ವೆಸ್ಟ್ ಇಂಡೀಸ್: ಇದು ನನ್ನ ಕೊನೆಯ ಟಿ20 ವಿಶ್ವಕಪ್ ಆಗಿದೆ. ಇನ್ನು ಮುಂದೆ ಟೂರ್ನಿಯಲ್ಲಿ ಭಾಗವಹಿಸುವುದಿಲ್ಲ ಎಂದು ಅನುಭವಿ ವೇಗಿ ಟ್ರೆಂಟ್ ಬೌಲ್ಟ್ ಹೇಳಿದ್ದಾರೆ. ಉಗಾಂಡ ವಿರುದ್ಧ 9 ವಿಕೆಟ್ ಭರ್ಜರಿ ಗೆಲುವಿನ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,
ಟೂರ್ನಿಯಲ್ಲಿ ತಂಡದ ಪ್ರದರ್ಶನ ಉತ್ತಮವಾಗಿಲ್ಲ. ಸೂಪರ್ 8 ಹಂತಕ್ಕೂ ತಲುಪಲು ಸಾಧ್ಯವಾಗದೇ ಇರುವುದು ನೋವಿನ ಸಂಗತಿ. ಆದರೆ, ದೇಶಕ್ಕಾಗಿ ಆಡುವುದು ಹೆಮ್ಮೆಯ ಸಂಗತಿಯಾಗಿದೆ. ವಿಶ್ವಕಪ್ ಟೂರ್ನಿಯಲ್ಲಿ ತಂಡ ಉತ್ತಮ ದಾಖಲೆ ಹೊಂದಿದೆ. ಈ ಸಲ ಅದೃಷ್ಟ ಕೈಕೊಟ್ಟಿದೆ ಎಂದು ಬೌಲ್ಟ್ ಹೇಳಿದರು.
ನಿಮಗೆ ಮೃದುವಾದ ಚಪಾತಿ ಬೇಕೇ? ಈ ಟಿಪ್ಸ್ ಫಾಲೋ ಮಾಡಿ – ಬೆಣ್ಣೆಯಂತ ಚಪಾತಿ ರೆಡಿ.!
ತಂಡದಲ್ಲಿ ಅದ್ಭುತ ಪ್ರತಿಭೆಗಳಿದ್ದರೂ, ಉತ್ತಮ ಪ್ರದರ್ಶನ ಬರದೇ ಇರುವುದು ದುರದೃಷ್ಟಕರ. ಶ್ರೇಯಾಂಕ ಪಟ್ಟಿಯಲ್ಲಿ ಮೇಲಿದ್ದರೂ ತಂಡ ಎಡವಿದೆ. ಆದರೆ, ದೇಶಕ್ಕಾಗಿ ಆಡುವುದುನ್ನು ಮುಂದುವರಿಸುತ್ತೇವೆ. ತಂಡ ಮುಂದೆ ಉತ್ತಮ ಪ್ರದರ್ಶನ ನೀಡಲಿದೆ ಎಂದು ಭಾವಿಸುವೆ ಎಂದು ಹಿರಿಯ ವೇಗಿ ಅಭಿಪ್ರಾಯಪಟ್ಟಿದ್ದಾರೆ.