ಬೆಂಗಳೂರು: ಲೋಕಸಭೆ ಚುನಾವಣೆ ಮುಗಿಯಿತು.. ಅದರ ಫಲಿತಾಂಶ ಕೂಡ ಹೊರ ಬಂತು. ಇದರ ಬೆನ್ನಲ್ಲೇ ರಾಜ್ಯ ಸರ್ಕಾರ ವಾಹನ ಸವಾರರ ಜೇಬಿಗೆ ಕತ್ತರಿ ಪ್ರಯೋಗಕ್ಕೆ ಮುಂದಾಗಿದೆ…ಲೋಕ ಚುನಾವಣೆ ಫಲಿತಾಂಶ ಪ್ರಕಟಗೊಂಡು ಕೆಲವೇ ದಿನಗಳಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ ಕರ್ನಾಟಕದ ಜನರಿಗೆ ಬಿಗ್ ಶಾಕ್ ನೀಡಿದೆ. ಬಹು ದಿನಗಳ ಬಳಿಕ ರಾಜ್ಯದಲ್ಲಿ ಪೆಟ್ರೋಲ್, ಡೀಸೆಲ್ ದುಬಾರಿಯಾಗುತ್ತಿದೆ.
ಒಂದೆಡೆ ಸೋಲಿನ ಹತಾಶೆ ಇದ್ದರೆ, ಇನ್ನೊಂದೆಡೆ ರಾಜ್ಯದ ಹಣಕಾಸು ಪರಿಸ್ಥಿತಿ ಸಂಪೂರ್ಣ ಹದಗೆಟ್ಟಿದೆ. ಭಂಡ ಸರಕಾರ ಮತ್ತು ಮುಖ್ಯಮಂತ್ರಿಗಳು ಇದನ್ನು ಒಪ್ಪಿಕೊಳ್ಳುವುದಿಲ್ಲ. ಆರ್ಥಿಕ ಪರಿಸ್ಥಿತಿ ಸದೃಢವಾಗಿದೆ ಎಂದು ಒಂದೆಡೆ ಹೇಳುತ್ತಾರೆ. ಇನ್ನೊಂದೆಡೆ ಪೆಟ್ರೋಲ್, ಡೀಸೆಲ್ ದರ ಏರಿಸಿದ್ದು, ಇದು ಹಣಕಾಸಿನ ಪರಿಸ್ಥಿತಿ ಹದಗೆಟ್ಟದ್ದನ್ನು ತಿಳಿಸುತ್ತದೆ. ರಾಜ್ಯ ಸರಕಾರವು ಅಧಿಕಾರಿಗಳು, ಸಿಬ್ಬಂದಿಗೆ ಸಂಬಳ ಕೊಡಲಾಗದ ಕೆಟ್ಟ ಸ್ಥಿತಿಯಲ್ಲಿದ್ದು ಪರಿಣಾಮವಾಗಿ ಪೆಟ್ರೋಲ್, ಡೀಸೆಲ್ ದರ ಏರಿಸಿದ್ದಾರೆ.. ಡಿಸೇಲ್ ಹಾಗೂ ಪೆಟ್ರೋಲ್ ಬೆಲೆಯಲ್ಲಿ ಏರಿಕೆಯಾದರೆ ದಿನ ಬಳಕೆಯ ಎಲ್ಲಾ ವಸ್ತುಗಳ ಮೇಲೆ ಕ್ರಮೇಣ ಇದರ ಪರಿಣಾಮ ಬೀರುತ್ತದೆ.
ನಿಮಗೆ ಮೃದುವಾದ ಚಪಾತಿ ಬೇಕೇ? ಈ ಟಿಪ್ಸ್ ಫಾಲೋ ಮಾಡಿ – ಬೆಣ್ಣೆಯಂತ ಚಪಾತಿ ರೆಡಿ.!
ಸರಕುಗಳ ಸಾಗಣೆಗೆ ಪೆಟ್ರೋಲ್ ಡಿಸೇಲ್ ಅಗತ್ಯ ವಾಗಿರುವು ದರಿಂದ ಎಲ್ಲಾ ವಸ್ತುಗಳ ಬೆಲೆ ಗಗನಕ್ಕೇರುತ್ತದೆ. ಹೀಗಾಗಿ ಪ್ರತಿದಿನ ಎಲ್ಲರೂ ಪೆಟ್ರೋಲ್ ಡಿಸೇಲ್ ದರದ ಮೇಲೆ ಒಂದು ಕಣ್ಣಿಟ್ಟಿರುತ್ತಾರೆ. ದೇಶದ ಪ್ರಮುಖ ನಗರಗಳಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಗೆ ಕೆಲ ತಿಂಗಳಿಂದ ಬ್ರೇಕ್ ಬಿದ್ದಿದೆ. ಆದರೂ, ಹಲವು ನಗರಗಳಲ್ಲಿ ಬೆಲೆಯಲ್ಲಿ ಏರಿಕೆ, ಇಳಿಕೆ ಕಂಡು ಬರುತ್ತಿದೆ. ಇನ್ನು, ಕಚ್ಚಾ ತೈಲ ದರ ಏರುತ್ತಿರುವುದನ್ನು ಗಮನಿಸಿದರೆ ಮತ್ತೆ ದೇಶದ ಎಲ್ಲ ಕಡೆ ಇಂಧನ ದರ ಮತ್ತಷ್ಟು ದುಬಾರಿಯಾಗುತ್ತದಾ ಎಂಬ ಆತಂಕವೂ ಮೂಡುತ್ತದೆ.
ರಾಜ್ಯದ ವಿವಿಧ ಜಿಲ್ಲೆಗಳಲ್ಲಿನ ಪೆಟ್ರೋಲ್-ಡೀಸೆಲ್ ಬೆಲೆ ವಿವರ ಇಲ್ಲಿದೆ ನೋಡಿ.
ಕರ್ನಾಟಕದ ಜಿಲ್ಲೆಗಳಲ್ಲಿ ಇಂದಿನ ಪೆಟ್ರೋಲ್ ದರಗಳು:
ಬಾಗಲಕೋಟೆ – ರೂ. 103.44
ಬೆಂಗಳೂರು – ರೂ. 102.86
ಬೆಂಗಳೂರು ಗ್ರಾಮಾಂತರ – ರೂ. 102.94
ಬೆಳಗಾವಿ – ರೂ. 102.90
ಬಳ್ಳಾರಿ – ರೂ. 104.89
ಬೀದರ್ – ರೂ. 103.47
ವಿಜಯಪುರ – ರೂ. 103.05
ಚಾಮರಾಜನಗರ – ರೂ. 103.00
ಚಿಕ್ಕಬಳ್ಳಾಪುರ – ರೂ. 102.86
ಚಿಕ್ಕಮಗಳೂರು – ರೂ.104.51
ಚಿತ್ರದುರ್ಗ – ರೂ. 104.22
ದಕ್ಷಿಣ ಕನ್ನಡ – ರೂ. 102.24
ದಾವಣಗೆರೆ – ರೂ. 104.82
ಧಾರವಾಡ – ರೂ. 102.63
ಗದಗ – ರೂ. 103.19
ಕಲಬುರಗಿ – ರೂ. 102.93
ಹಾಸನ – ರೂ. 102.82
ಹಾವೇರಿ – ರೂ. 103.35
ಕೊಡಗು – ರೂ. 104.12
ಕೋಲಾರ – ರೂ 103.10
ಕೊಪ್ಪಳ – ರೂ. 104.09
ಮಂಡ್ಯ – ರೂ. 102.70
ಮೈಸೂರು – ರೂ. 102.41
ರಾಯಚೂರು – ರೂ. 103.23
ರಾಮನಗರ – ರೂ. 103.34
ಶಿವಮೊಗ್ಗ – ರೂ. 104.25
ತುಮಕೂರು – ರೂ. 102.99
ಉಡುಪಿ – ರೂ. 102.37
ಉತ್ತರ ಕನ್ನಡ – ರೂ. 103.75
ಯಾದಗಿರಿ – ರೂ. 103.37
ಕರ್ನಾಟಕದ ಜಿಲ್ಲೆಗಳಲ್ಲಿ ಡಿಸೇಲ್ ದರ
ಬಾಗಲಕೋಟೆ – 89.49
ಬೆಂಗಳೂರು – 88.94
ಬೆಂಗಳೂರು ಗ್ರಾಮಾಂತರ -89.01
ಬೆಳಗಾವಿ – 89.00
ಬಳ್ಳಾರಿ – 90.80
ಬೀದರ್ – 89.51
ವಿಜಯಪುರ – 89.13
ಚಾಮರಾಜನಗರ – 89.07
ಚಿಕ್ಕಬಳ್ಳಾಪುರ – 88.94
ಚಿಕ್ಕಮಗಳೂರು – 90.34
ಚಿತ್ರದುರ್ಗ – 90.07
ದಕ್ಷಿಣ ಕನ್ನಡ – 88.35
ದಾವಣಗೆರೆ – 90.61
ಧಾರವಾಡ -88.76
ಗದಗ – 89.26
ಕಲಬುರಗಿ – 89.03
ಹಾಸನ – 88.81
ಹಾವೇರಿ – 89.41
ಕೊಡಗು – 89.94
ಕೋಲಾರ -89.16
ಕೊಪ್ಪಳ – 90.08
ಮಂಡ್ಯ – 88.80
ಮೈಸೂರು – 88.53
ರಾಯಚೂರು – 89.31
ರಾಮನಗರ – 89.38
ಶಿವಮೊಗ್ಗ – 90.14
ತುಮಕೂರು – 88.96
ಉಡುಪಿ – 88.46
ಉತ್ತರ ಕನ್ನಡ – 89.71
ಯಾದಗಿರಿ- 89.43
ಇನ್ನು ಆದಾಯ ಕಡಿಮೆ ಆಗ್ತಿದೆ. ಅಭಿವೃದ್ಧಿ, ಗ್ಯಾರಂಟಿ ಯೋಜನೆಗೆ ಹಣ ಬೇಕಲ್ಲವೇ ಅದಕ್ಕಾಗಿ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಲಾಗಿದೆ ಎಂದು ಸಚಿವ ಎಂ.ಬಿ. ಪಾಟೀಲ್ ಬೆಲೆ ಏರಿಕೆಯನ್ನು ಸಮರ್ಥಿಸಿಕೊಂಡಿದ್ದಾರೆ. ಇನ್ನು ಇದಕ್ಕೆ ಪ್ರತಿಕ್ರಿಯೆ ನೀಡಿದ ಸಿಎಂ, ಬೇರೆ ರಾಜ್ಯಗಳನ್ನು ಹೋಲಿಕೆ ಮಾಡಿದರೆ ನಮ್ಮ ರಾಜ್ಯದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿಮೆ ಇದೆ.
ತಮಿಳುನಾಡು ಸೇರಿದಂತೆ ಇತರೆ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆಯಿದೆ ಯಾರ ಮೇಲೂ ಅನಾವಶ್ಯಕವಾಗಿ ಹೊರೆ ಹಾಕುತ್ತಿಲ್ಲ ಎಂದರು. ಮೋದಿಯವರು ಬಂದ ಮೇಲೆ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಾಗಿದೆ ಅದನ್ನ ಯಾಕೆ ನೀವು ಕೇಳೋದಿಲ್ಲ. ಕೇಂದ್ರದಲ್ಲಿ ನಮ್ಮ ಸರ್ಕಾರ ಇದ್ದಾಗ 60 ರೂಪಾಯಿ ಪೆಟ್ರೋಲ್ ಇತ್ತು ಈಗ 105 ರೂಪಾಯಿ.
ಉಳಿದ ರಾಜ್ಯಗಳನ್ನು ಹೋಲಿಕೆ ಮಾಡಿ ನೋಡಿ ನಮ್ಮ ರಾಜ್ಯದಲ್ಲಿ ಕಡಿಮೆ ಇದೆ ಎಂದರು. ಒಟ್ಟಾರೆ,ಸರ್ಕಾರ ರಚನೆಯಾಗುತ್ತಿದ್ದಂತೆ ಸ್ಟಾಂಪ್ ಡ್ಯೂಟಿ, ಅಬಕಾರಿ ಶುಲ್ಕ ಹೆಚ್ಚಿಸಲಾಗಿತ್ತು. ಹಿಂದಿನ ಸರ್ಕಾರ ಹೆಚ್ಚಿಸಿದ್ದ ವಿದ್ಯುತ್ ದರದ ಲಾಭವೂ ಕಾಂಗ್ರೆಸ್ ಸರ್ಕಾರಕ್ಕೆ ದೊರೆತ್ತಿತ್ತು. ಈಗ ನೇರವಾಗಿ ಪೆಟ್ರೋಲ್, ಡೀಸೆಲ್ ಮೇಲೆಯೇ ಶುಲ್ಕ ಹೆಚ್ಚಿಸಿರುವುದರಿಂದ ಮತ್ತಷ್ಟು ಆದಾಯ ನಿರೀಕ್ಷಿಸಲಾಗುತ್ತಿದೆ.