ಗದಗ:-ಗರ್ಭಿಣಿ ಮಹಿಳೆಯರು ಹಾಗೂ ಮಕ್ಕಳ ಹೊಟ್ಟೆ ಸೇರಬೇಕಾದ ಪೌಷ್ಟಿಕ ಆಹಾರ ಹುಳುಗಳ ಪಾಲಾಗಿರುವ ಘಟನೆ ಗದಗ ಜಿಲ್ಲೆ ಮುಂಡರಗಿ ಪಟ್ಟಣದಲ್ಲಿ ಹೊರವಲಯದ ಗೋದಾಮಿನಲ್ಲಿ ನಡೆದಿದೆ.
Black Pepper Tea: ಕಾಳು ಮೆಣಸಿನ ಚಹಾ ಕುಡಿದಿದ್ದೀರಾ..? ಇದರ ಸೇವನೆಯಿಂದ ಸಿಗಲಿದೆ ಹಲವು ಪ್ರಯೊಜನಗಳು
ಲಕ್ಷಾಂತರ ಮೌಲ್ಯದ 100 ಟನ್ ಅಕ್ಕಿ ಹಾಗೂ ಗೋದಿ ಹಾಳಾಗಿದೆ. ಎಂಎಸ್ಪಿಸಿ ಸಂಸ್ಥೆ ಮೂಲಕ ಮುಂಡರಗಿ, ಶಿರಹಟ್ಟಿ ತಾಲೂಕಿನ ಅಂಗನವಾಡಿ ಕೇಂದ್ರಕ್ಕೆ ಸರಬರಾಜು ಮಾಡಬೇಕಿದ್ದ ಆಹಾರ ಪದಾರ್ಥ ವ್ಯರ್ಥವಾಗಿದೆ. FCI ದಿಂದ ರಿಯಾಯ್ತಿ ದರದಲ್ಲಿ ಅಕ್ಕಿ ಹಾಗೂ ಗೋಧಿಯನ್ನು ಖರೀದಿ ಮಾಡಲಾಗಿತ್ತು. ಆದರೆ ಅದನ್ನು ಈಗ ಹುಳುಗಳು ತಿಂದು ತೇಗಿವೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಲಕ್ಷಾಂತರ ರೂಪಾಯಿ ಮೌಲ್ಯದ 50 ಟನ್ ಕ್ಕೂ ಅಧಿಕ ಅಕ್ಕಿ ಹಾಗೂ ಗೋಧಿ ನಾಶವಾಗಿದೆ. ಅಕ್ಕಿ ಸಂಗ್ರಹಿಸಿದ ಗೋದಾಮಿನಲ್ಲಿ ಹುಳು ತುಂಬಿ ಅಕ್ಕಿ, ಗೋಧಿ ಉಪಯೋಗಕ್ಕೆ ಬಾರದಂತಾಗಿದೆ.
ಲಕ್ಷಾಂತರ ಮೌಲ್ಯದ ಅಕ್ಕಿ, ಗೋಧಿ ಹಾಳಾದ್ರೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಯಾವುದೇ ಕ್ರಮಕ್ಕೆ ಮುಂದಾಗಿಲ್ಲ. ಸೌಜನ್ಯಕ್ಕೂ ಗೋದಾಮಿಗೆ ಭೇಟಿ ನೀಡಿ ಅಧಿಕಾರಿಗಳು ಪರಿಶೀಲನೆ ಮಾಡಿಲ್ಲ. ಲಕ್ಷಾಂತರ ಮೌಲ್ಯದ ಅಕ್ಕಿ, ಗೋಧಿ ಹಾಳಾಗಿದ್ದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ