ಮೈಸೂರು:- ನಮ್ಮ ದಸರಾ ಆನೆಗಳನ್ನು ಆಂಧ್ರಕ್ಕೆ ಕಳಿಸಿಕೊಡಲ್ಲ ಎಂದು ಸಚಿವ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಯುವ ರಾಜ್ ಕುಮಾರ್ ಪತ್ನಿ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ನಟಿ ಸಪ್ತಮಿ ಗೌಡ
ಈ ಸಂಬಂಧ ಮಾತನಾಡಿದ ಅವರು,ದಸರಾ ಆನೆಗಳು ನಮ್ಮ ಅಸ್ಮಿತೆ. ಇತರೆ ಆನೆಗಳನ್ನು ಕಳುಹಿಸಿಕೊಡುವ ಬಗ್ಗೆ ಪರಿಶೀಲನೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.
ವಿದ್ಯುತ್ ಸ್ಪರ್ಶಸಿ ಆನೆಗಳ ದುರಂತ ಸಾವು ವಿಚಾರವಾಗಿ ಪ್ರತಿಕ್ರಿಯಿಸಿದ್ದು, ವಿದ್ಯುತ್ ಸ್ಪರ್ಶದಿಂದ ಆನೆಗಳು ಸಾಯುತ್ತಿರುವುದು ದುಃಖದ ಸಂಗತಿ. ಆನೆಗಳ ಸಾವಿನ ಬಗ್ಗೆ ವರದಿ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇವೆ. ಇಂತಹ ಘಟನೆ ಮರುಕಳಿಸದಂತೆ ಕ್ರಮ ವಹಿಸಲು ಸೂಚನೆ ನೀಡಿದ್ದೇನೆ ಎಂದಿದ್ದಾರೆ.
ನಟ ದರ್ಶನ್ ಅರಣ್ಯ ಇಲಾಖೆ ರಾಯಭಾರಿ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ನಮ್ಮ ಇಲಾಖೆಯಲ್ಲಿ ಯಾರೂ ರಾಯಭಾರಿಗಳು ಇಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಚಾಮುಂಡಿ ಬೆಟ್ಟಕ್ಕೆ ರೋಪ್ ವೇ ನಿರ್ಮಾಣ ವಿಚಾರವಾಗಿ ಮಾತನಾಡಿದ್ದು, ರೋಪ್ ವೇ ನಿರ್ಮಾಣ ವಿಚಾರದಲ್ಲಿ ಆತಂಕ ಪಡುವ ಅಗತ್ಯವಿಲ್ಲ. ಪರಿಸರ ಸಂರಕ್ಷಣೆ ಜೊತೆ ಅಭಿವೃದ್ಧಿ ಸಹ ಆಗಬೇಕು ಎಂದು ಹೇಳಿದ್ದಾರೆ.
ಚಾಮರಾಜೇಂದ್ರ ಮೃಗಾಲಯದಲ್ಲಿ ವಾಸಿಗರು ಕ್ಯೂನಲ್ಲಿ ನಿಲ್ಲುವುವುದನ್ನು ತಪ್ಪಿಸುವ ನಿಟ್ಟಿನಲ್ಲಿ ವಾಟ್ಸಾಪ್, ಆನ್ಲೈನ್ನಲ್ಲಿ ಟಿಕೆಟ್ ಖರೀದಿಗೆ ಚಾಲನೆ ನೀಡಲಾಗಿದೆ. ಮೃಗಾಲಯದಲ್ಲಿ ಲೈವ್ ಫೀಡ್ ಉದ್ಘಾಟನೆ ಮಾಡಲಾಗಿದೆ.