ಗರ್ಭಿಣಿಗೆ ಹಾವು ಎಂದಿಗೂ ಕಚ್ಚುವುದಿಲ್ಲ ಎಂಬ ನಂಬಿಕೆ ಇದೆ. ಗರ್ಭಿಣಿಯ ರ ಳಿ ಹೋಗುತ್ತಿದ್ದಂತೆ ಹಾವುಗಳಿಗೆ ಕಣ್ಣು ಕಾಣುವುದಿಲ್ಲ.. ಆಗ ಮುಂದಕ್ಕೆ ಅವುಗಳಿಗೆ ದಾರಿ ಕಾಣುವುದಿಲ್ಲ ಎಂದು ಹೇಳಲಾಗುತ್ತದೆ. ಆದರೆ ಹಾವುಗಳ ವಿಷಯದಲ್ಲಿ ಈ ವಿಚಿತ್ರ ಏಕೆ ಏಕೆ ಸಂಭವಿಸುತ್ತವೆ? ನಮ್ಮ ಪುರಾಣಗಳಲ್ಲಿ ಅಡಗಿರುವ ವಿಷಯಗಳ ಬಗ್ಗೆ ಈ ಎಲ್ಲಾ ಪ್ರಶ್ನೆಗಳಿಗೆ ಉತ್ತರಗಳನ್ನು ಇಂದು ನಾವು ತಿಳಿಯೋಣ.
ಗರ್ಭಿಣಿಯೊಬ್ಬಳು ಶಿವನ ದೇವಸ್ಥಾನದಲ್ಲಿ ತಪಸ್ಸು ಮಾಡುತ್ತಿದ್ದಳು. ಅವಳು ಸಂಪೂರ್ಣವಾಗಿ ತಪಸ್ಸಿನಲ್ಲಿ ಮುಳುಗಿದ್ದಳು. ಆ ವೇಳೆ ಎರಡು ಹಾವುಗಳು ದೇವಸ್ಥಾನದೊಳಗೆ ಬಂದು ಗರ್ಭಿಣಿಗೆ ಕಿರುಕುಳ ನೀಡಲಾರಂಭಿಸಿದ್ದು, ಮಹಿಳೆಯ ತಪಸ್ಸಿಗೆ ಭಂಗ ಉಂಟಾಗುತ್ತದೆ. ತನ್ನನ್ನು ಕಾಡುತ್ತಿರುವ ಹಾವುಗಳಿಗೆ ಏನು ಮಾಡಬೇಕೆಂದು ತೋಚದೆ ದಿಕ್ಕು ತೋಚದ ಸ್ಥಿತಿಯಲ್ಲಿದ್ದಳು.
ಹೆಣ್ಣಿನ ತಪಸ್ಸು ಭಗ್ನಗೊಂಡಿದ್ದರಿಂದ ಹಾವುಗಳು ಗರ್ಭಿಣಿಯ ಬಳಿ ಹೋದರೆ ಕುರುಡಾಗಲಿವೆ ಎಂದು ಇಡೀ ನಾಗರ ಜನಾಂಗಕ್ಕೆ ಮಹಿಳೆಯ ಹೊಟ್ಟೆಯಲ್ಲಿ ಬೆಳೆಯುತ್ತಿದ್ದ ಮಗು ಶಾಪ ನೀಡಿತು. ಅದಾದ ನಂತರ ಹಾವುಗಳು ಗರ್ಭಿಣಿಯನ್ನು ಕಂಡರೆ ಕುರುಡಾಗುತ್ತವೆ, ಗರ್ಭಿಣಿಯನ್ನು ಕಚ್ಚುವುದಿಲ್ಲ ಎಂಬ ನಂಬಿಕೆ ಜನಜನಿತವಾಯಿತು. ಕಥೆಯ ಪ್ರಕಾರ, ಗರ್ಭಿಣಿ ಮಹಿಳೆಗೆ ಜನಿಸಿದ ಮಗುವಿಗೆ ಗೋಗಾ ಜಿ ದೇವ್, ಶ್ರೀ ತೇಜಾ ಜಿ ದೇವ್, ಜಹರ್ವೀರ್ ಎಂದು ಹೆಸರಾಯಿತು. ಹಿಂದೂ ಧರ್ಮದಲ್ಲಿ ನಾಗರ ಹಾವನ್ನು ಕೊಲ್ಲುವುದು ಮಹಾಪಾಪ ಎಂದು ಪರಿಗಣಿಸಲಾಗಿದೆ. ಹಾವನ್ನು ಕೊಂದ ವ್ಯಕ್ತಿಯು ತನ್ನ ಜೀವನದಲ್ಲಿ ಅನೇಕ ದುಷ್ಪರಿಣಾಮಗಳನ್ನು ಅನುಭವಿಸಬೇಕಾಗುತ್ತದೆ ಎಂದು ನಂಬಲಾಗಿದೆ.. ಗರ್ಭಿಣಿ ಮಹಿಳೆ ಹಾವುಗಳನ್ನು ಕೊಲ್ಲಬಾರದು ಎಂದು ನಂಬಲಾಗಿದೆ. ಆದರೆ ಪುರಾಣದ ಪ್ರಕಾರ ಹಾವಿನ ಹತ್ತಿರ ಹೋಗುವುದರಿಂದ ತಿಳಿದೋ ತಿಳಿಯದೆಯೋ ಗರ್ಭಿಣಿಗೆ ಮತ್ತು ಮಗುವಿಗೆ ಹಾನಿಯಾಗುತ್ತದೆ