ಬೆಂಗಳೂರು:- ಒತ್ತಡದ ಜೀವನದಲ್ಲಿ ಸ್ವಲ್ಪ ವಿಶ್ರಾಂತಿ ಪಡೆಯಲು ಮನಸ್ಸು ಹಂಬಲಿಸುವುದು ಸಹಜ ಕೂಡ ಆಗಿರುತ್ತದೆ. ನಗರ ಜೀವನದಿಂದ ಸ್ವಲ್ಪ ದೂರ ಹೋಗಿ ಎರಡು ದಿನಗಳನ್ನು ಆರಾಮಾಗಿ ಕಳೆದು ಬರೋಣ ಎಂದರೆ ಬೆಂಗಳೂರಿನಿಂದ ತುಂಬಾನೇ ಒಳ್ಳೆಯ ರಸ್ತೆ ಪ್ರವಾಸಗಳಿವೆ. ಕಾರಿನಲ್ಲಿ 5-6 ಗಂಟೆಗಳ ಕಾಲ ಪ್ರಯಾಣಿಸಿದರೆ ಸಾಕು ಒಳ್ಳೆಯ ಪ್ರವಾಸಿ ಸ್ಥಳಗಳಿವೆ ಮತ್ತು ಅದಕ್ಕೆ ಹೋಗುವ ರಸ್ತೆ ಸಹ ತುಂಬಾನೇ ಸುಂದರವಾಗಿದೆ ಮತ್ತು ಮನಸ್ಸಿಗೆ ಮುದ ನೀಡುವಂತದ್ದು ಆಗಿರುತ್ತದೆ.
ಕುಲಷಿತ ನೀರು ಸೇವನೆ.. ನಾವದಗಿ ಗ್ರಾಮದ ಜನರಲ್ಲಿ ವಾಂತಿ ಬೇಧಿ ಸಮಸ್ಯೆ..!
ನೀವು ಸಹ ಬೆಂಗಳೂರು ನಗರದಲ್ಲಿದ್ದು, ವೀಕೆಂಡ್ ನಗರದ ಬ್ಯುಸಿ ರಸ್ತೆಗಳಿಂದ ಸ್ವಲ್ಪ ವಿಶ್ರಾಂತಿ ಪಡೆಯಲು ನೀವು ಬಯಸಿದರೆ, ಇಲ್ಲಿವೆ ನೋಡಿ 6 ಅತ್ತ್ಯುತ್ತಮವಾದ ರಸ್ತೆ ಪ್ರವಾಸಗಳು.
ಪ್ರವಾಸಿಗರಿಗೆ ತುಂಬಾನೇ ಅಚ್ಚುಮೆಚ್ಚಿನ ತಾಣ ನಂದಿ ಹಿಲ್ಸ್. ಕಾರು ಅಥವಾ ಬೈಕ್ ಡ್ರೈವ್ ಮಾಡಿಕೊಂಡು ಹೋಗುವುದು ನಗರದ ಬ್ಯುಸಿ ಜೀವನದಿಂದ ಸ್ವಲ್ಪ ಉಲ್ಲಾಸಕರ ವಿರಾಮವನ್ನು ನೀಡುತ್ತದೆ. ಭವ್ಯವಾದ ಸೂರ್ಯೋದಯ ದೃಶ್ಯಗಳಿಗೆ ಹೆಸರುವಾಸಿಯಾದ ಈ ಗಿರಿಧಾಮವು ಮುಂಜಾನೆಯ ಭೇಟಿಗೆ ಸೂಕ್ತವಾಗಿದೆ. ಬೆಟ್ಟಗಳತ್ತ ಸಾಗುವ ಅಂಕು ಡೊಂಕಾದ ರಸ್ತೆಗಳು ಅತ್ಯಾಕರ್ಷಕ ಚಾಲನೆಯನ್ನು ನೀಡುತ್ತವೆ ಮತ್ತು ಒಮ್ಮೆ ಇದರ ಮೇಲೆ ಹತ್ತಿದಾಗ ಮೇಲ್ಭಾಗದಲ್ಲಿ ಕಾಣ ಸಿಗುವ ಪ್ರಕೃತಿಯ ವಿಹಂಗಮ ನೋಟಗಳು ನಿಜವಾಗಿಯೂ ವಿಸ್ಮಯಕಾರಿಯಾಗಿವೆ.
ಸ್ಕಂದಗಿರಿ – 70 ಕಿಲೋ ಮೀಟರ್:- ಬೆಂಗಳೂರಿನಿಂದ ಕೇವಲ 70 ಕಿಲೋ ಮೀಟರ್ ದೂರದಲ್ಲಿರುವ ಸ್ಕಂದಗಿರಿಯನ್ನು ಕಾಳವರ ದುರ್ಗ ಎಂದೂ ಕರೆಯುತ್ತಾರೆ, ಇದು ಚಾರಣ ಉತ್ಸಾಹಿಗಳಿಗೆ ಅತ್ಯುತ್ತಮ ತಾಣವಾಗಿದೆ. ಈ ಚಾರಣವು ಸಾಧಾರಣವಾಗಿಯೇ ಸವಾಲಿನದ್ದಾಗಿದೆ
ಲೇಪಾಕ್ಷಿ – 150 ಕಿಲೋ ಮೀಟರ್
ಸಂಸ್ಕೃತಿ, ಇತಿಹಾಸ ಮತ್ತು ಆಧ್ಯಾತ್ಮಿಕತೆ ಈ ಮೂರೂ ವಿಷಯಗಳನ್ನು ಒಂದೇ ಕಡೆ ನೋಡಲು ನೀವು ಬಯಸಿದರೆ, ಬೆಂಗಳೂರಿನಿಂದ 150 ಕಿಲೋ ಮೀಟರ್ ದೂರದಲ್ಲಿರುವ ಲೇಪಾಕ್ಷಿಗೆ ರಸ್ತೆ ಪ್ರವಾಸ ಹೋಗುವುದು ಒಳ್ಳೆಯದು.
ಮಡಿಕೇರಿ – 254 ಕಿಲೋ ಮೀಟರ್
‘ಭಾರತದ ಸ್ಕಾಟ್ಲ್ಯಾಂಡ್’ ಅಂತಾನೆ ಖ್ಯಾತಿ ಪಡೆದಿರುವ ಕೂರ್ಗ್ ಬೆಂಗಳೂರಿನಿಂದ 254 ಕಿಲೋ ಮೀಟರ್ ದೂರದಲ್ಲಿದೆ ಮತ್ತು ಕಾಫಿ ತೋಟಗಳು, ಅಲ್ಲಿನ ಹಸಿರು ಬೆಟ್ಟಗಳು ಮತ್ತು ರೋಮಾಂಚಕ ಸಂಸ್ಕೃತಿಗೆ ಹೆಸರುವಾಸಿಯಾಗಿದೆ. ಅಂಕು ಡೊಂಕಾದ ರಸ್ತೆಗಳು ಮತ್ತು ವಿಹಂಗಮ ನೋಟಗಳೊಂದಿಗೆ ಕೂರ್ಗ್ಗೆ ಚಾಲನೆಯು ಸಂತೋಷಕರ ಅನುಭವವಾಗಿದೆ.
ಊಟಿ – 271 ಕಿಲೋ ಮೀಟರ್
ಬೆಂಗಳೂರಿನಿಂದ 271 ಕಿಲೋ ಮೀಟರ್ ದೂರದಲ್ಲಿರುವ ಊಟಿ ಒಂದು ಒಳ್ಳೆಯ ಪ್ರವಾಸಿ ತಾಣವಾಗಿದೆ. ಸಾಮಾನ್ಯವಾಗಿ ‘ಕ್ವೀನ್ ಆಫ್ ಹಿಲ್ ಸ್ಟೇಷನ್ಸ್’ ಎಂದು ಕರೆಯಲ್ಪಡುವ ಊಟಿಯು ತಮಿಳುನಾಡಿನ ನೀಲಗಿರಿ ಬೆಟ್ಟಗಳಲ್ಲಿದೆ.