ಮೊದಲಿನಿಂದಲೂ ಯೋಗ ಮಾಡುತ್ತಿದ್ದವರು ಗರ್ಭಾವಸ್ಥೆಯಲ್ಲಿಯೂ ಯೋಗ ಮಾಡುತ್ತಾರೆ. ಇನ್ನು ಕೆಲವರು ಗರ್ಭಾವಸ್ಥೆಯಲ್ಲಿ ಯೋಗ ಮಾಡಲು ಆರಂಭಿಸುತ್ತಾರೆ. ಆದರೆ ಸರಿಯಾದ ಮಾರ್ಗದರ್ಶನ ತೆಗೆದುಕೊಳ್ಳದೆಯೇ ಸಮಸ್ಯೆಗಳನ್ನು ಎದುರಿಸುತ್ತಾರೆ. ಹಾಗಾದರೆ ಗರ್ಭಾಸ್ಥೆಯಲ್ಲಿ ಯೋಗ ಮಾಡಬಹುದೇ? ಮಾಡುವುದರಿಂದ ಸಿಗುವ ಪ್ರಯೋಜನಗಳೇನು? ತಿಳಿದುಕೊಳ್ಳಿ.
ಮೊದಲ ಮೂರು ತಿಂಗಳು ಯೋಗ ಮಾಡುವುದು ಒಳ್ಳೆಯದಲ್ಲ. ಇದರಿಂದ ಕೆಲವರಿಗೆ ಗರ್ಭಪಾತವಾಗುವ ಸಾಧ್ಯತೆಯಿರುತ್ತದೆ. ಯೋಗ ಅಥವಾ ಇತರ ಯಾವುದೇ ವ್ಯಾಯಾಮ ಮಾಡುವುದರಿಂದ ಭ್ರೂಣಕ್ಕೆ ಹಾನಿಯಾಗುತ್ತದೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ. ಆದರೆ ಮುನ್ನೆಚ್ಚರಿಕೆ ತೆಗೆದುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಅಲ್ಲದೆ, ಈ ಯೋಗಗಳನ್ನು ಸ್ವತಃ ನೀವೇ ಮಾಡುವ ಮೊದಲು ಯೋಗ ಪರಿಣಿತರನ್ನು ಸಂಪರ್ಕಿಸಿ ಸಲಹೆ ತೆಗೆದುಕೊಳ್ಳುವುದು ಅಥವಾ ಯೋಗ ತರಬೇತಿ ಪಡೆಯುವುದು ಒಳ್ಳೆಯದು.
ಯಾವ ಆಸನಗಳು ಉತ್ತಮ?
ಅಧ್ಯಯನದ ಪ್ರಕಾರ, ಗರ್ಭಿಣಿಯರು ಪಶ್ಚಿಮೋತ್ತಾಸನ, ಸುಖಾಸನ, ವೀರಭದ್ರಾಸನ, ಉತ್ತಾನಾಸನ, ಊರ್ಧ್ವ ಉತ್ತಾನಾಸನ, ಮಾರ್ಜರಿಯಾಸನ, ವಿರಾಸನ ಮತ್ತು ಉಷ್ಟ್ರಾಸನ ಇತ್ಯಾದಿಗಳನ್ನು ಮಾಡಬಹುದು.
ಪ್ರಯೋಜನಗಳೇನು?
ಪ್ರಸವಪೂರ್ವ ಯೋಗವು ಗರ್ಭದಲ್ಲಿರುವ ಶಿಶು ಆರೋಗ್ಯಕರವಾಗಿ ಬೆಳೆಯಲು ಅನುಕೂಲ ಮಾಡಿಕೊಡುತ್ತದೆ. ನಿಮ್ಮ ನಿದ್ರೆಯನ್ನು ಸುಧಾರಿಸುತ್ತದೆ. ಒತ್ತಡ ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ. ಜೊತೆಗೆ ಹೆರಿಗೆಗೆ ಅಗತ್ಯವಾದ ಸ್ನಾಯುಗಳ ಶಕ್ತಿಯನ್ನು ಹೆಚ್ಚಿಸುತ್ತದೆ. ಬೆನ್ನು ನೋವು, ವಾಕರಿಕೆ, ತಲೆನೋವು ಮತ್ತು ಉಸಿರಾಟದ ತೊಂದರೆಗಳಿದ್ದರೆ ಅದನ್ನು ಕಡಿಮೆ ಮಾಡುತ್ತದೆ.
ಯೋಗ ಮಾಡುವ ಭರದಲ್ಲಿ ದೇಹಕ್ಕೆ ಒತ್ತಡ ಹಾಕಬೇಡಿ. ಯೋಗವನ್ನು ತರಾತುರಿಯಲ್ಲಿ ಮಾಡಬೇಡಿ. ನಿಧಾನವಾಗಿ, ನಿಮಗೆ ಸಾಧ್ಯವಾದಷ್ಟೇ ಮಾಡಿ