ಕಾಳುಮೆಣಸಿನಲ್ಲಿ ಹಲವು ಜೀವಸತ್ವಗಳು ಮತ್ತು ಖನಿಜಗಳಿವೆ. ಇದು ಹಲವಾರು ಆರೋಗ್ಯ ಸಂಬಂಧಿತ ತೊಂದರೆಗಳನ್ನು ಗುಣಪಡಿಸಲು ಸಹಾಯ ಮಾಡುತ್ತದೆ ಮತ್ತು ಜೀವ ರಾಸಾಯನಿಕ ಕ್ರಿಯೆಯನ್ನು ಹೆಚ್ಚಿಸುವ ಮೂಲಕ ತೂಕ ಇಳಿಸುವ ಪ್ರಕ್ರಿಯೆಯನ್ನು ವೇಗಗೊಳಿಸುತ್ತದೆ.
ಈ ಪುಟ್ಟ ಮಸಾಲೆ ವಿಟಮಿನ್ ಎ, ಕೆ, ಸಿ ಮತ್ತು ಕ್ಯಾಲ್ಸಿಯಂ, ಪೊಟ್ಯಾಸಿಯಮ್ ಮತ್ತು ಸೋಡಿಯಂನಂತಹ ಖನಿಜಗಳ ಪ್ರಯೋಜನಗಳಿಂದ ಸಮೃದ್ಧವಾಗಿದೆ. ಇದಲ್ಲದೆ, ಕಾಳುಮೆಣಸಿನಲ್ಲಿ ಆರೋಗ್ಯಕರ ಕೊಬ್ಬುಗಳು ಮತ್ತು ಕರಗುವ ನಾರಿನಂಶವನ್ನೂ ಹೊಂದಿದೆ.
ನಿಮ್ಮ ಆಹಾರದಲ್ಲಿ ಕಾಳು ಮೆಣಸನ್ನು ಸೇರಿಸುವ ಮೂಲಕ ಖಂಡಿತವಾಗಿಯೂ ಈ ಮಸಾಲೆಗಳ ಪ್ರಯೋಜನಗಳನ್ನು ಪಡೆಯಬಹುದಾದ ಸುಲಭವಾದ ಮಾರ್ಗವಾಗಿದೆ. ಆದರೆ ಇದು ಖಾರವಾಗಿರುವ ಕಾರಣ ಹೆಚ್ಚಿನ ಪ್ರಮಾನವನ್ನು ಸೇರಿಸಿದರೆ ಸೇವಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ. ರುಚಿಗಾಗಿ ಹಾಕುವ ಪ್ರಮಾಣದಿಂದ ನಿಮ್ಮ ಆಹಾರದಲ್ಲಿ ಈ ಮಸಾಲೆಯ ಪ್ರಮಾಣವು ಅಗತ್ಯಕ್ಕೂ ಅತಿಯೇ ಕಡಿಮೆ ಇರುತ್ತದೆ.
ಆದ್ದರಿಂದ, ನೀವು ಅದರ ಎಲ್ಲಾ ಪ್ರಯೋಜನಗಳನ್ನು ಪಡೆದುಕೊಳ್ಳಲು ಸಾಧ್ಯವಾಗುವುದಿಲ್ಲ. ತೂಕ ಇಳಿಸುವ ಪ್ರಕ್ರಿಯೆಯನ್ನು ವೇಗಗೊಳಿಸಲು, ಈ ಕಾಳುಮೆಣಸನ್ನು ಕುದಿಸಿ ಸೋಸಿದ ಚಹಾವನ್ನು ಪ್ರಯತ್ನಿಸಿ, ಅದರ ಅದ್ಭುತ ಆರೋಗ್ಯ ಪ್ರಯೋಜನಗಳನ್ನು ಈಗಾಗಲೇ ಇದರ ಪ್ರಯೋಜನ ಪಡೆದಿರುವವರು ತಮ್ಮ ಅನುಭವದ ಭರವಸೆ ನೀಡುತ್ತಾರೆ.
ಅಗತ್ಯವಿರುವ ಪದಾರ್ಥಗಳು:
- 1/4 ಟೀಸ್ಪೂನ್ ಕಾಳು ಮೆಣಸು
- 1-ಇಂಚಿನ ಹಸಿ ಶುಂಠಿಯ ಗಡ್ಡೆ
- 1 ಚಿಕ್ಕ ಚಮಚ ಜೇನುತುಪ್ಪ
- 1 ಚಿಕ್ಕ ಚಮಚ ನಿಂಬೆ
- 1 ಕಪ್ ನೀರು
ತಯಾರಿಸುವ ವಿಧಾನ:
ಮೊದಲು ಒಂದು ಚಿಕ್ಕ ಪಾತ್ರೆಯಲ್ಲಿ ನೀರು ಹಾಕಿ ಕಾಳು ಮೆಣಸು, ತುರಿದ ಶುಂಠಿ ಬೆರೆಸಿ ಕುದಿಸಿ. ಕುದಿಯಲು ಪ್ರಾರಂಭವಾದ ಬಳಿಕ ಉರಿಯನ್ನು ಚಿಕ್ಕದಾಗಿಸಿ ಮುಂದಿನ ಐದು ನಿಮಿಷದವರೆಗೆ ಕುದಿಸುವುದನ್ನು ಮುಂದುವರೆಸಿ. ಬಳಿಕ ಉರಿ ಆರಿಸಿ ಈ ನೀರನ್ನು ಸೋಸಿ ಲೋಟದಲ್ಲಿ ಸಂಗ್ರಹಿಸಿ. ನೀವು ಕುಡಿಯಲು ಸಾಧ್ಯವಾಗುವಷ್ಟು ತಣಿಯಲು ಬಿಡಿ. ಬಳಿಕ ಲಿಂಬೆರಸ ಮತ್ತು ಜೇನನ್ನು ಬೆರೆಸಿ. ಎಂದಿಗೂ ಕುದಿಯುವ ನೀರಿಗೆ ಜೇನನ್ನು ಬೆರೆಸಬಾರದು. ಹಾಲು ಬೆರೆಸುವ ಅಗತ್ಯವಿಲ್ಲ. ಈ ಟೀ ರುಚಿಕರವೂ ಹೌದು ತೂಕ ಇಳಿಕೆಗೆ ನೆರವಾಗುವ ಅದ್ಭುತ ಪೇಯವೂ ಹೌದು.
ಕಾಳು ಮೆಣಸಿನ ಚಹಾದಲ್ಲೂ ಹಲವು ಪ್ರಯೋಜನ
- ಕಾಳು ಮೆಣಸಿನ ಚಹಾ ಮಾಡಿ ಕುಡಿಯುವುದರಿಂದ ಆರೋಗ್ಯದ ಮೇಲೆ ಹಲವು ಸಕಾರಾತ್ಮಕ ಪರಿಣಾಮ ಬೀರಲಿದೆ. ಅದರಲ್ಲೂ ತೂಕ ಇಳಿಸಲು ನೆರವಾಗುತ್ತದೆ.ಷ್ಟು ಮಾತ್ರವಲ್ಲದೆ, ಜೀರ್ಣಕ್ರಿಯೆ ಕೂಡ ಉತ್ತಮವಾಗುತ್ತದೆ.
- ಕಾಳು ಮೆಣಸಿಗೆ ಭಾರೀ ಬೇಡಿಕೆ ಇದೆ ಮಲೆನಾಡು, ಕರಾವಳಿ ಭಾಗದಲ್ಲಿ ಹೆಚ್ಚಿನ ರೈತರು ಕಾಳು ಮೆಣಸನ್ನು ಬೆಳಸುತ್ತಾರೆ. ಹಾಗಾಗಿ ಶೀತ, ಕಫವಾದರೆ ಕಾಳು ಮೆಣಸಿಗೆ ಸ್ಪಲ್ಪ ಜೇನು ತುಪ್ಪ ಸೇರಿಸಿ ಸೇವಿಸುದರ ಮೂಲಕ ಇಂತಹ ಸಮಸ್ಯೆಗೆ ಫುಲ್ಸ್ಟಾಪ್ ನೀಡಬಹುದಾಗಿದೆ.
- ಮತ್ತೊಂದು ವಿಚಾರವೆಂದರೆ ಕಾಳು ಮೆಣಸಿನ ಚಹಾ ಕ್ಯಾನ್ಸರ್ ರೋಗವನ್ನು ತಡೆಗಟ್ಟುತ್ತದೆ. ಮಾತ್ರವಲ್ಲದೆ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಗುಣ ಇದರಲ್ಲಿದೆ.ಕಾಳು ಮೆಣಸಿನ ಚಹಾ ಕುಡಿಯುವುದರಿಂದ ಉರಿಯೂತ ನಿವಾರಿಸಬಹುದಾಗಿದೆ.
- ಅಷ್ಟೇ ಏಕೆ ಅಲರ್ಜಿ ಮತ್ತು ಅಸ್ತಮಾ ದೂರವಾಗುತ್ತದೆ.ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಳು ಮೆಣಸು ನಿಯಂತ್ರಿಸುತ್ತಂತೆ. ಹಾಗಾಗಿ ಇದನ್ನು ಚಹಾ ಮಾಡಿ ಕುಡಿಯುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನ ಸಿಗಲಿದೆ.