ಬೆಂಗಳೂರು:- ನಗರದ ಎಲೆಕ್ಟ್ರಾನಿಕ್ ಸಿಟಿ ಸಮೀಪದ ದೊಡ್ಡತೋಗೂರು ಬಳಿ ಸಿನಿಮಾ ಸ್ಟೈಲ್ನಲ್ಲಿ ಬಾಲಕನನ್ನ ಕಿಡ್ನಾಪ್ ಮಾಡಿದ ಘಟನೆ ಜರುಗಿದೆ.
ಇಳಿಕೆ ಆಯ್ತು ಮತ್ತೆ ಚಿನ್ನದ ಬೆಲೆ…ಬೆಳ್ಳಿ ತುಸು ಏರಿಕೆ; ಇಲ್ಲಿದೆ ಇವತ್ತಿನ ದರಪಟ್ಟಿ..!
ಮಾರ್ವಾಡಿ ದಂಪತಿಯ 9 ವರ್ಷದ ಬಾಲಕನನ್ನ ಮೊಹಮದ್ ಜಶಿಮುದ್ದೀನ್ ಶೇಕ್(24) ಎಂಬಾತ ಕಿಡ್ನಾಪ್ ಮಾಡಿದ್ದ. ಮನೆ ಬಳಿಯಿದ್ದ ಬಾಲಕನಿಗೆ ಕೇಕ್ ಕೊಡಿಸುವುದಾಗಿ ಆಸೆ ತೋರಿಸಿ ಕಿಡ್ನಾಪ್ ಮಾಡಿ 14 ಕಿ.ಮೀ ಸುತ್ತಾಡಿದ್ದಾನೆ. ಪೊಲೀಸರ ದಾರಿ ತಪ್ಪಿಸಲು ವೀರಸಂದ್ರ, ಹುಸ್ಕೂರು ಸುತ್ತಮುತ್ತ ಬಾಲಕನ ಜೊತೆ ಆಟೋದಲ್ಲಿ ಓಡಾಟ ನಡೆಸಿದ್ದಾನೆ. ಈ ಮೂಲಕ ಪದೇ ಪದೇ ಲೋಕೇಶನ್ ಬದಲಿಸುತ್ತಿದ್ದ. ಬಳಿಕ ಪೋಷಕರಿಗೆ ಕರೆ ಮಾಡಿ ಹತ್ತು ಲಕ್ಷಕ್ಕೆ ಬೇಡಿಕೆಯಿಟ್ಟಿದ್ದಾನೆ. ಕೊನೆಗೆ ನಿನ್ನೆ(ಜೂ.18) ಮಧ್ಯಾಹ್ನ ಬಾಲಕ ಸಹಿತ ಆರೋಪಿಯನ್ನ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಅರೆಸ್ಟ್ ಮಾಡಿದ್ದು, ಬಾಲಕನ ಕಿಡ್ನಾಪ್ ಪ್ರಕರಣ ಸುಖಾಂತ್ಯಗೊಂಡಿದೆ ಎನ್ನಲಾಗಿದೆ.