ಕನ್ನಡತಿ, ಬಾಲಿವುಡ್ ಬೆಡಗಿ ನಟಿ ದೀಪಿಕಾ ಪಡುಕೋಣೆ ಅಮ್ಮ ಆಗುತ್ತಿದ್ದಾರೆ.ಹೊಸ ಅತಿಥಿಯನ್ನು ಬರಮಾಡಿಕೊಳ್ಳುವ ಸಂಭ್ರಮದಲ್ಲಿ ದೀಪಿಕಾ ಹಾಗೂ ರಣಬೀರ್ ಇದ್ದಾರೆ. ಗರ್ಭಿಣಿಯಾದಾಗಲು ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದ ದೀಪಿಕಾ ಇದೀಗ ಕಲ್ಕಿ ಸಿನಿಮಾದ ಪ್ರೀರಿಲೀಸ್ ಕಾರ್ಯಕ್ರಮದಲ್ಲಿ ಕಾಣಿಸಿಕೊಂಡಿದ್ದಾರೆ.
ದೀಪಿಕಾ ಪಡುಕೋಣೆ, ಪ್ರಭಾಸ್, ಬಿಗ್ ಬಿ ಅಮಿತಾಬ್ ಬಚ್ಚನ್ ಸೇರಿದಂತೆ ಹಲವು ಸ್ಟಾರ್ಸ್ ಗಳು ನಟಿಸಿರುವ ಕಲ್ಕಿ 2898 ಚಿತ್ರದ ಪ್ರೀ-ರಿಲೀಸ್ ಈವೆಂಟ್ ನಿನ್ನೆ ಮುಂಬೈನಲ್ಲಿ ನಡೆಯಿತು. ಈ ಕಾರ್ಯಕ್ರಮದಲ್ಲಿ ದೀಪಿಕಾ ಬೇಬಿ ಬಂಪ್ನಲ್ಲಿ ಕಾಣಿಸಿಕೊಂಡಿದ್ದಾರೆ. ಕಾರ್ಯಕ್ರಮದಲ್ಲಿ ಅಮಿತಾಭ್ ಬಚ್ಚನ್, ಕಮಲ್ ಹಾಸನ್ ಕೂಡ ಆಗಮಿಸಿದ್ದರು.
ದೀಪಿಕಾ ಪಡುಕೋಣೆ ಧರಿಸಿರುವ ಹೈಹೀಲ್ಸ್ ಮತ್ತು ಟೈಟ್ ಡ್ರೆಸ್ ಮೇಲೆ ನೆಟ್ಟಿಗರ ಕಣ್ಣು ಹೋಗಿದೆ. ಗರ್ಭಿಣಿಯಾದವರು ಈ ರೀತಿ ಮಾಡುವುದು ಸರಿಯಲ್ಲ ಎನ್ನುವುದು ಹಲವರು ಹೇಳುತ್ತಿದ್ದಾರೆ. ಅಷ್ಟಕ್ಕೂ ಗರ್ಭಿಣಿಯರು ಹೈ ಹೀಲ್ಸ್ ಧರಿಸಲೇಬಾರದು ಎಂದು ವೈದ್ಯರು ಎಚ್ಚರಿಕೆ ಕೊಡುತ್ತಲೇ ಇರುತ್ತಾರೆ. ಆದರೂ ನಟಿ ಸಿಕ್ಕಾಪಟ್ಟೆ ಹೈ ಹೀಲ್ಸ್ ಧರಿಸಿ ಬಂದಿದ್ದಾರೆ. ಇದು ದೀಪಿಕಾ ಅಭಿಮಾನಿಗಳಿಗೆ ಬೇಸರ ಮೂಡಿಸಿದೆ.
ನಾಗ್ ಅಶ್ವಿನ್ ನಿರ್ದೇಶಿಸಿದ ಮತ್ತು ಸಿ.ಅಶ್ವಿನಿ ದತ್ ನಿರ್ಮಿಸಿದ ಕಲ್ಕಿ 2898 AD ಎಂಬ ವೈಜ್ಞಾನಿಕ ಕಾದಂಬರಿ ಆಧರಿತ ಕೂಡ ಇದೆ. ಈ ಚಿತ್ರದಲ್ಲಿ ಪ್ರಭಾಸ್ ಮತ್ತು ದಿಶಾ ಪಟಾನಿ ಜೊತೆಗೆ ಹಿರಿಯ ನಟರಾದ ಅಮಿತಾಭ್ ಬಚ್ಚನ್ ಮತ್ತು ಕಮಲ್ ಹಾಸನ್ ಸೇರಿದಂತೆ ದೊಡ್ಡ ತಾರಾಗಣವಿದೆ. ಚಿತ್ರ ತಂಡವು ನಟಿಯ ಗರ್ಭಧಾರಣೆಯನ್ನು ಪರಿಗಣಿಸಿ, ಮುಂದಿನ ಶೂಟಿಂಗ್ ಅನ್ನು ವೆಲ್ ಪ್ಲಾನ್ಡ್ ಆಗಿ ಯೋಜಿಸಿದ್ದಾರೆ. ಅವರು ನಿರ್ಮಾಪಕರ ಜೊತೆ ಚರ್ಚೆ ಮಾಡಿ, ಮೇ ಅಂತ್ಯದೊಳಗೆ ಪ್ರಚಾರದ ವಿಡಿಯೋ ಸಂದರ್ಶನಗಳನ್ನು ಪೂರ್ಣಗೊಳಿಸುವಂತೆ ನಟಿ ವಿನಂತಿಸಿಕೊಂಡಿದ್ದರು. ಇದೀಗ ಚಿತ್ರದ ಪ್ರೊಮೋಷನ್ ನಲ್ಲಿ ನಟಿ ಭಾಗಿಯಾಗಿದ್ದಾರೆ.
ಇನ್ನೂ ಪ್ರಮೋಷನ್ ವೇಳೆ ತೆಗೆದು ಫೋಟೋಗಳನ್ನು ನಟಿ ಶೇರ್ ಮಾಡಿದ್ದಾರೆ. ಕಪ್ಪು ಬಣ್ಣದ ಡ್ರೆಸ್ನಲ್ಲಿ ಧರಿಸಿ ನಗು ನಗುತ್ತಾ ಕ್ಯಾಮೆರಾ ಕಣ್ಣಿಗೆ ಪೋಸ್ ನೀಡಿರುವ ನಟಿ, ಬೇಬಿ ಬಂಪ್ ಲುಕ್ ಶೇರ್ ಮಾಡಿ ಸಾಕು, ನನಗೆ ಹಸಿವಾಗುತ್ತಿದೆ ಎಂದು ಕ್ಯಾಪ್ಷನ್ ನೀಡಿದ್ದಾರೆ.