ಬಹುತೇಕ ಮಂದಿ ನಾನಾ ಸಣ್ಣ ಆಗಲು ಪ್ರಯತ್ನಗಳನ್ನು ಮಾಡುತ್ತಿರುತ್ತಾರೆ. ಮೇಲ್ನೋಟಕ್ಕೆ ಇದು ಸುಲಭವಾಗಿ ಕಂಡರೂ ಬಹಳ ಮಂದಿಗೆ ಇದು ಸಾಹಸವಿದ್ದಂತೆ
ಕೆಲವರು ಜಿಮ್, ಯೋಗ, ಡಯೆಟ್, ವರ್ಕೌಟ್ ಹೀಗೆ ಹಲವಾರು ಸರ್ಕಸ್ಗಳನ್ನು ಮಾಡುವ ಮೂಲಕ ಬೆವರಿಳಿಸುತ್ತಾರೆ. ಮತ್ತೆ ಕೆಲವರು ಆಹಾರ ಪದ್ಧತಿಯನ್ನು ಅನುಸರಿಸುತ್ತಾರೆ. ಹೀಗಿದ್ದರೂ ಈ ಪ್ರಯತ್ನಗಳ ನಂತರವೂ ಕೇವಲ ಒಂದೆರಡು,, ಿಯ
ಇದಲ್ಲದೇ ಬೊಜ್ಜು ನಮ್ಮಲ್ಲಿ ಮಧುಮೇಹ, ಅಧಿಕ ರಕ್ತದೊತ್ತಡ ಮತ್ತು ಕೊಲೆಸ್ಟ್ರಾಲ್ ಅಪಾಯವನ್ನು ಹೆಚ್ಚಿಸುತ್ತದೆ. ಆದ್ದರಿಂದ ಬೊಜ್ಜಿನ ಸಮಸ್ಯೆಯಿಂದ ಬಳಲುತ್ತಿರುವವರು ಸಾಧ್ಯವಾದಷ್ಟು ಬೇಗನೇ ತೂಕ ಇಳಿಸಿಕೊಳ್ಳುವುದು ಉತ್ತಮ ಎಂದು ಸಾಕಷ್ಟು ವೈದ್ಯರು ಎಚ್ಚರಿಕೆ ನೀಡುತ್ತಾರೆ. ಆದರೆ ಕೆಲವು ನೀವು ಡಯಟ್ ಮಾಡುವ ಅಗತ್ಯವಿಲ್ಲ. ಕೆಲವು ವ್ಯಾಯಾಮಗಳನ್ನು ತಪ್ಪದೇ ಪ್ರತಿದಿನ ಮಾಡುವ ಮೂಲಕ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು ಎಂದು ತಿಳಿಸಿದ್ದಾರೆ. ಹಾಗಾದ್ರೆ ತೂಕ ಇಳಿಸಿಕೊಳ್ಳಲು ಮಾಡಬೇಕಾದ ವ್ಯಾಯಾಮಗಳಾಗಿದಂ.
ಸ್ಟೆಪ್ಸ್ ಹತ್ತುವುದು: ಜೀ ನ್ಯೂಸ್ ವರದಿ ಪ್ರಕಾರ, ಮೆಟ್ಟಿಲು ಹತ್ತುವುದು ಕ್ಯಾಲೋರಿಗಳನ್ನು ಕರಗಿಸುವ ಅತ್ಯಂತ ಪರಿಣಾಮಕಾರಿಯಾದ ವ್ಯಾಯಾಮಗಳಲ್ಲಿ ಒಂದಾಗಿದೆ. ಇದು ಆರೋಗ್ಯವನ್ನು ಬಲಪಡಿಸುತ್ತದೆ ಎಂದು ಹೇಳಲಾಗುತ್ತದೆ. ಈ ವ್ಯಾಯಾಮದ ಸಮಯದಲ್ಲಿ ದೇಹದ ವಿವಿಧ ಸ್ನಾಯುಗಳು ಕೆಲಸ ಮಾಡುತ್ತವೆ. ವಿಶೇಷವಾಗಿ ಕಾಲು ಮತ್ತು ಬೆನ್ನಿನ ಪ್ರದೇಶ. ಪ್ರಸಿದ್ಧ ವಿಶ್ವವಿದ್ಯಾನಿಲಯವೊಂದು ಪ್ರಕಟಿಸಿದ ವೈದ್ಯಕೀಯ ವರದಿಯಲ್ಲಿ ಒಂದು ಮೆಟ್ಟಿಲು ಹತ್ತುವಾಗ 0.17 ರಷ್ಟು ಕ್ಯಾಲೋರಿಗಳು ಕಡಿಮೆಯಾಗುತ್ತವೆ ಎಂದು ಹೇಳಲಾಗಿದೆ.
ಸ್ಕಿಪ್ಪಿಂಗ್ ಮಕ್ಕಳಿಗೆ ಮಾತ್ರ ವ್ಯಾಯಾಮವಲ್ಲ. ವಯಸ್ಕರು ಇದನ್ನು ಬೆಳಗ್ಗೆ ಅಥವಾ ಸಂಜೆ ಮಾಡಬಹುದು. ನೀವು ಕಡಿಮೆ ಸಮಯದಲ್ಲಿ ಹೆಚ್ಚು ಕ್ಯಾಲೋರಿಗಳನ್ನು ಬರ್ನ್ ಮಾಡಲು ಬಯಸಿದರೆ ಸ್ಕಿಪ್ಪಿಂಗ್ ಬೆಸ್ಟ್ ಎಂದೇ ಹೇಳಬಹುದು. ಒಂದು ನಿಮಿಷದ ಆರ್ಮ್ ಜಂಪಿಂಗ್ ವ್ಯಾಯಾಮವು ಹತ್ತು ಪೌಂಡ್ಗಳ ತೂಕವನ್ನು ಕಡಿಮೆ ಮಾಡುತ್ತದೆ. ಹೀಗಾಗಿ ದಿನಕ್ಕೆ ಹತ್ತರಿಂದ 15 ನಿಮಿಷಗಳ ಕಾಲ ಸ್ಕಿಪ್ಪಿಂಗ್ ಆಡುವುದರಿಂದ ದೇಹವನ್ನು ಉತ್ತಮ ಸ್ಥಿತಿಯಲ್ಲಿಡಲು ಸಹಾಯ ಮಾಡುತ್ತದೆ ಎಂದು ವೈದ್ಯರು ಹೇಳುತ್ತಾರೆ.
ಪೈಲೇಟ್ಸ್ ವ್ಯಾಯಾಮ: ಪೈಲೇಟ್ಸ್ ವ್ಯಾಯಾಮವು ದೇಹವನ್ನು ಬಲಪಡಿಸಲು ಸಹಾಯ ಮಾಡುವ ವ್ಯಾಯಾಮಗಳಲ್ಲಿ ಒಂದಾಗಿದೆ. ಇದು ದೇಹವನ್ನು ಸಂಪರ್ಕದಲ್ಲಿರಿಸಲು ಮತ್ತು ಭಂಗಿಯನ್ನು ಬದಲಾಯಿಸಲು ಸಹಾಯ ಮಾಡುತ್ತದೆ. ಈ ಕುರಿತು ನಡೆಸಿದ ಕ್ಲಿನಿಕಲ್ ಅಧ್ಯಯನದಲ್ಲಿ ಹನ್ನೆರಡು ವಾರಗಳ ಕಾಲ ನಿರಂತರವಾಗಿ ಈ ವ್ಯಾಯಾಮವನ್ನು ಮಾಡುವವರು ತಮ್ಮ ಸ್ನಾಯುಗಳನ್ನು ಬಲಪಡಿಸುತ್ತಾರೆ ಮತ್ತು ಅವರ ದೇಹವು ಬಲಗೊಳ್ಳುತ್ತದೆ ಎನ್ನಲಾಗಿದೆ.
ಜಾಗಿಂಗ್: ಕಡಿಮೆ ಸಮಯದಲ್ಲಿ ಹೆಚ್ಚು ಕ್ಯಾಲೊರಿಗಳನ್ನು ಬರ್ನ್ ಮಾಡುವ ಮತ್ತು ಹೃದಯವನ್ನು ಆರೋಗ್ಯಕರವಾಗಿರಿಸುವ ವ್ಯಾಯಾಮಗಳಲ್ಲಿ ಜಾಗಿಂಗ್ ಕೂಡ ಒಂದಾಗಿದೆ. 30 ನಿಮಿಷಗಳ ಮಧ್ಯಮ ಜಾಗಿಂಗ್ ವ್ಯಾಯಾಮವು 298 ಕ್ಯಾಲೊರಿಗಳನ್ನು ಕಡಿಮೆ ಮಾಡುತ್ತದೆ
ಯೋಗ: ಯೋಗವು ಮನಸ್ಸನ್ನು ಮಾತ್ರವಲ್ಲದೇ ದೇಹವನ್ನು ಶಾಂತಗೊಳಿಸುವ ಅದ್ಭುತ ವ್ಯಾಯಾಮಗಳಲ್ಲಿ ಒಂದಾಗಿದೆ. ಹಾಗಾಗಿ ವಾರದಲ್ಲಿ ಎರಡರಿಂದ ಮೂರು ಬಾರಿ ಯೋಗ ಮಾಡಲು ಶಿಫಾರಸು ಮಾಡಲಾಗಿದೆ. (Disclaimer: ಈ ಲೇಖನವು ಅಂತರ್ಜಾಲದಲ್ಲಿ ಲಭ್ಯವಿರುವ ವರದಿಗಳು, ಮಾಹಿತಿಯನ್ನು ಆಧರಿಸಿದೆ. news18ಗೂ ಇದಕ್ಕೂ ಸಂಬಂಧವಿಲ್ಲ ಮತ್ತು ನ್ಯೂಸ್ 18 ಇದಕ್ಕೆ ಜವಾಬ್ದಾರಿಯಲ್