲೀನ್ ಶೇವ್ ಮಾಡುವ ಮೂಲಕ ತಂದೆಗೆ ಸರ್ಪ್ರೈಸ್ ನೀಡಲು ಹೋದ ಮಗ” ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.
ವೈರಲ್ ವಿಡಿಯೋದಲ್ಲಿ ಯುವಕನೊಬ್ಬ ಕ್ಲೀನ್ ಶೇವ್ ಮಾಡಿ ತನ್ನ ತಂದೆಗೆ ಸರ್ಪ್ರೈಸ್ ನೀಡಲು ಬಹಳ ಕಾತುರದಿಂದ ನಿಂತಿರುವುದನ್ನು ಕಾಣಬಹುದು. ನಂತರ ತಂದೆ ಹಿಂದೆಯಿಂದ ಬಂದು ಮಗನ ಕ್ಲೀನ್ ಶೇವ್ ಅವತಾರವನ್ನು ಕಂಡು, ಗಡ್ಡ ಮೀಸೆ ಬೋಳಿಸ್ತೀಯಾ ಅಂತಾ ಕೋಪದಿಂದ ಮಗನಿಗೆ ಕಪಾಳಮೋಕ್ಷ ಮಾಡಿದ್ದಾರೆ.
ಜೂನ್ 18 ರಂದು ಹಂಚಿಕೊಳ್ಳಲಾದ ಈ ವಿಡಿಯೋ 12.4 ಮಿಲಿಯನ್ ವೀಕ್ಷಣೆಗಳನ್ನು ಹಾಗೂ ಅನೇಕ ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ